ಸುದ್ದಿ

ಇಂದು ಮಧ್ಯಾಹ್ನ ಗುಜರಾತಿಗೆ ಅಪ್ಪಳಿಸಲಿದೆ ವಾಯು – 3 ಲಕ್ಷ ಜನ ಶಿಫ್ಟ್, 500 ಗ್ರಾಮಗಳ ತೆರವು

63

ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್‍ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್‍ನ ಕರಾವಳಿಗೆ ಅಪ್ಪಳಿಸಲಿದೆ.

ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್‍ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ.

ಮುಂಬೈನಿಂದ ಮುಂದೆ ಸಾಗಿದ ವಾಯು ಚಂಡಮಾರುತ, ದಿಯು-ಸೋಮನಾಥ-ಪೋರಬಂದರ್-ದ್ವಾರಕ ಮೂಲಕ ಸಾಗಿ ಪಾಕಿಸ್ತಾನದ ಕರಾಚಿಯತ್ತ ದುರ್ಬಲ ಆಗಲಿದೆ. ಇದರ ನಡುವೆ ದಿಯು ಹಾಗೂ ಪೋರ್ ಬಂದರ್ ನಡುವೆ ಭಾರೀ ವರ್ಷಧಾರೆಯಾಗಲಿದೆ.

ಬಂಗಾಳಕೊಲ್ಲಿಯ ಫೋನಿಯಿಂದ ಒಡಿಶಾ ಎದುರಿಸಿದ ಸ್ಥಿತಿಯಿಂದ ಗುಜರಾತ್ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ, ಗುಜರಾತ್‍ನ ಮೋರ್ಬಿ, ಭಾವನಗರ, ಜುನಾಗಢ, ಗಿರ್, ಸೋಮನಾಥ, ಜಾಮ್‍ನಗರ, ದ್ವಾರಕಾ, ಕಛ್, ಪೋರ್ ಬಂದರ್, ರಾಜಕೋಟ್ ಮತ್ತು ಅಮ್ರೇಲಿಯ 10 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಹಾಗೂ 500 ಗ್ರಾಮಗಳ ತೆರವು ಮಾಡಲಾಗಿದೆ.
ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 52 ತಂಡಗಳು ಗುಜರಾತ್‍ನಲ್ಲಿ ಬೀಡು ಬಿಟ್ಟಿವೆ. ಜೊತೆಗೆ, ಸೇನಾಪಡೆಯ 10 ತುಕಡಿಗಳು, ಮುಂಬೈ ನೌಕಾನೆಲೆಯಲ್ಲಿ ತುರ್ತು ಸ್ಥಿತಿ ಎದುರಿಸಲು ವೈದ್ಯಕೀಯ ತಂಡಗಳು ಸನ್ನದ್ಧವಾಗಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಾದಾಮಿಗೂ ಹೊಟ್ಟೆ ಉಬ್ಬರಕ್ಕೂ ಸಂಬಂಧವಿದೆಯೇ …..?

    ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಎಂದಾದರೂ ಪೋಷಕಾಂಷಕಾಂಶಗಳ ಕೊರತೆ ಕಂಡು ಬಂದರೆ ವೈದ್ಯರು ಥಟ್ಟನೆ ಸೂಚಿಸುವುದು ಡ್ರೈ ಫ್ರೂಟ್ಸ್ ಬಳಸಲು . ಏಕೆಂದರೆ ಅವುಗಳಲ್ಲಿರುವಷ್ಟು ಒಟ್ಟು ಪೌಷ್ಟಿಕಾಂಶಗಳು ಬೇರೆಲ್ಲೂ ಅಷ್ಟು ಸುಲಭವಾಗಿ ಸಿಗುವುದಿಲ್ಲ . ಒಣ ದ್ರಾಕ್ಷಿ , ಖರ್ಜೂರ , ಗೋಡಂಬಿ ಮತ್ತು ಬಾದಾಮಿ ಹೀಗೆ . ಒಂದಕ್ಕಿಂತ ಒಂದು ಹೆಚ್ಚು . ಅದರಲ್ಲೂ ಬಾದಾಮಿ ಯಲ್ಲಿ ನ್ಯೂಟ್ರಿಯೆಂಟ್ ಗಳ ಜೊತೆಗೆ ಮೆಗ್ನೀಷಿಯಂ , ವಿಟಮಿನ್ ‘ ಈ ‘ ಮತ್ತು ಫೈಬರ್ ನ ಅಂಶ ಅಗಾಧವಾಗಿದೆ…

  • ವಿಸ್ಮಯ ಜಗತ್ತು

    ಈ ಮಹಿಳೆ ಭೂತವನ್ನೇ ಕಾಮಕ್ಕೆ ಪ್ರಚೋದಿಸುತ್ತಾಳಂತೆ..!ತಿಳಿಯಲು ಈ ಲೇಖನ ಓದಿ..

