ಸುದ್ದಿ

ತಮ್ಮ ಚಿತ್ರದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡುತ್ತಿರುವ – ರಾಧಿಕಾ ಕುಮಾರಸ್ವಾಮಿ,.!

39

ತೆಲುಗಿನ ‘ಆರುಂಧತಿ’, ‘ಭಾಗಮತಿ’ ಚಿತ್ರಗಳ ಹಾಗೆಯೇ ಮಹಿಳಾ ಪ್ರಧಾನ ಚಿತ್ರವಾದ ‘ದಮಯಂತಿ’ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಎಂಭತ್ತರ ದಶಕದ ಕಥೆ ಎಂದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ವಿಭಿನ್ನ, ವಿಶೇಷ ವೇಷ ಭೂಷಣದಲ್ಲಿಯೇ ರಾಧಿಕಾ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ದಮಯಂತಿ ಟೀಸರ್ ರಿಲೀಸ್ ಆಗಿದ್ದು YouTubeನಲ್ಲಿ ಟ್ರೆಂಡ್ ಆಗಿತ್ತು. ಅದರಲ್ಲಿರುವ ಪ್ರತಿಯೊಂದೂ ಡೈಲಾಗ್‌ ಈಗಾಗಲೇ ಸಾಕಷ್ಟು ಫೇಮಸ್‌ ಆಗಿದ್ದು, ಟಿಕ್‌ಟಾಕ್‌‌ನಲ್ಲಿ ಬಳಸುವವರಿಗೆ ರಾಧಿಕಾ ಸೂಪರ್ ಅವಕಾಶವೊಂದನ್ನು ಕೊಡುತ್ತಿದ್ದಾರೆ.

ರಾಧಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ ಹಾಯ್‌, ಎಲ್ಲರಿಗೂ ನಮಸ್ಕಾರ, ನಮ್ಮ ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಬರುವ ಡೈಲಾಗ್‌ಗಳನ್ನು ಯಾರು ತುಂಬಾ ಚೆನ್ನಾಗಿ ಟಿಕ್‌ಟಾಕ್‌ ಮಾಡಿ ಅತಿ ಹೆಚ್ಚು ಲೈಕ್‌ ಪಡೆಯುತ್ತಾರೋ ಅದರಲ್ಲಿ 10 ಮಂದಿಗೆ ನನ್ನೊಂದಿಗೆ ದಮಯಂತಿ ಪ್ರೀಮಿಯರ್ ಶೋ ನೋಡುವ ಅವಕಾಶವಿದೆ. Don’t miss it.ಥ್ಯಾಂಕ್ಯೂ ‘ ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಈಗಾಗಲೇ ಸಾಕಷ್ಟು ಟಿಕ್‌ಟಾಕ್ ಬಳಕೆದಾರರೂ ಡಿಫರೆಂಟ್‌ ಆಗಿ ವೇಷ ಭೂಷಣ ಧರಿಸಿ ಮಾಡುತ್ತಿರುವ ವಿಡಿಯೋಗಳೂ ವೈರಲ್ ಆಗುತ್ತಿವೆ.ಇನ್ನು ಅಘೋರಿಯಾಗಿ ಅಭಿನಯಿಸುತ್ತಿರುವ ‘ಭೈರಾದೇವಿ’ ಚಿತ್ರಕ್ಕೂ ‘ದಮಯಂತಿ’ ಚಿತ್ರದ ಪಾತ್ರಕ್ಕೂ ಬಿಗ್‌ ಕನ್ಫ್ಯೂಷನ್ ಇತ್ತು. ಇದಕ್ಕೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ. ದಮಯಂತಿ ಚಿತ್ರವೂ ಅಮ್ಮ ಪಾತ್ರ, ಆಕೆ ಇಡೀ ಊರಿಗೇ ನೆರವು ನೀಡಿ, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಾಳೆ ಎಂದು ಇತ್ತೀಚೆಗೆ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿ ಸಿಗುತ್ತೆ..!ತಿಳಿಯಲು ಈ ಲೇಖನ ಓದಿ ..

    ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿಯೂ ಸಿಗುತ್ತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಿಂದ ಮರಳು ಭಾಗ್ಯ ಯೋಜನೆ ರೂಪಿಸಲಾಗಿದೆ.

  • ಸುದ್ದಿ

    ಭಾರೀ ಮಳೆ ಗುಡುಗು, ಸಿಡಿಲು ಬಡಿದು ಪ್ರೇಮ ಸೌಧ ತಾಜ್ ಮಹಲ್‍ಗೆ ಹಾನಿ.

    ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ವರುಣ ದೇವ ವಿಜೃಂಭಿಸಿದ ಕಾರಣ ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ…

  • ಜ್ಯೋತಿಷ್ಯ

    `ಜೈ ಶ್ರೀರಾಮ್’ ಹೇಳುವಂತೆ ಸತತ 7 ಗಂಟೆ ಥಳಿಸಿ ಯುವಕ ದುರ್ಮರಣ……!

    ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಜಾರ್ಖಂಡ್ ನಲ್ಲಿ ನಡೆದಿದೆ.ಸಾರ್ವಜನಿಕರು 24 ವರ್ಷದ ಶಾಮ್ಸ್ ತಬ್ರೆಜ್ ಗೆ ಜಾರ್ಖಂಡ್ ನ ಸೀರೈಕೆಲ- ಖರ್‍ಸವಾನ್ ಹಾಗೂ ಸಿಂಘ್ಬುಮ್ ಜಿಲ್ಲೆಯಲ್ಲಿ ಥಳಿಸಿದ್ದಾರೆ. ಮಂಗಳವಾರ ಸಂಜೆ ಸಾರ್ವಜನಿಕರು ಶಾಮ್ಸ್ ನನ್ನು ಕಂಬಕ್ಕೆ ಕಟ್ಟಿ ಸುಮಾರು 7 ಗಂಟೆಗಿಂತಲೂ ಹೆಚ್ಚು ಕಾಲ ಚೆನ್ನಾಗಿ ಥಳಿಸಿದ್ದರು. ಅಲ್ಲದೆ ಇದೇ ವೇಳೆ ಶ್ರೀರಾಮ್’,ಜೈ ಹನುಮಾನ್’ ಎಂದು ಪಠಿಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಅಂದರೆ ಬುಧವಾರ ಬೆಳಗ್ಗೆ…

  • ಸುದ್ದಿ

    ಫೇಸ್ಬುಕ್ ಫೋಟೋ ನೋಡಿ ಲವ್ ಮಾಡಿದ…ಹುಡುಗಿಯನ್ನು ಭೇಟಿಯಾಗಲು ಹೋದಾಗ..!

    ಪಾಟ್ನಾದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಸುಂದರ ಹುಡುಗಿಯ ಫೋಟೋ ನೋಡಿದ್ದಾನೆ. ಆಕೆ ಸೌಂದರ್ಯಕ್ಕೆ ಸೋತು ಮೊದಲು ರಿಕ್ವೆಸ್ಟ್ ಕಳುಹಿಸಿದ್ದಾನೆ. ಹುಡುಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ. ನಿಧಾನವಾಗಿ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ. ನಂತ್ರ ಪ್ರೀತಿ ಶುರುವಾಗಿದೆ. ಇಬ್ಬರೂ ಹೊಸ ಪ್ರಪಂಚದಲ್ಲಿ ತೇಲಾಡಲು ಶುರು ಮಾಡಿದ್ದಾರೆ. ಗಂಟೆಗಟ್ಟಲೆ ಚಾಟ್ ಮಾಡ್ತಿದ್ದವರು ಹೊಸ ವರ್ಷ ಭೇಟಿಯಾಗಿ, ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾನೆ. ಹೊಸ ವರ್ಷದ ಮೊದಲ ದಿನ ಪಾರ್ಕ್ ಒಂದನ್ನು ನಿಗಧಿ ಮಾಡಿ ಅಲ್ಲಿ ಮೊದಲ ಭೇಟಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ….

  • ಸುದ್ದಿ

    ಈ ಜಾಗದಲ್ಲಿ ವಾಸಿಸುವವರಿಗೆ ಸಿಗುತ್ತೆ ಭಾರೀ ಹಣ…!

    ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ. ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ. ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ….