ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಣಿ ಪದ್ಮಿನಿ 13ನೇ ಶತಮಾನದ ರಾಜಸ್ಥಾನದ ಮೇವಾಡ್ ಸಂಸ್ಥಾನ (ಈಗಿನ ಚಿತ್ತೋಡಗಢ, ರಾಜಸ್ಥಾನ) ರಾಜ ರಾವಲ್ ರತನ ಸಿಂಗ್ ನ ರಾಣಿಯಾಗಿದ್ದಳು.ರಾಣಿ ಪದ್ಮಿನಿಯು ತುಂಬಾ ಸೌಂದರ್ಯವತಿಯಾಗಿದ್ದಳು ಕೂಡ. ಆಗ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ & ಸಲಿಂಗಕಾಮಿಯೂ ಆಗಿದ್ದ.

ಅಲ್ಲಾವುದ್ದೀನ್ ಖಿಲ್ಜಿ ಬರೆದ ಆ ಪತ್ರದಲ್ಲಿ ಏನಿತ್ತು..?
ಆತನಿಗೆ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಹೇಗೋ ತಿಳಿದು ಆಕೆಯನ್ನ ತನ್ನ ಕಾಮತೃಷೆಗಾಗಿ ಬಳಸಿಕೊಳ್ಳಬೇಕೆಂದು ಆಸೆಯಾದಾಗ ಆತ ಮಾಡಿದ ಕುತಂತ್ರವೆಂದರೆ ಆತ ಮೇವಾಡಕ್ಕೆ ಪತ್ರವೊಂದನ್ನ ಬರೀತಾನೆ. “ರಕ್ಷಾ ಬಂಧನ ಸದ್ಯದಲ್ಲೇ ಇರೋದ್ರಿಂದ ನಾನು ನಿನ್ನ(ರಾವಲ್ ರತನ ಸಿಂಗ್) ಹೆಂಡತಿ(ರಾಣಿ ಪದ್ಮಿನಿ)ಯನ್ನ ತಂಗಿಯಂತೆ ಸ್ವೀಕರಿಸಿದ್ದೇನೆ, ರಕ್ಷಾಬಂಧನಕ್ಕೆ ನಿನ್ನ ರಾಜ್ಯಕ್ಕೆ ಬಂದು ನಿನ್ನ ಹೆಂಡತಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತೇನೆ”

ಇದನ್ನ ಓದಿದ ರಾವಲ್ ಸಿಂಗ್ “ಸರಿ ಆಯಿತು ಆದರೆ ಒಂದು ಷರತ್ತು, ನನ್ನ ಹೆಂಡತಿ ಮುಖತಃ ನಿನ್ನ ಕೈಗೆ ರಾಖಿ ಕಟ್ಟಲ್ಲ ಆದರೆ ಆಕೆ ಅದಕ್ಕೆ ಪೂಜೆ ಮಾಡಿ ಇಟ್ಟಿರುತ್ತಾಳೆ ಅದನ್ನ ನಿನ್ನ ಕೈಗೆ ನಮ್ಮ ರಾಣಿಯ ಸಖಿಯರು ಕಟ್ತಾರೆ” ಅಂತ ವಾಪಸ್ ಪತ್ರ ಬರೀತಾನೆ.
ಅಲ್ಲಾವುದ್ದೀನ್ ಖಿಲ್ಜಿಯ ಷಡ್ಯಂತ್ರ:-

ಇದಕ್ಕೊಪ್ಪಿದ ಖಿಲ್ಜಿ ದೆಹಲಿಯಿಂದ ಹೊರಟು ಗುಪ್ತವಾಗಿ ತನ್ನ ದೊಡ್ಡ ಸೈನ್ಯವನ್ನ ಚಿತ್ತೋಡಗಢದಲ್ಲಿ ಬಿಡಾರ ಹೂಡಿಸಿ, ರಾವಲ್ ಸಿಂಗನ ಆಸ್ಥಾನಕ್ಕೆ ಒಂದಿಬ್ಬರು ಸಂಗಡಿಗರ ಜೊತೆ ಬರ್ತಾನೆ, ಬಂದ ಅತಿಥಿಗೆ ಆದರ ಆತಿಥ್ಯಗಳೂ ಸಿಕ್ಕವು, ಆತನ ಕೈಗೆ ರಾಖಿ ಕಟ್ಟಲು ಬಂದ ರಾಣಿಯ ಸಖಿಯನ್ನ ಕಂಡ ಅಲ್ಲಾವುದ್ದೀನ್ ಹೇಳ್ತಾನೆ “ನಾನು ಒಂದೇ ಒಂದು ಬಾರಿ ನನ್ನ ತಂಗಿ ಸಮಾನಳಾದ ಪದ್ಮಿನಿಯನ್ನ ನೋಡಬೇಕಲ್ಲ?”

