ಸಿನಿಮಾ

ಅಂಬರೀಶ್ ರವರ ಅಂತಿಮ ದರ್ಶನ ಪಡೆಯಲು ದರ್ಶನ್ ತುಂಬಾ ಲೇಟಾಗಿ ಬಂದಿದ್ದೇಕೆ ಗೊತ್ತಾ?ಏನೆಲ್ಲಾ ಕಷ್ಟಗಳನ್ನು ನಿವಾರಿಸಿಕೊಂಡು ಬಂದು ದರ್ಶನ ಪಡೆದಿದ್ದಾರೆ ಗೊತ್ತಾ ಚಾಲೆಂಜಿಂಗ್ ಸ್ಟಾರ್!

881

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ.

ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು.

ಬಹುಶಃ ದರ್ಶನ್ ಅವರು ಭಯ ಪಡುವ ಏಕೈಕ ವ್ಯಕ್ತಿ ಎಂದರೆ ಅದು ಅಂಬರೀಶ್ ಅವರೇ ಎನ್ನಬಹುದು.. ಅಷ್ಟು ಪ್ರೀತಿ.. ಅಷ್ಟು ಗೌರವ.. ಆ ಸಂಬಂಧವನ್ನು ಹೇಳಲು ಅಸಾಧ್ಯ..ಸುಮಲತಾ ಅವರೂ ಅಷ್ಟೇ ಅಭಿಶೇಕ್ ಹಾಗೂ ದರ್ಶನ್ ಅವರನ್ನು ಒಂದೇ ರೀತಿಯಾಗಿ ನೋಡುತ್ತಿದ್ದರು..‌ ಅಷ್ಟು ಆತ್ಮೀಯತೆ ಪ್ರೀತಿ ಇತ್ತು..ಅದೇ ರೀತಿಯಾಗಿ ದರ್ಶನ್ ಅವರೂ ಕೂಡ ಸುಮಲತಾ ಅವರನ್ನು ಮದರ್ ಇಂಡಿಯಾ ಎನ್ನು ತ್ತಿದ್ದರು..

ಅಂಬರೀಶ್ ಅವರು ಶನಿವಾರ ರಾತ್ರಿ ಇಹಲೋಕ ತ್ಯಜಿಸಿದಾಗ ದರ್ಶನ್ ಅವರು ಯಜಮಾನ ಸಿನಿಮಾದ ಶೂಟಿಂಗ್ ನಿಮಿತ್ತ ಸ್ವೀಡನ್ ನಲ್ಲಿದ್ದರು.. ವಿಷಯ ತಿಳಿಯುತ್ತಿದ್ದಂತೆ ಅರಗಿಸಿಕೊಳ್ಳಲಾಗದೆ ಎಲ್ಲವನ್ನು ರದ್ದುಗೊಳಿಸಿ ಬೆಂಗಳೂರಿಗೆ ಬರಲು ತಯಾರಾದರು.. ಆದರೆ ದರ್ಶನ್ ಅವರಿಗೆ ಅಲ್ಲಿಯೂ ಕೂಡ ದುರ್ವಿಧಿ ಟಿಕೇಟ್ ಸಿಗದೆ ಪರದಾಡಿ ನಂತರ ಹೇಗೋ ಕಷ್ಟಪಟ್ಟು ಟಿಕೇಟ್ ಪಡೆದು ಇಂದು ಬೆಳಿಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ..

ತಮ್ಮ ಅಪ್ಪಾಜಿಯ ಅಂತ್ಯ ಸಂಸ್ಕಾರಕ್ಕೆ ತಡವಾಗಿ ಬರಲು ಕಾರಣ ಏನು ಗೊತ್ತಾ?

ಭಾರತ ಹಾಗೂ ಸ್ವೀಡನ್ ದೇಶಕ್ಕೆ ನೇರವಾದ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್‍ನಿಂದ ಭಾರತಕ್ಕೆ ಅಂದಾಜು 7 ಸಾವಿರ ಕಿ.ಮೀ ದೂರವಿದೆ. ಹೀಗಾಗಿ ದರ್ಶನ್ ಸ್ವೀಡನ್‍ನಿಂದ ದುಬೈಗೆ ಬಂದು, ದುಬೈನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬಂದಿದ್ದಾರೆ.
ಸ್ವೀಡನ್‍ನಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಹಲವು ದೇಶಗಳನ್ನು ದಾಟಿ ಭಾರತಕ್ಕೆ ಬರಬೇಕು.

