ಸಿನಿಮಾ

ತನ್ನ ರಾಜಕೀಯ ಗುರು ಅಂಬರೀಶ್ ರವರನ್ನೇ ಮರೆತ್ರಾ ರಮ್ಯಾ!ಇನ್ನೂ ದರ್ಶನಕ್ಕೆ ರಮ್ಯಾ ಬಾರದಿರುವುದು ಏಕೆ?

342

ಚಂದನವನದ ರೆಬೆಲ್, ಕಲಿಯುಗದ ಕರ್ಣ ಅಂಬರೀಶ್ ರವರಿಗೆ ಭಾರತೀಯ ಚಿತ್ರರಂಗ ಸೇರಿದಂತೆ, ರಾಜಕ್ಕಿಯ ನಾಯಕರು ಹಲವಾರು ದಿಗ್ಗಜರು ಕಂಬನಿ ಮಿಡಿದಿದ್ದಾರೆ.ಅಷ್ಟಲ್ಲದೇ ಕನ್ನಡ ಚಿತ್ರರಂಗದ ಪುನಿತ್, ಯಶ್, ಶಿವಣ್ಣ, ಸುದೀಪ್, ಉಪೇಂದ್ರ ದರ್ಶನ್ ಸೇರಿದಂತೆ ಎಲ್ಲಾ ಟಾಪ್ ಸ್ಟಾರ್ ಗಳು ಅಂತಿಮ ದರ್ಶನ ಮಾಡಿದ್ದಾರೆ. ಇದರ ಜೊತೆಗೆ ರಜನಿಕಾಂತ್ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶರತ್ ಕುಮಾರ್ ಇನ್ನೂ ಹಲವಾರು ಗಣ್ಯ ಮಿತ್ರರು ಅವರ ಅಗಲಿಕೆಗೆ ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದ್ದಾರೆ.

ಇದರ ನಡುವೆ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಬಾರದಿರುವುದು ಅಂಬಿ ಅಭಿಮಾನಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.ತಮ್ಮ ಆಕ್ರೋಶವನ್ನು ಸೋಶಿಯಲ್ ಮಿಡಿಯಾಗಳಲ್ಲಿ ತೋಡಿಕೊಂಡಿದ್ದಾರೆ.ಅಂಬರೀಶ್ ರವರು ರಮ್ಯಾರವರಿಗೆ ರಾಜಕೀಯ ಗುರು ಎಂದೇ ಹೇಳಬಹುದು.ಅವರು ರಮ್ಯಾಗೆ ರಾಜಕೀಯವಾಗಿ ದಾರಿ ತೋರಿಸಿದ್ದಾರೆ. ಹೀಗಾಗಿ ಅಂಬಿ ಅಂತಿಮ ದರ್ಶನಕ್ಕಾದರೂ ರಮ್ಯಾ ಮಂಡ್ಯಕ್ಕೆ ಬರಬೇಕಿತ್ತು.

ಅಲ್ಲದೇ ಓರ್ವ ಮಂಡ್ಯದ ಮಗಳಾಗಿ ರಮ್ಯಾ ಮಂಡ್ಯಕ್ಕೆ ಆಗಮಿಸಬೇಕಿತ್ತು. ಆದರೆ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ವಿರುದ್ಧವೇ ಇನ್ನೂ ದ್ವೇಷ ಸಾಧಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.ಅಂಬಿ ನಿಧನರಾಗಿ ಒಂದು ದಿನಕಳೆದರೂ ಅಂತಿಮ ದರ್ಶನಕ್ಕೆ ರಮ್ಯಾ ಬಂದಿಲ್ಲ. ಘಟಾನುಘಟಿ ನಾಯಕರು, ಸಿನಿಮಾ ತಾರೆಯರು ಬಂದು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ರಮ್ಯಾ ಅವರೆಲ್ಲರಿಗಿಂತ ಬ್ಯುಸಿ ಇದ್ದಾರಾ ಎಂದು ಪ್ರಶ್ನಿಸುವ ಮೂಲಕ ಅಂಬಿ ಅಭಿಮಾನಿಗಳು ರಮ್ಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಅಂಬರೀಶ್ ಮತ್ತು ರಮ್ಯಾರವರು ಮಂಡ್ಯದವರಾಗಿದ್ದಾರೆ.ರಮ್ಯಾ ಚಿತ್ರ ರಂಗ ಮತ್ತು ರಾಜಕೀಯದಲ್ಲಿ ಅತೀ ಎತ್ತರಕ್ಕೆ ಬೆಳೆದಿದ್ದಾರೆ. ಅಸಲಿಗೆ ರಮ್ಯಾ ರಾಜಕೀಯದಲ್ಲಿ ಬೆಳೆಯಲು ಅಂಬರೀಶ್ ರವರೇ ಕಾರಣ. ಹೀಗಾಗಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತಂದಾಗ ರಮ್ಯಾ ಕೂಡ ತವರು ಜಿಲ್ಲೆಗೆ ಬಂದು ಅಂತಿಮ ದರ್ಶನ ಪಡೆಯುತ್ತಾರೆ ಅಂತ ಅಭಿಮಾನಿಗಳು ನಂಬಿದ್ದರು. ಆದರೆ ಅಲ್ಲಿಗೂ ರಮ್ಯಾ ಬರಲಿಲ್ಲ. ಈ ದಿನ ಕಂಠಿರವ ಸ್ಟುಡಿಯೋದಲ್ಲಿ ನಡೆಯಲಿರುವ ಅಂತ್ಯಕ್ರಿಯಗೆ ಬರುತ್ತಾರಯೇ ನೋಡಬೇಕಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