ಸುದ್ದಿ

ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಈ ಕಾಲೇಜ್ ಕೈಗೊಂಡ ಕ್ರಮವೇನು ಗೊತ್ತ?ತಿಳಿದರೆ ಬಿದ್ದು ಬಿದ್ದು ನಗ್ತೀರಾ..!

37

ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿರುವ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ನಡೆದಿದೆ.

ಪರೀಕ್ಷಾ ಹಾಲ್ ನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮೆರಾ ನೋಡಿದ್ದೆವೆ. ಆದರೆ ಹಾವೇರಿಯ ನಗರದ ದನದ ಮಾರುಕಟ್ಟೆಯ ಎದುರಿಗಿರುವ ಭಗತ್ ಪಿಯುಸಿ ಕಾಲೇಜಿನಲ್ಲಿ ಮಕ್ಕಳು ಕಾಪಿ ಮಾಡಬಾರದು ಎಂದು ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿದ್ದಾರೆ.

ಗುರುವಾರ ನಡೆದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ಬರೆಸಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಇದನ್ನು ಕಂಡ ಡಿಡಿಪಿಐ ಅಧಿಕಾರಿ ಕಾಲೇಜು ಆಳಿತ ಮಂಡಳಿಯ ಈ ಕ್ರಮಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದು, ಇಂದು ಸಹಜ ಸ್ಥಿತಿಯಯಲ್ಲಿ ಆಡಳಿತ ಮಂಡಳಿ ಪರೀಕ್ಷೆ ಬರಿಸುತ್ತಿದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