ಮೊದಲೇ ಟಿಕೆಟ್ ಬುಕ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಶನಿವಾರ ರಾತ್ರಿಯೇ ತುರ್ತಾಗಿ ಭಾನುವಾರ ವಿಮಾನ ಟಿಕೆಟ್ ಬೇಕಾದರೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ನಮಗೆ ಬೇಕಾದ ಸಮಯಕ್ಕೆ ಸಿಗುವುದು ಬಹಳ ಕಷ್ಟ. ಈ ಎಲ್ಲ ಕಷ್ಟಗಳನ್ನು ನಿವಾರಿಸಿ ದರ್ಶನ್ ಸೋಮವಾರ ಅಂದರೆ ಇಂದು ಬೆಳಗ್ಗೆ ಬೆಂಗಳೂರು ತಲುಪಿ ತಮ್ಮ ಪ್ರೀತಿಯ ಅಪ್ಪಾಜಿಯ ದರ್ಶನ ಮಾಡಿದ್ದರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಾವನನ್ನು ಸ್ವಂತ ಮಾಡಿಕೊಳ್ಳಲು 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದ ತಂಗಿ …!

    19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ. ಬಾತ್‍ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ….

  • ಸಿನಿಮಾ

    ಈ ನಟ ‘ಮೆಗಾ ಸ್ಟಾರ್’ ಆದ್ರೂ ಈಗಲೂ ಬೀಡಿ ಸೇದುತ್ತಾರೆ..!ಯಾರು ಗೊತ್ತಾ..?ತಿಳಿಯಲು ಈ ಲೇಖನ ಓದಿ

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸೇದುವವರಿಗೆ ಯಾವುದಾದರೇನಂತೆ..? ಬೀಡಿ, ಸಿಗರೇಟ್. ಜೇಬಿನಲ್ಲಿ ಹಣ ತುಂಬಿರುವಾಗ ಸಿಗರೇಟ್ ನಂತಹ ದುಬಾರಿಗಳೇ ಬೇಕಾಗುತ್ತದೆ. ಆದರೆ ಈ ನಟ ಹಾಗಲ್ಲ. ಇವರು ಮೆಗಾ ಸ್ಟಾರ್ ನಟ. ಹಣ, ಪ್ರಚಾರ ಇದ್ದರೂ ಸಿಂಪ್ಲಿಸಿಟಿ ಫಾಲೋ ಮಾಡುತ್ತಾರೆ. ಮಲಯಾಳಂನ ಮೆಗಾ ಸ್ಟಾರ್ ನಟ ಮಮ್ಮೂಟಿ ಇಲ್ಲಿಯವರೆಗೂ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಅಲ್ಲದೇ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಕೋಟಿ,…

  • ರಾಜಕೀಯ

    ನೆಹರೂ, ಇಂದಿರಾಗಾಂಧಿ ನಂತರ ಸ್ಪಷ್ಟ ಬಹುಮತ ಪಡೆದ ಮೊದಲ ಪ್ರಧಾನಿ ನರೇಂದ್ರ ಮೋದಿ…!

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಾಜಿ ಪ್ರಧಾನಿಗಳಾದ ದಿವಂಗತ ಜವಹರ್ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಹೌದು. 48 ವರ್ಷಗಳ ಬಳಿಕ ಸ್ಪಷ್ಟ ಬಹುಮತದ ಬಳಿಕ ಮೋದಿ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದೇಶದೆಲ್ಲೆಡೆ ಎದ್ದಿದ್ದ ಮೋದಿ ಸುನಾಮಿಗೆ…

  • ಸಾಧನೆ, ಸುದ್ದಿ

    ಸೆಮಿಫೈನಲ್‍ನಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್

    ಅಂಟರ್ 19 ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು…

  • ಜ್ಯೋತಿಷ್ಯ

    ಶಿವನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ಸ್ನೇಹಿತರು ನಿಮ್ಮ…