ಸುದ್ದಿ

ಮುಂದಿನ ಪ್ರಧಾನಿ ಯಾರು? ಉತ್ತರವನ್ನು ಹೇಳಿ ಬಂಪರ್ ಆಫರ್ ಗೆಲ್ಲಿ..!

75

ಮೇ 23ರ ಗುರುವಾರದಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗಗಳಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಷೇರುಪೇಟೆಯ ಮೇಲೆ ಪ್ರಭಾವ ಬೀರಿದ್ದು, ಹೂಡಿಕೆದಾರರು ಬೃಹತ್ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಆಹಾರ ವಿತರಣಾ ಸಂಸ್ಥೆ ಜೋಮ್ಯಾಟೊ (Zomato) ಸಾರ್ವಜನಿಕರಿಗೆ ಭರ್ಜರಿ ಉಡುಗೊರೆ ನೀಡುವ ಘೋಷಣೆ ಮಾಡಿದೆ. ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನಸಾಮಾನ್ಯರು ಹೇಳಬೇಕು. ಅಂದರೆ ಮೇ 23ರ ನಂತರ ಯಾರು ಪ್ರಧಾನಿ ಪಟ್ಟಕ್ಕೆ ಏರುತ್ತಾರೆ ಎಂಬುದನ್ನು ಜನಸಾಮಾನ್ಯರು ತಿಳಿಸಬೇಕು. ಅವರ ಊಹೆ ನಿಜವಾದರೆ ಪುಡ್ ಆರ್ಡರ್ ಮಾಡುವಾಗ ಕ್ಯಾಶ್ಬ್ಯಾಕ್ ಸಿಗಲಿದೆ.

Zomato ಎಲೆಕ್ಷನ್ ಲೀಗ್ ಇದಕ್ಕೆ Zomato ಎಲೆಕ್ಷನ್ ಲೀಗ್ ಎಂದು ಹೆಸರಿಡಲಾಗಿದೆ. ಮುಂದಿನ ಪ್ರಧಾನ ಮಂತ್ರಿಯನ್ನು ಸರಿಯಾಗಿ ಊಹಿಸುವವರಿಗೆ ಕ್ಯಾಶ್ಬ್ಯಾಕ್ ಸಿಗಲಿದೆ ಎಂದು ಕಂಪನಿ ಹೇಳಿದೆ. ಮೇ ೨೩ಕ್ಕೆ ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಮಾತ್ರ ಕ್ಯಾಶ್ಬ್ಯಾಕ್ ನೀಡಲಾಗುವುದು.

ಗ್ರಾಹಕರು ತಮ್ಮ ಆರ್ಡರ್ ಮೇಲೆ ಪ್ರತಿ ಬಾರಿಯೂ 40 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಅವರ ಊಹೆ ನಿಜವಾಗಿದ್ದರೆ ಶೇ. 30ರಷ್ಟು ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ ಎಂದು ಕಂಪೆನಿ ಹೇಳಿದೆ. ಈ ಹಿಂದೆ Zomato ಪ್ರೀಮಿಯರ್ ಲೀಗ್ ನಡೆಸಿದ್ದ ಸಂಸ್ಥೆ, ಐಪಿಎಲ್ ನಲ್ಲಿ ಯಾವ ತಂಡ ಪ್ರಶಸ್ತಿ ಬಾಚಿಕೊಳ್ಳಲಿದೆ ಎನ್ನುವುದನ್ನು ಊಹಿಸಿದ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ನೀಡಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ವಿದವಾದ ಹಣ್ಣುಗಳಿದ್ದರೂ ಮೊಸ್ರನ್ನವನ್ನು ಆರಿಸಿಕೊಂಡ ನಮ್ಮ ಹನುಮಾ…..!

    ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು. ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ ಇಲ್ಲದೆ ಸ್ಥಳಕ್ಕೆ ಬಂದ ಕೋತಿ,…

  • ಸುದ್ದಿ

    ಅಪರಿಚಿತ ವ್ಯಕ್ತಿಗಳಿಂದ ಮೊಬೈಲ್‌ ಚಾರ್ಜರ್‌ ಪಡೆಯುವ ಮುನ್ನ ಎಚ್ಚರ…!

    ಇಂದಿನ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಮೊಬೈಲ್‌ ಚಾರ್ಜರ್‌ನ್ನು ಇನ್ನೊಬ್ಬರಿಂದ ಪಡೆಯುವುದು ಸಹಜ. ಇನ್ನೇನು ಸ್ವಿಚ್‌ ಆಫ್‌ ಆಗುತ್ತದೆ ಎನ್ನುವ ವೇಳೆ ಇನ್ನೊಬ್ಬರಿಂದ ಚಾರ್ಜರ್‌ ಕೇಳುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಪಡೆಯುವಾಗ ಎಚ್ಚರದಿಂದ ಇರಿ. ಹೌದು, ಚಾರ್ಜರ್‌ ಪಡೆಯುವುದರಿಂದ ಏನು ಸಮಸ್ಯೆ ಎಂದು ಯೋಚಿಸುತ್ತಿದ್ದರೆ, ಈ ರೀತಿ ಚಾರ್ಜಿಂಗ್‌ ಕೇಬಲ್‌ ಪಡೆಯುವುದರಿಂದಲೂ ಮೊಬೈಲ್‌ ಗೆ ವೈರಸ್‌ ಬರುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ವರದಿ ಹೊರ ಬಿದಿದ್ದೆ. ಐಬಿಎಂ ಸೆಕ್ಯುರಿಟಿಯ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. ಇನ್ನೊಬ್ಬರ…

