ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.
ಆಗ ಶಿಕ್ಷಕರ ಒಪ್ಪಿಗೆ ಮೇರೆಗೆ ವಿಧ್ಯಾರ್ಥಿಯ ಕಾನೂನು ಕೋರ್ಸ್ ಮುಂದುವರಿಯಿತು. ಕೋರ್ಸ್ ಮುಗಿದ ನಂತರ ಶಿಕ್ಷಕರು ಶುಲ್ಕವನ್ನು ಪಾವತಿಸುವಂತೆ ಕೇಳಲು ಆರಂಭಿಸಿದಾಗ ವಿಧ್ಯಾರ್ಥಿಯು ಅವ್ರ ನಡುವೆ ನಡೆದ ಒಪ್ಪಂದವನ್ನು ನೆನಪಿಸಿ ದಿನಗಳನ್ನು ಮುಂದುಡುತ್ತಿದ್ದನು.
ಇದರಿಂದ ಬೇಜಾರಾದ ಶಿಕ್ಷಕನು ವಿಧ್ಯಾರ್ಥಿ ಮೇಲೆ ಕೋರ್ಟ್’ನಲ್ಲಿ ಮೊಕದ್ದೊಮ್ಮೆ ಹೂಡಿದನು. ನಂತರ ವಿಧ್ಯಾರ್ಥಿಯು ಸಹ ಶಿಕ್ಷಕನ ಮೇಲೆ ಮೊಕದ್ದೊಮ್ಮೆ ಹೂಡಿ ಒಬ್ಬರ ಮೇಲೊಬ್ಬರು ವಾದ ಮಾಡಿದರು.
ಶಿಕ್ಷಕ ತನ್ನ ವಾದವನ್ನು ಹೀಗೆ ಹೇಳುತ್ತಾನೆ:-
“ನಾನು ಈ ಪ್ರಕರಣವನ್ನು ಗೆದ್ದರೆ, ನ್ಯಾಯಾಲಯದ ಕಾನೂನು ಪ್ರಕಾರ, ವಿದ್ಯಾರ್ಥಿಯು ಬಾಕಿ ಪಾವತಿಸದೇ ಇರುವ ಕಾರಣದಿಂದ ನನಗೆ ಪಾವತಿಸಬೇಕಿದೆ. ಮತ್ತು ನಾನು ಈ ಪ್ರಕರಣವನ್ನು ಸೋತರೂ ಸಹ , ವಿದ್ಯಾರ್ಥಿ ನನಗೆ ಹಣವನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಒಪ್ಪಂದದ ಪ್ರಕಾರ ಅವರು ನ್ಯಾಯಾಲಯದಲ್ಲಿ ಗೆದ್ದ ಮೊದಲ ಮೊದಲ ಪ್ರಕರಣ … ಹಾಗಾಗಿ ನಾನು ನನ್ನ ಹಣವನ್ನು ಪಡೆಯುತ್ತೇನೆ “.
ಬುದ್ದಿವಂತ ವಿಧ್ಯಾರ್ಥಿಯ ವಾದ:-
ಸಮಾನವಾಗಿ ಪ್ರತಿಭಾವಂತ, ವಿದ್ಯಾರ್ಥಿ ಮತ್ತೆ ಹೇಳುವ ಮೂಲಕ ವಾದಿಸಿದರು: “ನಾನು ಕಾನೂನು ಗೆದ್ದಲ್ಲಿ, ಕಾನೂನಿನ ಪ್ರಕಾರ, ನಾನು ಶಿಕ್ಷಕರಿಗೆ ಏನನ್ನೂ ಪಾವತಿಸಬೇಕಾಗಿಲ್ಲ, ಏಕೆಂದರೆ ನನ್ನ ಯಾವುದೇ ಬಾಕಿ ಇಲ್ಲ ಅಂತನೇ ನಾನು ವಾದ ಮಾಡುತ್ತಿದ್ದೇನೆ.
