ಸುದ್ದಿ

ಮುಂದಿನ ಪ್ರಧಾನಿ ಯಾರು? ಉತ್ತರವನ್ನು ಹೇಳಿ ಬಂಪರ್ ಆಫರ್ ಗೆಲ್ಲಿ..!

82

ಮೇ 23ರ ಗುರುವಾರದಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗಗಳಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಷೇರುಪೇಟೆಯ ಮೇಲೆ ಪ್ರಭಾವ ಬೀರಿದ್ದು, ಹೂಡಿಕೆದಾರರು ಬೃಹತ್ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಆಹಾರ ವಿತರಣಾ ಸಂಸ್ಥೆ ಜೋಮ್ಯಾಟೊ (Zomato) ಸಾರ್ವಜನಿಕರಿಗೆ ಭರ್ಜರಿ ಉಡುಗೊರೆ ನೀಡುವ ಘೋಷಣೆ ಮಾಡಿದೆ. ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನಸಾಮಾನ್ಯರು ಹೇಳಬೇಕು. ಅಂದರೆ ಮೇ 23ರ ನಂತರ ಯಾರು ಪ್ರಧಾನಿ ಪಟ್ಟಕ್ಕೆ ಏರುತ್ತಾರೆ ಎಂಬುದನ್ನು ಜನಸಾಮಾನ್ಯರು ತಿಳಿಸಬೇಕು. ಅವರ ಊಹೆ ನಿಜವಾದರೆ ಪುಡ್ ಆರ್ಡರ್ ಮಾಡುವಾಗ ಕ್ಯಾಶ್ಬ್ಯಾಕ್ ಸಿಗಲಿದೆ.

Zomato ಎಲೆಕ್ಷನ್ ಲೀಗ್ ಇದಕ್ಕೆ Zomato ಎಲೆಕ್ಷನ್ ಲೀಗ್ ಎಂದು ಹೆಸರಿಡಲಾಗಿದೆ. ಮುಂದಿನ ಪ್ರಧಾನ ಮಂತ್ರಿಯನ್ನು ಸರಿಯಾಗಿ ಊಹಿಸುವವರಿಗೆ ಕ್ಯಾಶ್ಬ್ಯಾಕ್ ಸಿಗಲಿದೆ ಎಂದು ಕಂಪನಿ ಹೇಳಿದೆ. ಮೇ ೨೩ಕ್ಕೆ ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಮಾತ್ರ ಕ್ಯಾಶ್ಬ್ಯಾಕ್ ನೀಡಲಾಗುವುದು.

ಗ್ರಾಹಕರು ತಮ್ಮ ಆರ್ಡರ್ ಮೇಲೆ ಪ್ರತಿ ಬಾರಿಯೂ 40 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಅವರ ಊಹೆ ನಿಜವಾಗಿದ್ದರೆ ಶೇ. 30ರಷ್ಟು ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ ಎಂದು ಕಂಪೆನಿ ಹೇಳಿದೆ. ಈ ಹಿಂದೆ Zomato ಪ್ರೀಮಿಯರ್ ಲೀಗ್ ನಡೆಸಿದ್ದ ಸಂಸ್ಥೆ, ಐಪಿಎಲ್ ನಲ್ಲಿ ಯಾವ ತಂಡ ಪ್ರಶಸ್ತಿ ಬಾಚಿಕೊಳ್ಳಲಿದೆ ಎನ್ನುವುದನ್ನು ಊಹಿಸಿದ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ನೀಡಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