ಸುದ್ದಿ

ಕಡಲೆ ತಿನ್ನುವುದರಿಂದ ಗರ್ಭಿಣಿಯರಿಗಿರುವ ಪ್ರಯೋಜನಗಳೇನು ಗೊತ್ತಾ?ತಿಳಿಯಲು ಇದನ್ನೊಮ್ಮೆ ಓದಿ..!

45

ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ.

ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು ಇದನ್ನು ತಿನ್ನುವುದರಿಂದ ಪ್ರೊಟೀನ್, ನಾರಿನಂಶ, ಫೋಲೆಟ್, ಕಬ್ಬಿಣದಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ದೊರೆಯುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಇದನ್ನು ತಡೆಗಟ್ಟಲು ಪೋಷಕಾಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ರಕ್ತಹೀನತೆ ಸಮಸ್ಯೆ ಉಂಟಾದರೆ ಭ್ರೂಣದಲ್ಲಿರುವ ಮಗುವಿಗೆ ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ದೊರೆಯದೆ ತೊಂದರೆಯುಂಟಾಗತ್ತದೆ.

ಆದ್ದರಿಂದ ಗರ್ಭಾವಸ್ಥೆಯಲ್ಲಿ ಕಬ್ಬಿಣನಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಕಡಲೆ ತಿಂದರೆ ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗುವುದು, ಇದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಾಗುವುದು, ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾದರೆ ಮಗು ಅವಧಿಪೂರ್ವ ಹುಟ್ಟುವ ಸಾಧ್ಯತೆ ಇದೆ. ಕೆಲ ಗರ್ಭಿಣಿಯರಿಗೆ ಮಧುಮೇಹ (gestational diabetes)ಬರುತ್ತದೆ, ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾದಾಗ ಸಕ್ಕರೆಯಂಶ ಹೆಚ್ಚಾಗಿ ಮಧುಮೇಹ ಉಂಟಾಗುತ್ತದೆ. ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಕಡಲೆ ಸಹಕಾರಿಯಾಗಿದೆ. ಇದರಲ್ಲಿರುವ ನಾರಿನಂಶ ಇನ್ಸುಲಿನ್ ಸಮತೋಲನದಲ್ಲಿರುವಂತೆ ಮಾಡುತ್ತದೆ.

ಗರ್ಭಿಣಿಯರಿಗೆ ಮಗುವಿನ ಬೆಳವಣಿಗೆ ಸರಿಯಾಗಿ ಆಗಲು ಫಾಲಿಕ್‌ ಮಾತ್ರೆಗಳನ್ನು ನೀಡುತ್ತಾರೆ. ಕಡಲೆಯಲ್ಲಿ ಫೋಲೆಟ್ ಅಂಶ ಅಧಿಕವಿದ್ದು ಅದರಲ್ಲಿರುವ ಖನಿಜಾಂಶಗಳು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.. ಅಲ್ಲದೆ ಕಡಲೆಯಲ್ಲಿರುವ ಖನಿಜಾಂಶಗಳು ನ್ಯೂರೆಲ್‌ ಟ್ಯೂಬ್ ಡಿಫೆಕ್ಟ್‌ ಅಂದರೆ ಮಗುವಿನ ಮೆದುಳು ಹಾಗೂ ಬೆನ್ನುಮೂಳೆಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಈ ಸಮಸ್ಯೆ ಗರ್ಭಿಣಿಯಾದ ಮೊದಲ ತಿಂಗಳಿನಲ್ಲಿ ಕೆಲವರಲ್ಲಿ ಕಂಡು ಬರುತ್ತದೆ. ಇದನ್ನು ತಡೆಗಟ್ಟುವಲ್ಲಿ ಪೋಷಕಾಂಶಗಳಿರುವ ಇಂಥ ಆಹಾರಗಳು ಸಹಕಾರಿ. ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕಡಲೆಯಲ್ಲಿ ನಾರಿನಂಶಗಳು ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇನ್ಮುಂದೆ ಡಬ್ಬಿಂಗ್ ಮಾಡುವ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಯಾವ ಕಿರಿಕಿರಿಯೂ ಇಲ್ಲ,..!!!ಇಷ್ಟಕ್ಕೂ ಈ ಸುದ್ದಿ ಯಾಕೆ ಬಂತು ಗೊತ್ತಾ ,.!!

    ಕಿಚ್ಚ ಸುದೀಪ್‌,ಮೆಗಾಸ್ಟಾರ್‌ ಚಿರಂಜೀವಿ ನಟನೆಯ ‘ಸೈರಾ’ ಬೆನ್ನಲ್ಲೇ ಮತ್ತೊಂದು ಭಾರೀ ಬಜೆಟ್‌ನ ಸಿನಿಮಾ ‘ದಬಾಂಗ್‌ 3’ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗಲಿದೆ. ಸೈರಾ ಚಿತ್ರವಂತೂ ಯಾವುದೇ ಅಡ್ಡಿ ಇಲ್ಲದೆ ರಿಲೀಸ್‌ ಆಗಿದೆ. ಇನ್ನು ಸುದೀಪ್‌ ನಟಿಸಿದ್ದಾರೆಂಬ ಕಾರಣಕ್ಕೆ ದಬಾಂಗ್‌-3ಸಿನಿಮಾ ಕೂಡ ಅಷ್ಟೇ ಸಲೀಸಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಿಸೆಂಬರ್‌ನಲ್ಲಿಕ್ರಿಸ್‌ಮಸ್‌ ಹಬ್ಬದ ಹೊತ್ತಿಗೆ ದಬಾಂಗ್‌-3 ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಕನ್ನಡಕ್ಕೆ ಡಬ್‌ ಆಗಿರುವ ‘ಸೈರಾ’ ಸಿನಿಮಾಗೆ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ದಬಾಂಗ್‌ 3…

  • ಆರೋಗ್ಯ

    ಈಗಿನ ಚಳಿಗಾಲದಲ್ಲಿ ಆರೋಗ್ಯದ ಮೇಲೆ ಪ್ರಭಾವ ಬೀರುವ ಅನೇಕ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಪರಿಹಾರ.

    ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ.  ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು. ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ…

  • ಸುದ್ದಿ

    18ನೇ ವೆಡ್ಡಿಂಗ್ ಡೇ ವಾರ್ಷಿಕೋತ್ಸವದಲ್ಲಿ ಸುದೀಪ್ ದಂಪತಿಯ ಸಂಭ್ರಮ…!

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸುದೀಪ್ ಹಾಗೂ ಪ್ರಿಯಾ ಅಕ್ಟೋಬರ್ 18, 2001ರಲ್ಲಿ ಮದುವೆಯಾಗಿದ್ದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 18 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರಿಗೂ ಶುಭಾಶಯ ತಿಳಿಸುತ್ತಿದ್ದಾರೆ. ನೆಚ್ಚಿನ ನಟ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಸುದೀಪ್ ಅಭಿಮಾನಿಗಳ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧವಾದ ಪೋಸ್ಟರ್ ಗಳನ್ನು ಪೋಸ್ಟ್…

  • ಮನೆ

    ಗೃಹಿಣಿ ನೆನಪಿಟ್ಟುಕೊಳ್ಳಬೇಕಾದ 10 ಸಂಗತಿಗಳು ಯಾವುವು ಗೋತಾ..?ತಿಳಿಯಲು ಈ ಲೇಖನ ಓದಿ ..

    ಜಾಮ್‌ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.

  • ಉಪಯುಕ್ತ ಮಾಹಿತಿ

    ನಿಮ್ಮ ಮಕ್ಕಳಿಗೆ ಕಣ್ಣಿಗೆ ಕಾಡಿಗೆ ಹಚ್ಚೋ ಮುಂಚೆ ಇದನೊಮ್ಮೆ ತಪ್ಪದೇ ಓದಿ…

    ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಲಾಗುತ್ತದೆ. ಆದ್ರೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚೋದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಮಕ್ಕಳ ಕಣ್ಣಿಗೆ ಕೈ ತಾಗುವುದುಂಟು. ಹಾಗೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ. ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆ. ಇದು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ. ಪ್ರತಿ ದಿನ…