  • ಸುದ್ದಿ

    ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಹೋಗದೇ ಮನೆಯಲ್ಲಿ ಕೂತಿದ್ದಾರೆ ಮಾಜಿ ಸಿಎಂ!ಕಾರಣ ಏನು ಗೊತ್ತಾ?ಈ ಸುದ್ದಿ ನೋಡಿ

    ಲೋಕಸಭಾ ಚುನಾವಣೆಯಲ್ಲಿ ತಾವು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಮಣೆ ಹಾಕಿರುವುದರಿಂದ ಹೈಕಮಾಂಡ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳದೆ ಕಳೆದ ಮೂರು ದಿನಗಳಿಂದ ಮನೆಯಲ್ಲಿಯೇ ಇದ್ದಾರೆಂದು ಹೇಳಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರ ಬದಲಿಗೆ ಅಣ್ಣಾ ಸಾಹೇಬ ಜೊಲ್ಲೆಯವರಿಗೆ ಟಿಕೆಟ್ ನೀಡಿರುವುದು ಯಡಿಯೂರಪ್ಪನವರಿಗೆ…

  • ಸುದ್ದಿ

    IMA ವಿರುದ್ಧ 11 ಸಾವಿರಕ್ಕು ಹೆಚ್ಚು ದಾಕಲಾದ ಕಂಪ್ಲೆಂಟ್…..!

    ಐಎಂಎ ಜ್ಯುವೆಲ್ಲರ್ಸ್ ನಿಂದ ಮೋಸಕ್ಕೊಳಗಾಗಿರುವವರ ಕಂಪ್ಲೆಂಟ್ ಸಂಖ್ಯೆ 11 ಸಾವಿರಕ್ಕೇರಿದೆ. ಶಿವಾಜಿನಗರ ಸಮದ್ ಹೌಸ್ ಚೌಟ್ರಿಯಲ್ಲಿ ಬಂಡಲ್ ಬಂಡಲ್‍ಗಟ್ಟೆ ಕಂಪ್ಲೆಂಟ್‍ಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ. ಎಸ್‍ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಸಲೀಂ ನೇಮಕ ಬಹುತೇಕ ಖಚಿತ ಅಂತ ತಿಳಿದು ಬಂದಿದೆ. ಮುಸ್ಲಿಂ ಸಮುದಾಯದವರೇ ಆಗಿರುವ ಸಲೀಂ ನಿಯೋಜಿಸಿದ್ರೆ ಉತ್ತಮ, ತನಿಖೆಗೆ ಸಹಕಾರಿಯಾಗುತ್ತದೆ ಅನ್ನೋದು ಗೃಹ ಸಚಿವ ಎಂ.ಬಿ. ಪಾಟೀಲರ ಭಾವನೆ. ಹೀಗಾಗಿ, ಇಂದು ಗೃಹ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ. ಒಂದು ವೇಳೆ, ಸಲೀಂ ಹಿಂದೆ ಸರಿದರೆ, ಎಡಿಜಿಪಿ…

  • ಸುದ್ದಿ

    ದಿನ ಬೈಗಳ – ರೊಚ್ಚಿಗೆದ್ದು ತಂದೆಯನ್ನು 25 ಪೀಸ್ ಮಾಡಿ 4 ಬ್ಯಾಗ್‍ನಲ್ಲಿ ತುಂಬಿ ಪ್ಯಾಕ್ ಮಾಡಿದ ಮಗ…!

    ನವದೆಹಲಿ: ಪ್ರತಿ ದಿನ ಬೈಯುತ್ತಿದ್ದಾರೆ ಎಂದು ಕೋಪದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆಗೈದು ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಅಮನ್(22) ತಂದೆಯನ್ನೇ ಕೊಲೆ ಮಾಡಿದ ಮಗ. ಕೆಫೆ ಮಾಲೀಕನಾಗಿರುವ ಅಮನ್ ತಂದೆ ಸಂದೇಶ್ ಅಗರ್ ವಾಲ್(48) ದಿನ ಬೈಯುತ್ತಿದ್ದರು ಎಂದು ಕೊಲೆ ಮಾಡಿದ್ದಾನೆ. ಅಮನ್ ತನ್ನ ತಂದೆ ಸಂದೇಶ್‍ರನ್ನು ಕೊಲೆ ಮಾಡಿದ ನಂತರ ಅವರ ದೇಹವನ್ನು 25 ಪೀಸ್ ಮಾಡಿ ನಾಲ್ಕು ಬ್ಯಾಗ್‍ನಲ್ಲಿ ತುಂಬಿಸಿದ್ದಾನೆ. ಈ ವಿಷಯ ತಿಳಿದ ಪೊಲೀಸರು…

  • ಆರೋಗ್ಯ

    ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು..!ತಿಳಿಯಲು ಈ ಲೇಖನ ಓದಿ..

    ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.