ಸುದ್ದಿ

ನಾನು ಸಾಯುವ ಮುನ್ನ. ಅಯೋಧ್ಯಾ ತೀರ್ಪು ಕೊನೆಗೊಳ್ಳಬೇಕೆಂದು ಪಣ ತೊಟ್ಟು ಗೆದ್ದುಬಿಟ್ಟ 92 ರ ಇಳಿವಯಸ್ಸಿನ ಪರಸರನ್.

37

ದಶಕಗಳ ಕಾಲ ಕೋರ್ಟ್ ನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯಾ ಭೂ ವಿವಾದ ಪ್ರಕರಣ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನದ ನಂತರ ಭೂ ವಿವಾದ ಕೊನೆಗೊಂಡಿದೆ. ಈ ಪ್ರಕರಣದ ಕುರಿತಾಗಿ ಅಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಕೋರ್ಟ್ ನಲ್ಲಿ ವಾದ ಮಾಡಿ ಸಾಬೀತು ಪಡಿಸಿ ಇಗಿನ  ಈ ತೀರ್ಪಿಗೆ ಪೂರಕವಾದ ವಾದ ಮಂಡನೆ ಮಾಡಿದ ಆ ವಕೀಲರು ಯಾರು ಎನ್ನುವುದನ್ನು ನಾವು ತಿಳಿಯಲೇಬೇಕು. ಅಯೋಧ್ಯಾ ಭೂ ವಿವಾದ ಪ್ರಕರಣ ಕುರಿತಾಗಿ ವಾದ ಮಂಡಿಸಿದ ವಕೀಲರ ಪ್ರಸ್ತುತ ವಯಸ್ಸು 92.ಹೌದು 92 ರ ಇಳಿವಯಸ್ಸಿನಲ್ಲಿ ಕೂಡಾ ವಕೀಲರಾದ ಪರಸರನ್ ಅವರು ಸುಪ್ರೀಂ ಕೋರ್ಟ್ ನಲ್ಲಿ 40 ದಿನಗಳ ಕಾಲ ರಾಮಲಲ್ಲಾ ವಿರಾಜ ಮಾನ್ ಪರವಾಗಿ ಕೋರ್ಟ್ ನಲ್ಲಿ  ತಮ್ಮ ವಾದವನ್ನು ಮಂಡಿಸಿದ್ದಾರೆ.

ವಯೋಸಹಜ ಆಯಾಸ ಅಥವಾ ಇನ್ನಾವುದೇ ವಿಷಯದ ಕಡೆಗೆ ಗಮನ ನೀಡದೆ, ಸ್ವತಃ ನ್ಯಾಯಾಧೀಶರೇ ಅವರಿಗೆ ಕುಳಿತು ನ್ಯಾಯ ಮಂಡನೆ ಮಾಡಲು ಅವಕಾಶ ನೀಡಿದರೂ, ವಾದ ಮಂಡನೆ ಮಾಡುವ ಸಮಯದಲ್ಲಿ ಪರಸರನ್ ಅವರು ಹಾಗೆ ಮಾಡಲಿಲ್ಲ. ಬದಲಿಗೆ ನಿಂತು ವಾದ ಮಂಡಿಸುವುದು ನಮ್ಮ ಸಂಸ್ಕೃತಿ ಎಂದು ಹೇಳಿ ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ತಮ್ಮ  ನ್ಯಾಯಧೀಶರ ಮುಂದೆ ನಿಂತು ಕೊಂಡೇ ವಾದ ಮಂಡಿಸಿದ್ದಾರೆ. 

ನಾನು ಕೊನೆಯುಸಿರು ಎಳೆಯುವ ಮುನ್ನ, ಅಯೋಧ್ಯೆ ಕೇಸಿನ ತೀರ್ಪು ಹೊರಬಿದ್ದರೆ ಸಾಕು. ನಾನು ಪ್ರತೀದಿನ ವಾದ ಮಂಡಿಸಲು ಬರುವೆ” ಎನ್ನುವ ಮಾತನ್ನು ಹೇಳಿದ್ದಾರಂತೆ. ಆಗ ಸಿಜಿಐ ಅವರಿಗೊಂದು ಆಫರ್ ನೀಡುತ್ತಾರೆ. ನೀವು ಕುಳಿತುಕೊಂಡೇ ವಾದ ಮಂಡಿಸಲು ಬಯಸುತ್ತೀರಾ ಎಂದು ಕೇಳಿದಾಗ . ಆಗ ಪರಶರನ್ ನಯವಾಗಿ ನಿಂತು ಕೊಂಡೇ ವಾದ ಮಾಡುತ್ತೇನೆಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