ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಘೋಷಿಸಿದ್ದಾರೆ. ಕಲಬುರಗಿ ಪಾಲಿಕೆಯ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಭೀಮಾ ನದಿ, ಬೆಣ್ಣೆತೊರಾವಲ್ಲದೆ, ನಗರದ ಕಲ್ಯಾಣಿಗಳು, ಬಾವಿಗಳು ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ ಸಾಕಾರಗೊಳಿಸಿ, ಕಲಬುರಗಿ ನಗರಕ್ಕೆ ನಿರಂತರ 24ಘಿ7 ಕುಡಿಯುವ ನೀರು ಪೂರೈಸಲಾಗುವುದು ಎಂದು ಅವರು ಧೃಡ ವಿಶ್ವಾಸದಿಂದ ನುಡಿದರು.ನಗರ ಪ್ರತಿವರ್ಷ ಬೆಳೆಯುತ್ತಾ ಹೋಗುತ್ತಿದೆ. ಇಂದು ನಗರದ ಜನಸಂಖ್ಯೆ ಅಧಿಕವಾಗುತ್ತಿದೆ. ಆ ಕಾರಣದಿಂದಾಗಿ ನೀರು ಕೂಡ ಅದೇ ಪ್ರಮಾಣದಲ್ಲಿ ಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕಲಬುರಗಿ ಮಹಾನಗರದಲ್ಲಿ ಐಎಸ್‍ಐ ಗುರುತು ಇಲ್ಲದ ನೀರಿನ ಕ್ಯಾನ್ ವಾಟರ್ ಮಾರುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸ್ಮಾರ್ಟ್ ಸಿಟಿ ಕೇಂದ್ರ ಸರ್ಕಾರ ಮಾಡುವಂತಹದ್ದು, ಅದಕ್ಕೆ ನಾವು ಕಾಯ್ತಿಲ್ಲ. ರಾಜ್ಯ ಈಗಾಗಲೇ ಎಲ್ಲಾ ರೀತಿಯಿಂದ ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾದರಿಯಲ್ಲೇ ಅಭಿವೃದ್ಧಿ ಪಡಿಸುತ್ತಿದೆÉ. ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಆಯುಕ್ತರ ಕಾರ್ಯಾಲಯ, ರಿಂಗ್ ರೋಡ್ ಸೇರಿದಂತೆ ಹಲವು ಕೆಲಸಗಳನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿದರು.

ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಹೈದ್ರಾಬಾದ-ಕರ್ನಾಟಕಕ್ಕೆ 371ಜೆ ಬಂದ ನಂತರ 30 ಸಾವಿರ ಉದ್ಯೋಗ ಸೃಷ್ಟಿಯಾಗಿವೆ. ಖಾಲಿ ಹುದ್ದೆಗಳ ತುಂಬುವ ನಿಟ್ಟಿನಲ್ಲಿ ಹೈದ್ರಾಬಾದ್ ಕರ್ನಾಟಕ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಈ ಭಾಗಕ್ಕೆ ವರ್ಗಾಯಿಸುವಂತಹ ಕೆಲಸ ನಡೆದಿದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲಾ ಮಹಾನಗರಗಳ ವ್ಯಾಪ್ತಿಯಲ್ಲಿ ಎಲ್ಲಿ ದೊಡ್ಡ ಕಾಲುವೆಗಳು ಇವೆಯೋ ಅವುಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾಮಗಾರಿಯನ್ನು ಅದಷ್ಟು ಬೇಗ ಕೈಗೊಳ್ಳಲಾಗುವುದು. ರಸ್ತೆ ಅಭಿವೃದ್ಧಿ ಸೇರಿದಂತೆ ನಗರ ಅಭಿವೃದ್ಧಿಗೆ 8 ಲಕ್ಷಕ್ಕಿಂತ ಜನಸಂಖ್ಯೆ ಕಡಿಮೆ ಇರುವ ರಾಜ್ಯದ ಮಹಾನಗರ ಪಾಲಿಕೆಯಲ್ಲಿ ಈ ವರ್ಷ 125 ಕೋಟಿ ರೂ.ಗಳು ಬಿಡುಗಡೆ ಮಾಡಿದ್ದೇವೆ. 10 ಲಕ್ಷ ಜನಸಂಖ್ಯೆ ಇರುವ ಮಹಾನಗರಗಳಿಗೆ 150 ಕೋಟಿ ರೂ.ಗಳು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.
