ಸುದ್ದಿ

ವಾಟ್ಸಪ್ ಪಡೆದ ಆದಾಯವೇಷ್ಟು ಅಂತ ಗೊತ್ತಾದರೆ ಶಾಕ್ ಆಗುವುದಂತೂ ಖಂಡಿತಾ ,.!

39

ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್‌ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ  6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ.

ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ ಪೇಮೆಂಟ್‌ ಸರ್ವಿಸ್ ಆರಂಭಿಸಲು ವಾಟ್ಸಪ್ ನಿಯಂತ್ರಕದ ಅನುಮತಿಯ ನಿರೀಕ್ಷೆಯಲ್ಲಿದೆ.

ಭಾರತದಲ್ಲಿ ಸುಮಾರು10 ಲಕ್ಷ ಮಂದಿ ವಾಟ್ಸಪ್ ಬಿಸಿನೆಸ್‌ ಆ್ಯಪ್‌ ಅನ್ನು ಬಳಸುತ್ತಿದ್ದಾರೆ. ತಮ್ಮ ಗ್ರಾಹಕರ ಜತೆಗೆ ಮಾಹಿತಿಗಳ ವಿನಿಮಯಕ್ಕೆ ಬಳಸುತ್ತಾರೆ. ವಾಟ್ಸಪ್ ಜಾಲತಾಣ ಆ್ಯಪ್‌ ಜಾಹೀರಾತುಗಳ ಮೂಲಕ ಆದಾಯ ಗಳಿಸುವುದಿಲ್ಲ. ಇದು ಜಾಹೀರಾತು ಮುಕ್ತ ಆ್ಯಪ್‌.ಇದೀಗ ಬಿಸಿನೆಸ್‌ ಆ್ಯಪ್‌ ಮೂಲಕ ಆದಾಯದ ಮಾರ್ಗವನ್ನು ಕಂಡುಕೊಳ್ಳುತ್ತಿದೆ. ಫೇಸ್‌ಬುಕ್‌2014 ರಲ್ಲಿ ವಾಟ್ಸಪ್ ಅನ್ನು ಖರೀದಿಸಿತ್ತು.

ವಾಟ್ಸಪ್‌ ಜನಪ್ರಿಯ ಮಾಧ್ಯಮವಾಗಿದ್ದು, ಕಾಲಕಾಲಕ್ಕೆ ವಿವಿಧ ಅಪ್‌ಡೇಟ್‌ಗಳ ಮೂಲಕ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಅಲ್ಲದೆ ಐಓಎಸ್ ಮತ್ತು ಆಂಡ್ರಾಯ್ಡ್ ಪ್ರತ್ಯೇಕ ಆವೃತ್ತಿಗಳಿಗೆ ಪೂರಕವಾಗಿ ವಿನ್ಯಾಸ, ಭದ್ರತಾ ವೈಶಿಷ್ಟ್ಯಗಳನ್ನು ಕೂಡ ಪರಿಚಯಿಸುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