ಇದಕ್ಕೆ ರಾಜ ಹೇಳ್ತಾನೆ “ಸರಿ ಆಯಿತು ಆದರೆ ಒಂದು ಷರತ್ತು, ರಾಣಿ ಮುಖತಃ ನಿಮಗೆ ತನ್ನ ಮುಖ ತೋರಿಸಲ್ಲ, ಆಕೆ ಆಕೆಯ ಅರಮನೆಯ ಹೊರಾಂಗಣದಲ್ಲಿ ನಿಂತಿರುತ್ತಾಳೆ, ಆಕೆಯ ಪ್ರತಿಬಿಂಬ ಒಂದು ರೂಮಿನ ಕನ್ನಡಿಯಲ್ಲಿ ಕಾಣುತ್ತೆ, ಆ ಪ್ರತಿಬಿಂಬದಲ್ಲಿ ನೀವು ಆಕೆಯ ಮುಖವನ್ನು ನೋಡಬಹುದು”ಇದಕ್ಕೊಪ್ಪಿದ ಖಿಲ್ಜಿ “ಆಯ್ತು ಸರಿ” ಅಂತಾನೆ.
ರಾಜ ರಾವಲ್ ರತನ ಸಿಂಗ್ ನ ಬುದ್ದಿವಂತಿಕೆ…
ಸರಿ ರಾಣಿ ಪದ್ಮಿನಿ ತನ್ನ ಮಹಲಿನ ಸರೋವರದ ಹತ್ತಿರ ಬಂದು ನಿಲ್ತಾಳೆ, ಅವಳ ಪ್ರತಿಬಿಂಬ ಆ ರೂಮಿನ ಕನ್ನಡಿಯ ಮೇಲೆ ಕಂಡ ಖಿಲ್ಜಿಗೆ ಆಕೆಯ ಸೌಂದರ್ಯ ದಂಗುಬಡಿಸಿತ್ತು, ಹೇಗಾದರೂ ಮಾಡಿ ಈಕೆಯನ್ನ ತನ್ನ ಪಟ್ಟದರಸಿ ಮಾಡಿಕೊಳ್ಳೇಬೇಕು ಅಂತ ಖಿಲ್ಜಿ ತೀರ್ಮಾನಿಸಿ ಒಮ್ಮಿಂದೊಮ್ಮೆಲೇ ರಾಜನ ಮೇಲೆ ದಾಳಿ ನಡೆಸಿ ರಾವಲ್ ಸಿಂಗನನನ್ನ ಯುದ್ಧ ಕೈದಿಯಾಗಿ ದೆಹಲಿಗೆ ಕರೆದುಕೊಂಡು ಹೋಗ್ತಾನೆ ಆದರೆ ರಾಣಿ ಪದ್ಮಿನಿ ಆತನ ಕೈಗೆ ಸಿಗಲ್ಲ.