ಮತ್ತು ನಾನು ಒಂದು ವೇಳೆ ಕೇಸ್ ಸೋತರೆ, ನಾನು ಅವನಿಗೆ ಪಾವತಿಸಬೇಕಾಗಿಲ್ಲ. ಏಕೆಂದರೆ ನಾನು ನನ್ನ ಮೊದಲ ಪ್ರಕರಣವನ್ನು ಇನ್ನೂ ಗೆಲ್ಲಲಿಲ್ಲ …. ಆದ್ದರಿಂದ ಎರಡೂ ರೀತಿಯಲ್ಲಿ, ನಾನು ಶಿಕ್ಷಕನಿಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.
ಇದೊಂದು ವಾದ ವಿವಾದಗಳನ್ನೇ ರೆಕಾರ್ಡ್ ಆಗಿರುವ ದೊಡ್ಡ ವಾದವಾಗಿದೆ.
ಇದು ಪ್ರಾಚೀನ ಗ್ರೀಕ್ ಇತಿಹಾಸದ ಭಾಗವಾಗಿದೆ. ವಕೀಲ ಶಿಕ್ಷಕ ಪ್ರೊಟಾಗೋರಾಸ್ (485-415 BCE) ಮತ್ತು ವಿದ್ಯಾರ್ಥಿ ಯುಥಾಲೋಸ್. ಇದನ್ನು ಪ್ರೊಟೊಗೊರಾಸ್ ಪ್ಯಾರಡಾಕ್ಸ್ ಎಂದು ಕರೆಯಲಾಗುತ್ತದೆ. ಈ ಪ್ರಕರಣವನ್ನು ಇಂದಿಗೂ ಪರಿಹರಿಸಲು ಸಾಧ್ಯವಾಗಿಲ್ಲ.
ಅತ್ಯಂತ ಆಸಕ್ತಿದಾಯಕ ಭಾಗ – ಇದು ಕಾನೂನು ಶಾಲೆಗಳಲ್ಲಿ ತರ್ಕ ಸಮಸ್ಯೆಯಾಗಿ ಇನ್ನೂ ಚರ್ಚಿಸುತ್ತಿದೆ (ಇಂದಿಗೂ ಸಹ)!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ. ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ವಾಗಿದ್ದು, ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ 2 ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ 202ರನ್ಗಳಿಗೆ ಸರ್ವ ಪತನವಾಗಿದೆ.ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು.ನಂತರ ಬಂದ ಪುಜಾರ (3), ರಹಾನೆ (0) ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ವಿಕೆಟ್ ಕೈಚೆಲ್ಲಿದರು.ಹನಮ ವಿಹಾರಿ ರಾಹುಲ್ ಜೊತೆಗೂಡಿ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ಸೂಚನೆ ನೀಡುವಾಗ ವಿಹಾರಿ (20) ಔಟಾದರು. ನಂತರ…
![]()
ಕನ್ನಡ ಚಿತ್ರರಂಗ ಕಂಡ ಅನೇಕ ದಿಗ್ಗಜರಲ್ಲಿ, ಈಗಲೂ ಕೂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ
ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.
ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳು ಲಯಬದ್ಧವಾಗಿ ತಾಯಿಯ ಹೃದಯದ ಬಡಿತವನ್ನು ಕೇಳುತ್ತಾ, ಅದರಲ್ಲೇ ತನ್ಮಯವಾಗಿರುತ್ತದೆ. ತಾಯಿಯ ಎದೆಬಡಿತದ ಶಬ್ಧ ತನಗೆ ರಕ್ಷಣೆ ಎಂದೇ ಮಗು ಭಾವಿಸಿರುತ್ತದೆ.
ಮಹಾಭಾರತದ ಒಂದು ಯುದ್ದದ ಸನ್ನಿವೇಶದಲ್ಲಿ ಅರ್ಜುನನು, ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಾನ್ ಶ್ರೀ ಕೃಷ್ಣನು, ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸುತ್ತಾನೆ.