ಸುದ್ದಿ

ಎಸ್ಒಎಸ್ ಸಂಕೇತದಿಂದ ಪ್ರಾಣಾಪಾಯದಿಂದ ಪಾರಾದ ಮಹಿಳೆ,. ಹೇಗೆ ಗೊತ್ತಾ.?

38

ಅದು ಆಸ್ಟ್ರೇಲಿಯಾದ ಅರಣ್ಯ. ಅದೆಷ್ಟೋ ವನ್ಯಸಂಕುಲಕ್ಕೆ ಈ ಕಾಡೇ ಆಶ್ರಯ ತಾಣ. ಇಂತಹ ಕಾನನದಲ್ಲಿ 55 ವರ್ಷದ ಮಹಿಳೆಯೊಬ್ಬರು  ಗೊತ್ತಾಗದೇ ದಾರಿ  ತಪ್ಪಿದ್ದರು…! ಬರೋಬ್ಬರಿ ಮೂರು ದಿನಗಳ ಕಾಲ  ಇವರು ಕಾಡಿನಲ್ಲಿ ದಾರಿ ತಪ್ಪಿ ಭಯದಲ್ಲೇ ಅಲೆದಾಡುತ್ತಿದ್ದರು. ಅಂತಹ ಸಮಯದಲ್ಲಿ  ಮಹಿಳೆ ಪತ್ತೆಯಾಗಿದ್ದು        ಇದೊಂದು ಸಂಕೇತದಿಂದ ಆ ಸಂಕೇತವಾದರೂ ಏನು ಗೊತ್ತಾ,…

ಈಕೆ ಡೆಬೊರಾ ಪಿಲ್ಗ್ರಿಮ್. ಕಾಡಂಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಇವರು ಸಾಗುತ್ತಿದ್ದರು. ಒಬ್ಬರೇ ಇದ್ದರು. ಹೀಗೆ ಸಾಗುವಾಗ ಅಕಸ್ಮಾತ್  ದಾರಿ ತಪ್ಪಿದ್ದರು. ಹೀಗಾಗಿ, ಕತ್ತಲಾಗುತ್ತಿದ್ದಂತೆಯೇ ಅಲ್ಲೇ ವಾಸಕ್ಕೆ ಯೋಗ್ಯವಾದ ಸಣ್ಣ ಕುಟೀರದಂತೆ ಕಟ್ಟಿಕೊಂಡರು. ಆದರೆ, ಇಲ್ಲಿ ನೀರು ಕುಡಿದ ಬಳಿಕ ಇವರು ತೀವ್ರ ಅಸ್ವಸ್ಥರಾದರು. ಬಳಿಕ ಒಂದು ದಿನ ಕಳೆದ ಮೇಲೆ ಈ ಮಹಿಳೆ ಶುದ್ಧ ನೀರಿಗಾಗಿ ಹುಡುಕುತ್ತಿದ್ದರು. ಹೀಗೆ ಹೋಗುವಾಗ ಯಾವುದಕ್ಕೂ ಗುರುತಿಗೆ ಇರಲಿ ಎಂದು ನೆಲದ ಮೇಲೆ ದೊಡ್ಡದಾಗಿ sos ಎಂದು ಬರೆದಿದ್ದರು. ಇದನ್ನು ನೋಡಿಯಾದರೂ ಯಾರಾದರೂ ಬಂದು ರಕ್ಷಿಸುತ್ತಾರೆ  ಎಂಬ ಉದ್ದೇಶವೂ ಇವರದಾಗಿತ್ತು.

ಇತ್ತ, ನಾಪತ್ತೆಯಾದ ಈ ಮಹಿಳೆಗಾಗಿ ಅವರ ಮನೆಯವರ ಹುಡುಕಾಟವೂ ಶುರುವಾಗಿತ್ತು. ಹೀಗೆ ಹುಡುಕುತ್ತಿರುವ ತಂಡದ ಕ್ಯಾಮೆರಾಕ್ಕೆ ಮೊದಲು ಕಂಡಿದ್ದೇ ಈ `ಎಸ್‌ಓಎಸ್’ ಎಂಬ ಸಂಕೇತ. ಜೊತೆಗೆ, ಇನ್ನಷ್ಟು ಸೂಕ್ಷ್ಮವಾಗಿ ನೋಡಿದಾಗ ಇನ್ನೊಂದಷ್ಟು ದೂರದಲ್ಲಿ ನೀರು ಹುಡುಕಲು ಬಂದಿದ್ದ ಮಹಿಳೆ ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕಿದ್ದರು. ಹೀಗಾಗಿ, ತಕ್ಷಣ ಅಧಿಕಾರಿಗಳು ಇವರನ್ನು ರಕ್ಷಿಸಿದ್ದಾರೆ. ಈ ವೇಳೆ, ಇವರು ತುಂಬಾ ನಿತ್ರಾಣಗೊಂಡಿದ್ದರು ಎಂದು ರಕ್ಷಣಾ ತಂಡದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಖಾಸಗಿ ಆಸ್ತಿಯಾಗಿತ್ತು. ನೀಲ್ ಮ್ಯಾರಿಯಟ್ ಎಂಬಾತನ ಒಡೆತನದ ಆಸ್ತಿ ಇದು. ಈತ ತುಂಬಾ ದೂರದಲ್ಲಿದ್ದ. ಈತನಿಂದ ಮಾಹಿತಿ ಪಡೆದಿದ್ದ ಅಧಿಕಾರಿಗಳು ಮಹಿಳೆಯ ಹುಡುಕಾಟ ಆರಂಭಿಸಿದ್ದರು. ಡ್ರೋಣ್, ಹೆಲಿಕಾಪ್ಟರ್ ಮತ್ತು ಸ್ವಯಂಸೇವಕರ ನೆರವಿನಿಂದ ಆ ಮಹಿಳೆಯ  ಹುಡುಕಾಟವನ್ನು  ಶುರು ಮಾಡಿಕೊಂಡಿದ್ದರು.

ಈ ಕಾಡಿನಲ್ಲಿ ಅಪಾಯಕಾರಿಯಾದಂತಹ  ಹಾವುಗಳಿವೆ. ಇಲ್ಲಿನ  ಅಧಿಕಾರಿಗಳಿಗೂ  ಈ ವಿಷಯ  ಗೊತ್ತಿತ್ತು. ಇದೇ ಕಾರಣಕ್ಕೆ ಅಧಿಕಾರಿಗಳು ಆದಷ್ಟು ಬೇಗ ಮಹಿಳೆಯನ್ನು ರಕ್ಷಿಸಲೇಬೇಕೆಂಬ ಪಣ ತೊಟ್ಟಿದ್ದರು. ಇತ್ತ, ಸುರಕ್ಷಿತವಾಗಿ ಮರಳಿದ್ದಕ್ಕೆ ಮಹಿಳೆ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಕ್ಸಸ್ ಆದ ಖುಷಿಯಲ್ಲಿ     ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದ ಕಾರಣಕ್ಕಾಗಿ  ಪೊಲೀಸ್ ಅಧಿಕಾರಿಗಳೂ ಸಹ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