ರಜಪೂತ ಇತಿಹಾಸಕಾರರು ಹೇಳುವುದೇನು?
(ಆದರೆ ರಜಪೂತ ಇತಿಹಾಸಕಾರರ ಪ್ರಕಾರ ಅಲ್ಲಿ ಬಂದು ಖಿಲ್ಜಿಗೆ ಮುಖ ತೋರಿಸಿದ್ದು ರಾಣಿ ಪದ್ಮಿನಿಯದ್ದಲ್ಲ, ಬದಲಾಗಿ ರಾಣಿಯ ಸಖಿ ಅಲ್ಲಿ ಬಂದು ನಿಂತದ್ದು, ಆದರೆ ಖಿಲ್ಜಿ ಒಂದು ಬಾರಿಯೂ ರಾಣಿ ಪದ್ಮಿನಿಯ ಮುಖ ನೋಡಿರದ ಕಾರಣ ರಾಣಿಯ ಸಖಿಯನ್ನೇ ಪದ್ಮಿನಿ ಅಂದುಕೊಳ್ತಾನಂತೆ)ನಿಜವಾಗಿಯೂ ಆತನಿಗೆ ಪದ್ಮಿನಿಯ ಸೌಂದರ್ಯ ಕಂಡು ಆಕೆಯನ್ನ ಮದುವೆ ಆಗೋ ಚಪಲವಿತ್ತೇ ಹೊರತು ಆಕೆಯನ್ನ ಆತ ತಂಗಿ ಅಂತ ಬಾಯಿಮಾತಿಗಷ್ಟೇ ತನ್ನ ಮಾಯಾಜಾಲ ಬೀಸಲು ಸುಳ್ಳು ಹೇಳಿದ್ದು.
ಅಲ್ಲಾವುದ್ದಿನ್ ಖಿಲ್ಜಿ ರಾಣಿ ಪದ್ಮಿನಿಗೆ ಬರೆದ ಪತ್ರದಲ್ಲಿದ್ದ ಆದೇಶ ಏನು..?
ರಾಜಾ ರಾವಲ್ ರತನ್ ಸಿಂಗ್ ಬಂಧಿಯಾಗಿ ದೆಹಲಿಯಲ್ಲಿದ್ದಾಗ ಅಲ್ಲಾವುದ್ದಿನ್ ಖಿಲ್ಜಿ ಚಿತ್ತೋಡಗಢಕ್ಕೆ ಪತ್ರ ಬರೆದು ಪದ್ಮಿನಿಗೆ ಹೀಗೆ ಹೇಳ್ತಾನೆ “ನಿನ್ನ ಗಂಡನನ್ನ ನೀನು ಜೀವಸಹಿತವಾಗಿ ನೋಡಬೇಕೆಂದರೆ ನೀನು ನನ್ನವಳಾಗಬೇಕು, ನೀ ನನ್ನ ಮದುವೆಯಾಗಿ ನನ್ನ ಜನಾನಾಗೆ ಬರಬೇಕು ಆಗ ಮಾತ್ರ ನಾ ನಿನ್ನ ಗಂಡನನ್ನ ಬಿಡುಗಡೆ ಮಾಡ್ತೀನಿ”

ಇದನ್ನೋದಿದ ರಾಣಿ ಪದ್ಮಿನಿಯ ರಕ್ತ ಕೊತ ಕೊತ ಕುದಿಯುತ್ತ ಆಕೆ ಖಿಲ್ಜಿಗೆ ಉತ್ತರ ಕೊಡ್ತಾ ಹೀಗೆ ಹೇಳ್ತಾಳೆ. “ನನಗೆ ನನ್ನ ಗಂಡನ ಕ್ಷೇಮ ಮುಖ್ಯ, ನಾನು ನಿನ್ನ ಷರತ್ತಿಗೆ ಒಪ್ಪುತ್ತೇನೆ, ಆದರೆ ನೀವು ಚಿತ್ತೋಡಗಢಕ್ಕೆ ಬರೋದು ಬೇಡ, ನಾನೇ ನಮ್ಮ ರಜಪೂತ ಪರಂಪರೆಯ ಪ್ರಕಾರ 100 ಪಲ್ಲಕ್ಕಿಗಳ ಜೊತೆಗೆ ನನ್ನ ಸಖಿಯರೊಂದಿಗೆ ನಿಮ್ಮ ಆಸ್ಥಾನಕ್ಕೆ ಬಂದು ನಿಮಗೆ ಶರಣಾಗ್ತೀನಿ”. ಇದನ್ನೋದಿದ ಖಿಲ್ಜಿಗೆ ಮತ್ತೂ ಖುಷಿಯಾಗಿ ಒಬ್ಬ ಸುರಸುಂದರಾಂಗಿ ಪದ್ಮಿನಿ ಸಿಗ್ತಾಳೆ ಅನ್ಕೊಂಡಿದ್ದೆ ಆದರೆ ಆಕೆ ಜೊತೆಗೆ ಇನ್ನೂ ನೂರು ಜನ ಸುಂದರ ಸಖಿಯರಿರ್ತಾರೆ ಅಂತ ಮನದಲ್ಲೇ ತನ್ನ ಕಾಮಾಗ್ನಿಯ ಬಯಕೆಯನ್ನು ಇಮ್ಮಡಿಗೊಳಿಸಿಕೊಳ್ತಾನೆ.

