ಸುದ್ದಿ, ಸ್ಪೂರ್ತಿ

15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತು ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ ತೆಗೆದ ರೈತ, ಈ ಸುದ್ದಿ ನೋಡಿ.

70


ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದ ವಿಲಾಸ್‍ರಾವ್ ಹೂಗಾರ್ ಇವತ್ತಿನ ನಮ್ಮ ಹೀರೋ. ಭೀಕರ ಬರಗಾಲದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ 15 ವರ್ಷಗಳ ಹಿಂದೆ ವಿಲಾಸ್‍ರಾವ್ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಬಿಸಿಲ ನಾಡು ಬೀದರ್ ನ ಔರಾದ್ ತಾಲೂಕಿನ ವಿಲಾಸ್‍ರಾವ್ ಹೂಗಾರ್ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದಿದ್ದಾರೆ. ಇದಕ್ಕಾಗಿ 15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತಿದ್ದಾರೆ.


ಸಾಹಸಿ ಜೀವನ ನೋಡಿದ ಸ್ಥಳೀಯ ಅಧಿಕಾರಿಗಳು ಈಗ ಬೋರ್‍ವೆಲ್ ಕೊರೆಸಿಕೊಟ್ಟಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಹೆಂಡತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ, ಮಗ ವಿಕಲಚೇತನನಾಗಿದ್ದು ಜೊತೆಗೆ ಪುಟ್ಟ ಹೆಣ್ಣು ಮಗುವನ್ನು ಸಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮಾನಸಿಕವಾಗಿ ಕುಗ್ಗದೇ ವಿಲಾಸ್ ರಾವ್ ಮುಂದೆ ಸಾಗುತ್ತಿದ್ದಾರೆ. ಗ್ರಾಮದಲ್ಲಿ ಬೀಳುವ ಸಗಣಿಯನ್ನು ಸಂಗ್ರಹಿಸಿ, ಬೆಳೆಗೆ ಹಾಕಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿಲಾಸ್ ಅವರ  ವಿಲಾಸ್ ಹೂಗಾರ್ ಅವರ ಈ ಕಾರ್ಯ, ಆತ್ಮಹತ್ಯೆಗೆ ಶರಣಾಗುವ ರೈತರು, ಗುಳೆ ಹೋಗುವ ಜನರಿಗೆ ಸ್ಫೂರ್ತಿಯಾಗಲಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