ನವದೆಹಲಿ: ಈ ಯುವಕ-ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅದೇನಾಯಿಯೋ ಯುವಕ ಮದುವೆಯಾಗಲು ನಿರಾಕರಿಸಿದ. ನಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವತಿ ಬಳಿ ಹೇಳಿದ. ಅದನ್ನು ಕೇಳಿದ ಯುವತಿ ಅಳಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಬದಲಿಗೆ ಕ್ರೂರವಾಗಿ ಸೇಡು ತೀರಿಸಿಕೊಂಡಳು. ಘಟನೆ ನಡೆದಿದ್ದು ದೆಹಲಿಯ ವಿಕಾಸಪುರಿಯಲ್ಲಿ. ಜೂನ್ 11ರಂದು ಬೈಕ್ನಲ್ಲಿ ಹೋಗುತ್ತಿದ್ದರು. ಯುವಕ ಅದಾಗಲೇ ಮದುವೆ ಬೇಡ ಎಂದಿದ್ದ. ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಆತನ ಬಳಿ ಹೆಲ್ಮೆಟ್ ತೆಗೆಯುವಂತೆ ಕೇಳಿದ್ದಾಳೆ. ಆತ ತೆಗೆದಕೂಡಲೇ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ….
ನಾವು ಹುಟ್ಟುವಾಗ ಒಬ್ಬರಾಗಿ ಈ ಪ್ರಪಂಚಕ್ಕೆ ಬರುತ್ತೇವೆ ಮತ್ತು ಸಾಯುವಾಗ ಒಬ್ಬರಾಗಿ ಸಾಯುತ್ತೇವೆ ಮತ್ತು ನಮ್ಮ ಸಾವನ್ನ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನ ಯಾರು ಭರಿಸಲು ಕೂಡ ಸಾಧ್ಯವಿಲ್ಲ. ನಾವು ಕಷ್ಟದಲ್ಲಿ ಇದ್ದಾಗ ಒಂದು ಹಂತದ ತನಕ ಮಾತ್ರ ಯಾರಾದರೂ ಸಹಾಯ ಮಾಡಬಲ್ಲರು ಆದರೆ ಅದರಿಂದ ಆಚೆ ನಾವೇ ಹೋರಾಡಬೇಕು ಮತ್ತು ನಾವೇ ಬದುಕುವ ದಾರಿಯನ್ನ ಹುಡುಕಾಡಬೇಕು ಯಾಕೆ ಅಂದರೆ ಜೀವನ ಅನ್ನುವುದು ಪ್ರತಿ ಕ್ಷಣದ ಹೋರಾಟ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ…
ಇತ್ತೀಚೆಗಷ್ಟೇ ಮುಂಬೈನ ಕಮಲಾ ಮಿಲ್ಸ್’ನಲ್ಲಿ ಅಗ್ನಿ ದುರಂತ ನಡೆದಿದ್ದು, ಸರಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡು, ತುಂಬಾ ಚರ್ಚೆಗೆ ಕಾರಣವಾಗಿದೆ.ಇದೇ ಸಮಯದಲ್ಲಿ ಒಬ್ಬ ಪೋಲೀಸ್ ಪೇದೆ ರಿಯಲ್ ಹಿರೋನಂತೆ ಮಾಡಿರುವ ಸಾಹಸ, ನಿಜಕ್ಕೂ ಮೈ ಜುಮ್ಮೆನಿಸುವನ್ತಾಗಿದ್ದು,ಅದರಲ್ಲಿನ ಒಂದು ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.
ವೆಂಕಟ ಎಂದರೆ ಸಂಕಟ ಒಂದಿಷ್ಟಿಲ್ಲಾ ಎನ್ನುವ ಹಾಗೆ.. ಹರಿ ನಾಮ ಸ್ಮರಣೆಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ.. ಈಗ ವೈಜ್ಞಾನಿಕವಾಗಿಯೂ ಸಾಭೀತಾಗಿದೆ ನೋಡಿ..ಈ ಒಂದು ಮಂತ್ರದಿಂದ ಹಾರ್ಟ್ ಅಟ್ಯಾಕ್ ಅನ್ನು ಕೂಡ ತಡೆಯಬಹುದು ಇಲ್ಲಿದೆ ನೋಡಿ ಪುರಾವೆ.. ವಿಠ್ಠಲನ ನಾಮ ಸ್ಮರಣೆಯಿಂದ ಹೃದಯಾಘಾತವಾಗಲ್ಲ, ಹೌದು ಇಂತಹದೊಂದು ಸಂಗತಿಯನ್ನು ಪುಣೆ ಮೂಲದ ತಜ್ಞರ ತಂಡವೊಂದು ಹಲವಾರು ಜನರನ್ನು ಪರೀಕ್ಷೆಗೆ ಒಳಪಡಿಸಿ ಹೇಳಿದೆ. ವಿಠ್ಠಲ ವಿಠ್ಠಲ ಎಂದು ನಾಮಸ್ಮರಣೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯ ಸಮಸ್ಯೆಗಳೇ…
ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…