ರಾಣಿ ಪದ್ಮಿನಿಯು ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡಿಸಿದ್ದೇ ಒಂದು ರೋಚಕ್…
ಆ ದಿನ ಬಂದೇ ಬಿಟ್ಟಿತು, ರಾಣಿ ಪದ್ಮಿನಿ ನೂರು ಪಲ್ಲಕ್ಕಿಗಳ ಮೂಲಕ ಖಿಲ್ಜಿಯ ಆಸ್ಥಾನಕ್ಕೆ ಬಂದೇ ಬಿಟ್ಟಳು, ಆಗಲೂ ಆತ ಆಕೆಯ ನಿಜವಾದ ಮುಖ ಇನ್ನೂ ನೋಡಿರಲಿಲ್ಲ, ಯಾವಾಗ ಆತ ಪಲ್ಲಕ್ಕಿಯ ಹತ್ತಿರ ಹೊರಟು ಪದ್ಮಿನಿಯನ್ನ ನೋಡಲು ಬರುತ್ತಾನೋ ಆಗ ಪಲ್ಲಕ್ಕಿಗಳಿಂದ ಹರಹರಮಹಾದೇವ ಘೋಷಣೆಗಳನ್ನ ಕೂಗುತ್ತ ನೂರು ಜನ ರಜಪೂತ ಸೈನಿಕರು ಒಮ್ಮೆಲೆ ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡ್ತಾರೆ. ಇದು ರಾಣಿ ಪದ್ಮಿನಿಯೇ ಖಿಲ್ಜಿಯ ಸೊಕ್ಕು ಮುರಿಯೋದಕ್ಕೆ ರಚಿಸಿದ್ದ ಪದ್ಮವ್ಯೂಹವಾಗಿತ್ತು, ನೂರು ಪಲ್ಲಕ್ಕಿಗಳಲ್ಲಿ ತನ್ನ ಸಖಿಯರಿರ್ತಾರೆ ಅಂತ ಹೇಳಿದ್ದ ಪದ್ಮಿನಿ ಅವುಗಳಲ್ಲಿ ತನ್ನ 100 ಬಲಾಢ್ಯ ರಜಪೂತ ಸೈನಿಕರನ್ನ ಕರೆತಂದಿರ್ತಾಳೆ. ಖಿಲ್ಜಿಗೆ ತನ್ನ ಆಸ್ಥಾನದಲ್ಲಿ ಏನ್ ನಡೀತಿದೆ ಅಂತ ಅರ್ಥವಾಗೋಕೂ ಮುಂಚೆಯೇ ರಾಣಿ ಪದ್ಮಿನಿ ಖಿಲ್ಜಿಯ ಹೆಡೆಮುರಿಕಟ್ಟಿ ಸೋಲಿಸಿ ತನ್ನ ಗಂಡ ರಾವಲ್ ರತನ್ ಸಿಂಗನನ್ನ ಬಿಡಿಸಿಕೊಂಡು ಚಿತ್ತೋಡಗಢಕ್ಕೆ ವಾಪಸ್ಸಾಗ್ತಾಳೆ.
ಅವಮಾನಿತನಾದ ಅಲ್ಲಾವುದ್ದೀನ್ ಖಿಲ್ಜಿಯಿಂದ ಚಿತ್ತೋಡಗಢದ ಮೇಲೆ ದಾಳಿ…

ಈ ಘಟನೆಯಿಂದ ಅದೂ ಒಂದು ಹೆಣ್ಣಿನ ಕೈಯಿಂದ ನಾನು ಸೋಲೋದಾ ಅಂತ ಪಿತ್ತ ನಿತ್ತಗೇರಿದ ಅಲ್ಲಾವುದ್ದೀನ್ ಖಿಲ್ಜಿ, ಈ ಬಾರಿ ಮತ್ತೆ ಚಿತ್ತೋಡಗಢದ ಮೇಲೆ ದಾಳಿ ಮಾಡ್ತಾನೆ, ಕೆಲ ದಿನಗಳ ಕಾಲ ರಜಪೂತರು ಖಿಲ್ಜಿಗೆ ಪ್ರತಿರೋಧ ತೋರುತ್ತಾರೆ ಆದರೆ ಖಿಲ್ಜಿಯ ಬೃಹತ್ ಸೈನ್ಯದೆದುರು ರಜಪೂತರು ಸೋಲುತ್ತಾರೆ. ಕೋಟೆಗಿದ್ದ ಒಂದೇ ಒಂದು ದ್ವಾರವನ್ನು ತನ್ನ ಸೈನಿಕರಿಂದ ಮುಚ್ಚಿಸಿ ರಜಪೂತ ಸೈನಿಕರಿಗೆ ಹೊರಗಿನಿಂದ ಯಾವ ಸಾಮಗ್ರಿಗಳು ಸಿಗದ ಹಾಗೆ ಮಾಡಿ ಚಿತ್ತೋಡವನ್ನ ಖಿಲ್ಜಿ ವಶಪಡಿಸಿಕೊಂಡು ರಾವಲ್ ರತನ್ ಸಿಂಹನ ತಲೆ ಕಡಿದು ಹಾಕ್ತಾನೆ.
ರಾಣಿ ಪದ್ಮಾವತಿ ತನ್ನ 16,000 ಸಖಿಯರೊಂದಿಗೆ ಬೆಂಕಿಗೆ ಹಾರಿದ್ದು..!

