ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ.

ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಸಿಗ್ನಲ್‌ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿ. ಮೀ.ವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆ ಎಂದು ಘೋಷಿಸಿದರು.

ಮೋದಿ ವೀಕ್ಷಣೆ: ಇಸ್ರೋದ ಕೌತುಕ ಕ್ಷಣವನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದರು. ವಿಜ್ಞಾನಿಗಳ ಜತೆ ಕೂತು ವೀಕ್ಷಿಸಿದರು. ಸಿಗ್ನಲ್ ಕಡಿತಗೊಂಡ ಬಳಿಕ ವಿಜ್ಞಾನಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ನಮ್ಮ ವಿಜ್ಞಾನಿಗಳು ದೇಶದ ಹೆಮ್ಮೆ. ನಿಮ್ಮೊಂದಿಗೆ ನಾವಿದ್ದೇವೆ. ಮುಂದೆ ಹೆಜ್ಜೆ ಹಾಕೋಣ ಎಂದು ಹೇಳಿದರು. ಬಳಿಕ ಚಂದ್ರಯಾನ ವೀಕ್ಷಿಸಲು ಆಗಮಿಸಿದ್ದ ಮಕ್ಕಳ ಜತೆ ಸಂವಾದ ನಡೆಸಿದರು.ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಮೇಲೆ ಸಾಫ್ಟ್‌ಲ್ಯಾಂಡಿಂಗ್ ಮಾಡುವುದು ರೋಚಕ ಮತ್ತು ಭಯಾನಕ ಕ್ಷಣವಾಗಿದ್ದು, ಇದೊಂದು ರೀತಿ ಮಗುವನ್ನು ತೊಟ್ಟಿಲಿನಲ್ಲಿ ಹಾಕುವ ರೀತಿಯ ಪ್ರಕ್ರಿಯೆಯಾಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದರು. ಹೀಗಾಗಿ ವಿಜ್ಞಾನಿಗಳಲ್ಲಿ ವಿಶ್ವಾಸವಿದ್ದರೂ ಎಲ್ಲೋ ಒಂದು ಕಡೆ ಆತಂಕವೂ ಇತ್ತು.