    ಭೂತ ಪ್ರೇತಗಳಲ್ಲಿ ನಿಮಗೆ ನಂಬಿಕೆ ಇದೆಯೇ? ಈ ಪ್ರಶ್ನೆಗೆ ಭಿನ್ನ ವ್ಯಕ್ತಿಗಳಿಂದ ಭಿನ್ನ ಉತ್ತರ ದೊರಕಬಹುದು. ಆದರೆ ವಿಜ್ಞಾನದ ಪ್ರಕಾರ ಭೂತ ಪ್ರೇತಗಳ ಇರುವಿಕೆಗೆ ಯಾವುದೇ ಆಧಾರವಿಲ್ಲ ಹಾಗೂ ಇವುಗಳ ಇರುವಿಕೆಯನ್ನು ಸಾಬೀತುಪಡಿಸಲು ವೈಜ್ಞಾನಿಕವಾಗಿ ಸಾಧ್ಯವೂ ಇಲ್ಲ.

  • ಜ್ಯೋತಿಷ್ಯ

    ತಾಯಿ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ wh ಮೇಷನೀವು ತುಂಬ ಸಂವೇದನಾಶೀಲರಾಗಿರುತ್ತೀರಿ…

  • ಸುದ್ದಿ

    ಮದ್ಯ ಸೇವಿಸಿ 5ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ನೀಚ ತಂದೆ…!

    ಚಿಕ್ಕಬಳ್ಳಾಪುರ: ಕಾಮುಕ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ಸ್ವಂತ ಮಗಳ ಮೇಲೆಯೇ ಅತ್ಯಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ತಾಲೂಕಿನಲ್ಲಿ ಗುರುವಾರ ಘಟನೆ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಿಂದ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ತಂದೆಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು…

  • ಸುದ್ದಿ

    ಜಿಯೋ ಗ್ರಾಹಕರಿಗೆ ಹೊಸ ವರ್ಷಕ್ಕೆ ಬಂಪರ್ ಆಫರ್. ಏನದು ಈಗಲೇ ತಿಳಿದುಕೊಳ್ಳಿ.!

    ಹೌದು, ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಂಸ್ಥೆಯು ತನ್ನ ಚಂದಾದಾರರಿಗೆ ‘ಹ್ಯಾಪಿ ನ್ಯೂ ಇಯರ್’ ಆಫರ್ ಅನ್ನು ಬಿಡುಗಡೆ ಮಾಡಿದೆ. 2020 ರೂ. ಬೆಲೆಯಲ್ಲಿ ಎರಡು ಭರ್ಜರಿ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ಲ್ಯಾನ್ ಜಿಯೋ ಚಂದಾದಾರರಿಗೆ ವಾರ್ಷಿಕ ಅವಧಿಯ ಪ್ರಯೋಜನೆಗಳನ್ನು ಒದಗಿಸಿದರೇ, ಇನ್ನೊಂದು ಕೊಡುಗೆಯು ಜಿಯೋ ಫೋನ್ ಗ್ರಾಹಕರಿಗೆ ವಾರ್ಷಿಕ ಧಮಾಕ ನೀಡಲಿದೆ. ಹಾಗಾದರೇ ಜಿಯೋದ ಹ್ಯಾಪಿ ನ್ಯೂ ಇಯರ್-2020 ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿರಿ. ಸ್ನೇಹಿತರೆ ರಿಲಯನ್ಸ್ ಜಿಯೋ ಹೊಸ…

  • ಸುದ್ದಿ

    ಅಳಿಯ ಚಿರು ಸರ್ಜಾ ಕುರಿತು ಅರ್ಜುನ್ ಸರ್ಜಾ ಅವರ ನೋವಿನ ಮಾತು.

    ನಟ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ಇಡೀ ಚಿತ್ರರಂಗವೇ ಕಂಬನಿಗರೆದಿದೆ. ಚಿಕ್ಕ ವಯಸ್ಸಿನಲ್ಲೇ ಅವರು ನಿಧನರಾಗಿದ್ದು ನಿಜಕ್ಕೂ ದುರದೃಷ್ಟಕರ. ಸರ್ಜಾ ಕುಟುಂಬದ ಮುದ್ದಿನ ಮಗನಾಗಿದ್ದ ಚಿರು ಅವರನ್ನು ಕಂಡರೆ ಅವರ ಮಾವ, ನಟ ಅರ್ಜುನ್ ಸರ್ಜಾ ಅವರಿಗೆ ಅಪಾರ ಪ್ರೀತಿ. ಇದೀಗ ತಮ್ಮ ಪ್ರೀತಿಯ ಅಳಿಯನ ಕುರಿತು ನೋವಿನ ಮಾತೊಂದನ್ನು ಹೇಳಿಕೊಂಡಿದ್ದಾರೆ ಅರ್ಜುನ್. ಜೂನ್‌ 7ರ ಭಾನುವಾರ ಮಧ್ಯಾಹ್ನ ಚಿರು ನಿಧನರಾದಾಗ ಅರ್ಜುನ್‌ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು, ಕುಟುಂಬದೊಂದಿಗೆ ಹೊರಟು ಬಂದಿದ್ದರು. ತಮ್ಮ ಕಣ್ಣ ಮುಂದೆ ಬೆಳೆದಿದ್ದ…