ಈಗ ಮುಂದೇನು? ಅಲ್ಲಾವುದ್ದೀನ್ ಎಂಬ ಕಾಮುಕ ಚಿತ್ತೋಡದಲ್ಲಿರೊ ಎಲ್ಲ ರಜಪೂತ ಮಹಿಳೆಯರನ್ನೂ ಸೆಕ್ಸ್ ಸ್ಲೇವ್ಸ್ಗಳಾಗಿ ಕರೆದುಕೊಂಡು ಹೋಗೋಕೆ ಕೋಟೆ ಒಳ ಬರಿಕೈಲಿ ಮುಂಚೆಯೇ ಈ ವಿಷಯ ಅರಿತ ರಾಣಿ ಪದ್ಮಿನಿ, ನಾವು ರಜಪೂತರು ಯಾವತ್ತೂ ನಮ್ಮ ಶೀಲವನ್ನ ಕಳೆದುಕೊಂಡವರಲ್ಲ, ಅಂಥದ್ರಲ್ಲಿ ಈ ಮುಸಲ್ಮಾನ ದೊರೆಗೆ ನಮ್ಮ ಶೀಲ ಅರ್ಪಿತವಾಗೋದೇ? ಛೀ ಹಾಗೇ ಮಾಡೋದಕ್ಕಿಂತ ವೀರಸ್ವರ್ಗ ಪ್ರಾಪ್ತಿ ಮಾಡಿಕೊಳ್ಳೋದೇ ಎಷ್ಟೋ ವಾಸಿ ಅಂತ ತಕ್ಷಣ ಆಕೆ ಚಿತ್ತೋಡದಲ್ಲಿದ್ದ ತನ್ನ 16,000 ರಜಪೂತನಿಯರೊಂದಿಗೆ ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡು ಬಿಡ್ತಾಳೆ.

ನಂತರ ಕೋಟೆಯ ಒಳಗೆ ಖಿಲ್ಜಿ ಬಂದು ನೋಡಿದಾಗ ಆತನಿಗೆ ಯಾವೊಬ್ಬ ಹೆಂಗಸೂ ಚಿತ್ತೋಡದಲ್ಲಿ ಸಿಗದೆ ಹೆಣಗಳನ್ನ ಹದ್ದು ಕುಕ್ಕುತ್ತ ಕೂತಿರೊ ದೃಶ್ಯಗಳೇ ಕಂಡು ಆತ ದೆಹಲಿಗೆ ವಾಪಸ್ ಆಗ್ತಾನೆ. ನೋಡಿ ತನ್ನ ಆತ್ಮ & ಶೀಲರಕ್ಷಣೆಗಾಗಿ ತನ್ನನ್ನ ತಾನು ಬೆಂಕಿಗಾಹುತಿ ಮಾಡಿಕಂಡ & ತಾನು ಸಾಯೋವರೆಗೂ ಖಿಲ್ಜಿಯ ವಿರುದ್ಧ ಹೊರಾಡಿದ್ದ ರಜಪೂತರಷ್ಟೇ ಯಾಕೆ ಇಡೀ ಭಾರತದ ಮಹಿಳೆಯರಿಗೆ ಆದರ್ಶಪ್ರಾಯವಾಗಿರೋ ವೀರವನಿತೆ ಪದ್ಮಿನಿ ರಾಣಿ ಬಗ್ಗೆ ಕೆಲವರು ಒಂದು ಚಿತ್ರದ ಮುಖಾಂತರ ಕೆಟ್ಟ ರೀತಿಯಲ್ಲಿ ತೋರಿಸಲು ಹೊರಟಿದ್ದಾರೆ.