ಏನಾಯ್ತು? :ಚಂದ್ರನ ಮೇಲ್ಮೈನಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡುತ್ತಿದ್ದ ಲ್ಯಾಂಡರ್ ಅನ್ನು ತಡರಾತ್ರಿ 1.35ಕ್ಕೆ ಇಳಿಸುವ ರಫ್ ಬ್ರೇಕಿಂಗ್ ಹಂತವನ್ನು ನೆರವೇರಿಸಲಾಯಿತು. ನಂತರ 10 ನಿಮಿಷಗಳ ನಂತರ 7 ಕಿ.ಮೀ. ಎತ್ತರಕ್ಕೆ ಇಳಿಸುವ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಡೆಯಿತು. ನಂತರ ಲೋಕಲ್ ನೇವಿಗೇಶನ್ ಆರಂಭವಾಗಿ, ಲ್ಯಾಂಡರ್ ಪೋಟೋವನ್ನು ಇಸ್ರೋಗೆ ಕಳುಹಿಸುವ ಪ್ರಕ್ರಿಯೆ ನಡೆಯಬೇಕಿತ್ತು. ಬಳಿಕ ಲ್ಯಾಂಡರ್ ಚಂದ್ರನ ಮೇಲೆ ನಿಧಾನವಾಗಿ ಇಳಿಯಬೇಕಿತ್ತು. ಆದರೆ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಂತರ ಲ್ಯಾಂಡರ್ ಸಂಪರ್ಕ ಕಡಿದುಹೋಯಿತು. ಇಸ್ರೋ ಟಿವಿ ಮಾನಿಟರ್‌ಗಳಲ್ಲಿ ಲ್ಯಾಂಡರ್ ನಿರ್ದಿಷ್ಟ ಪಥ ಬಿಟ್ಟು ಬೇರೆಡೆ ಚಲಿಸಿದ ಬಗ್ಗೆ ಕಾಣಿಸುತ್ತಿತ್ತು. ಈ ವೇಳೆ ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ಕೆಲ ಹೊತ್ತು ಕಾದರೂ ಸಂಪರ್ಕ ಸಿಗಲಿಲ್ಲ. ಆಗ ಇಸ್ರೋ ಅಧ್ಯಕ್ಷ ಶಿವನ್ ಅವರು ಸಿಗ್ನಲ್ ಕಡಿತಗೊಂಡಿದೆ. ಡೇಟಾ ವಿಶ್ಲೇಷಿಸುತ್ತೇವೆ ಎಂದು ಹೇಳಿದರು.
ಜು.22ರಂದು ಆಂಧ್ರದ ಶ್ರೀಹರಿಕೋಟ ನೆಲೆಯಿಂದ ಜಿಎಸ್ ಎಲ್‌ವಿ ರಾಕೆಟ್ ಮೂಲಕ ಚಂದ್ರಯಾನ-2 ನೌಕೆ ಉಡಾವಣೆಯಾಗಿತ್ತು. ಈ ನೌಕೆಯಲ್ಲಿ ಆರ್ಬಿಟರ್, ರೋವರ್ ಅನ್ನು ಒಡಲಲ್ಲಿಟ್ಟುಕೊಂಡ ಲ್ಯಾಂಡರ್ ಇದ್ದವು. ಸೆ.2ರಂದು ಗಣೇಶ ಹಬ್ಬದ ದಿನದಂದು ಆರ್ಬಿಟರ್ ಹಾಗೂ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು
ಸಾಫ್ಟ್ ಲ್ಯಾಂಡಿಂಗ್ ಆಗ ಹುಟ್ಟಿದ ಮಗುವಿದ್ದಂತೆ: ಸಾಫ್ಟ್‌ಲ್ಯಾಂಡಿಂಗ್ ನಮಗೆ ಹೊಸದಾದ ಹಾಗೂ ಸಂಕೀರ್ಣತೆಯ ಪ್ರಕ್ರಿಯೆ. 15 ನಿಮಿಷವು ನಮಗೆ ಭಯಾನಕ. ಇದೊಂದು ರೀತಿ ಯಾರೋ ಒಬ್ಬರು ಆಗಷ್ಟೇ ಹುಟ್ಟಿದ ಮಗುವನ್ನು ಅನಿರೀಕ್ಷಿತವಾಗಿ ನಿಮ್ಮ ಕೈಗೆ ಇಟ್ಟಂತೆ. ಅಗತ್ಯದ ಸಹಾಯವಿಲ್ಲದೆ ಮಗುವನ್ನು ಎತ್ತಿಕೊಳ್ಳಲು ನಿಮ್ಮಿಂದ ಸಾಧ್ಯವೇ? ಸಹಾಯವಿಲ್ಲದೆ ಮಗುವನ್ನು ಎತ್ತಿಕೊಂಡರೆ, ಆ ಕಡೆಯಿಂದ ಈ ಕಡೆಗೆ ಮಗು ಅಲ್ಲಾಡುತ್ತದೆ. ಅದಕ್ಕಾಗಿ ಮಗುವನ್ನು ನಾವು ಹಿಡಿದಿಟ್ಟುಕೊಳ್ಳಬೇಕು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್‌ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು. ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ…
ಇಂಟರ್‌ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್‌ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಖುಷಿಯಾಗುತ್ತಾರೆ. ಅಲ್ಲದೆ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡುತ್ತಾರೆ. ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮರಳುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದ್ದು, ಸೋಮವಾರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಪ್ಟಿ ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ ಇ 871.9 ಅಂಕಗಳ ಜಿಗಿತವನ್ನು ದಾಖಲಿಸಿದ್ದು, ಸೋಮವಾರ…
ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….