ಮೂಲ:
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಾಗುತ್ತಿರುವ ಬಗ್ಗೆ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ದೇಗುಲಗಳಲ್ಲಿ ಪೂಜಾ ಕಾರ್ಯಗಳಿಗೆ ನಿಯಮಿತವಾಗಿ ಕುಂಕುಮ ಖರೀದಿಸಿ ಬಳಸಲಾಗುತ್ತದೆ. ಅರ್ಚನೆಗೆ ಬಳಸಿದ ಕುಂಕುಮವನ್ನು ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ. ಜತೆಗೆ ಭಕ್ತರು ಪೂಜೆಗೆಂದು ಸಲ್ಲಿಸಿದ ಕುಂಕುಮವನ್ನೂ ವಿತರಿಸಲಾಗುತ್ತಿದೆ.ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ…
ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋ ಮಾದರಿಯಲ್ಲಿ ತಮ್ಮ ಫೋನ್‌ಗಳನ್ನು ಬಿಡುಗಡೆ ಮಾಡಲು ಶುರು ಮಾಡಿವೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಎಲ್ಲರಿಗೂ ಅವರ ಜೀವನದಲ್ಲಿ ಅವರದೇ ಆದ ಕೆಲವು ಬಿಟ್ಟುಕೊಡದ ರಹಸ್ಯಗಳಿರುತ್ತವೆ. ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು ಇಟ್ಟುಕೊಂಡಿರುತ್ತಾರೆ. ತಮ್ಮ ಪರಮಾಪ್ತರಲ್ಲಿ ಕೂಡ ಕೆಲವೊಂದನ್ನು ಹಂಚಿಕೊಳ್ಳುತ್ತಾರಷ್ಟೆ.
ಅವಧಿ ಮುಗಿದು ತಿಂಗಳು ಕಳೆದ ಗ್ಲೂಕೋಸ್ ಬಾಟೆಲ್ ಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡಿ ರೋಗಿಗಳ ಜೀವದೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚೆಲ್ಲಾಟವಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆಮೂಡಲಪಾಳ್ಯ ಗ್ರಾಮದ ವೆಂಕಟಮ್ಮ ಎಂಬ ವಯೋವೃದ್ದೆ, ವಿಪರೀತ ಸುಸ್ತು ಕಂಡ ಹಿನ್ನೆಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆಯಲ್ಲಿಅವಧಿ ಮೀರಿದ ಗ್ಲೂಕೋಸ್ ಬಾಟೆಲ್ ಗಳನ್ನು ಇಲ್ಲಿನ ನಸ್೯ಗಳು ನೀಡಿದ್ದಾರೆ. ಇನ್ನೂ ಈ ಸಮಸ್ಯೆಯನ್ನು ಪ್ರಶ್ನಿಸಿದರೇ ಅವಧಿ ಮುಗಿದು ಮೂರು ತಿಂಗಳುವರೆಗೂ…
18 ವರ್ಷಆಗಿರುವಯುವಕ-ಯುವತಿಯರೇ… ನೀವು ಇನ್ನೂ ಮತದಾನದ ಹಕ್ಕು ಪಡೆದುಕೊಂಡಿಲ್ಲವೇ?,ಪಡೆದಿದ್ದರೂ ಏನಾದ್ರೂ ತಿದ್ದುಪಡಿಮಾಡಬೇಕೆ?ಚಿಂತೆಮಾಡ್ಬೇಡಿ.ಅಗತ್ಯ ದಾಖಲೆಗಳೊಂದಿಗೆ ರೆಡಿಯಾಗಿರಿ.ನಿಮ್ಮಮನೆಗೆ ಬಂದು ಮತದಾರರ ಪಟ್ಟಿಗೆ ಹೆಸರು ಬರೆದುಕೊಂಡುಹೋಗುತ್ತಾರೆ.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇದು ಉತ್ತಮ ಅವಕಾಶವಾಗಿದೆ.ಮಿಸ್ಮಾಡ್ಕೋಬೇಡಿ.ಹಾಗಿದ್ರೆ ಇದಕ್ಕೆ ದಾಖಲಾತಿಗಳೇನುಬೇಕು ಅಂತೀರಾ?ಮುಂದೆ ಓದಿ ಎಲ್ಲಾ ಮಾಹಿತಿ ಇದೆ. ಬೆಂಗಳೂರು, ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ…
ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ…