ಸುದ್ದಿ

ವಿದ್ಯುತ್ ದರ ಪ್ರತಿ ಯೂನಿಟ್ ಗೆ 33 ಪೈಸೆ ಏರಿಕೆ…ಕಾರಣ?

74

ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಸ್ತಾವನೆ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯೂನಿಟ್‍ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ. 14.14, ಮೆಸ್ಕಾಂ 20.49, ಚೆಸ್ಕಾಂ 15.02, ಹೆಸ್ಕಾಂ 24.67 ಹಾಗೂ ಜಸ್ಕಾಂ 18.89 ರಷ್ಟು ಏರಿಕೆ ಹೆಚ್ಚಿಸುವಂತೆ ಒಟ್ಟಾರೆ ಶೇ.17.37 ರಷ್ಟು ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದವು.

ಗೃಹಬಳಕೆ ಗ್ರಾಹಕರಿಗೆ ಅನ್ವಯವಾಗುವ ದರ:
ಬೆಸ್ಕಾಂ ವ್ಯಾಪ್ತಿಯ ಹಾಗೂ ಇತರೆ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸ್ಥಾವರಗಳಿಗೆ ಪ್ರತಿ ಯೂನಿಟ್‍ಗೆ 25 ಪೈಸೆ ಒಟ್ಟಾರೆ ಹೆಚ್ಚಳವಾಗಿದೆ. 30 ಯೂನಿಟ್‍ಗಳವರೆಗೆ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪ್ರಸಕ್ತ ದರ 3.50 ರೂ.ನಿಂದ ರೂ. 3.75 ಕ್ಕೆ ಏರಿಸಲಾಗಿದೆ. 31-100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.4.95 ರಿಂದ ರೂ.5.20 ಕ್ಕೆ ಏರಿಕೆಯಾಗಿದೆ.
ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಡಿಯ ಗ್ರಾಮೀಣ ಪ್ರದೇಶದ ಗೃಹ ಬಳಕೆದಾರರಿಗೆ 1-30 ಯೂನಿಟ್‍ವರೆಗೆ ಮಾಸಿಕ ಬಳಕೆಗೆ ಪ್ರಸಕ್ತ ರೂ.3.40 ಇದ್ದು, ಇದು ರೂ.3.65 ಕ್ಕೆ ಹಾಗೂ 31-100 ಯೂನಿಟ್‍ಗೆ ರೂ.4.65 ರಿಂದ ರೂ.4.90 ಕ್ಕೆ ಹೆಚ್ಚಿಸಲಾಗಿದೆ. 101-200 ಯೂನಿಟ್‍ಗೆ ರೂ.6.20 ರಿಂದ ರೂ.6.45 ಕ್ಕೆ ಏರಿಕೆಯಾಗಿದೆ.

ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ 1-300 ಯೂನಿಟ್‍ಗಳವರೆಗೆ ಪ್ರತಿ ತಿಂಗಳಿಗೆ ರೂ.3.70, 200 ಯೂನಿಟ್‍ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.7.55- ರೂ.7.80 ಕ್ಕೆ ಏರಿಕೆಯಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿ ಗೃಹಬಳಕೆ ಗ್ರಾಹಕರಿಗೆ 1-30 ಯೂನಿಟ್‍ವರಗೆ ರೂ.36, 200 ಯೂನಿಟ್‍ ಮೇಲ್ಪಟ್ಟ ಬಳಕೆಗೆ ರೂ.7.05-7.30 ರಷ್ಟು ಹೆಚ್ಚಿಸಲಾಗಿದೆ.
ಕೈಗಾರಿಕಾ ಬಳಕೆದಾರರಿಗೆ ಪ್ರಸಕ್ತ ಪ್ರತಿ ಯೂನಿಟ್‍ಗೆ 15 ಪೈಸೆಯಿಂದ 20 ಪೈಸೆಯಿರುತ್ತದೆ. ಬೆಸ್ಕಾಂ ವ್ಯಾಪ್ತಿ, ಪುರಸಭೆ ಎಲ್‍.ಟಿ.ಕೈಗಾರಿಕಾ ಬಳಕೆದಾರರಿಗೆ, ಮೊದಲ 500 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.5.65 ಹಾಗೂ 500 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.6.95 ದರ ಹೆಚ್ಚಿಸಿದೆ. ಇತರ ಪ್ರದೇಶಗಳ ಬಳಕೆದಾರರಿಗೆ ಮೊದಲ 500 ಯೂನಿಟ್‍ಗಳಿಗೆ ರೂ.3.35, ಅದಕ್ಕೂ ಮೇಲ್ಪಟ್ಟ ಬಳಕೆಗೆ ರೂ.6.30 ಆಗಿದೆ.
ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ ರೂ.8 50, ಅದರ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.9 ಗ್ರಾಮಾಂತರ ಪ್ರದೇಶದಲ್ಲಿ ಇದು ಆರಂಭಿಕ ಯೂನಿಟ್ ಗೆ ರೂ.7.50 ಹಾಗೂ 50 ಯೂನಿಟ್ ಮೀರಿದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.8.50 ದರ ಹೆಚ್ಚಳ ಆಗುತ್ತದೆ.
ಬೆಸ್ಕಾಂ, ಬಿಬಿಎಂಪಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶ ಹಾಗೂ ಇತರೆ ಪ್ರದೇಶಗಳ ಹೆಚ್.ಟಿ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ 20 ಪೈಸೆ ಏರಿಕೆಯಾಗಿದೆ.
ಇತರೆ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿನ ಹೆಚ್‍.ಟಿ.ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುವ ವಿದ್ಯುತ್‍ಚ್ಛಕ್ತಿ ದರಗಳಲ್ಲಿ ಪ್ರತಿ ಯೂನಿಟ್‍ಗೆ 20 ಪೈಸೆಗಳ ಏರಿಕೆಯಾಗಿರುತ್ತದೆ.
ಇತರೆ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯ ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿನ ಎಲ್‍.ಟಿ.ಪ್ರವರ್ಗಕ್ಕೆ ಮೊದಲ 200 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪರಿಷ್ಕೃತ ದರ ರೂ.6.90 ಹೆಚ್ಚಳವಾಗಿದೆ.

ಹೆಚ್.ಟಿ.ಪ್ರವರ್ಗದಲ್ಲಿ ವಿದ್ಯುತ್ ಪಡೆಯುವ ಬೆಸ್ಕಾಂ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಧರ್ಮಾರ್ಥ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಅನುದಾನಿತ ವಿದ್ಯಾ ಸಂಸ್ಥೆಗಳ ಮೊದಲ 1 ಲಕ್ಷ ಯೂನಿಟ್‍ ವಿದ್ಯುತ್ ಮಾಸಿಕ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್ ಗೆ ರೂ.6.85 ಆಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿನ ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೊದಲ ಒಂದು ಲಕ್ಷ ಯೂನಿಟ್‍ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್‍ಗೆ ರೂ.7.85 ಆಗಲಿದೆ. ಇತರ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿ ಪ್ರದೇಶಗಳಲ್ಲಿ ಮೊದಲ ಒಂದು ಲಕ್ಷ ಯೂನಿಟ್‍ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಯೂನಿಟ್‍ಗೆ ರೂ.7.80 ಹಾಗೂ ಒಂದು ಲಕ್ಷ ಯೂನಿಟ್‍ಗಳ ನಂತರದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.8.20 ಆಗುತ್ತದೆ.
ಹಸಿರು ದರ: ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಖರೀದಿ ಮತ್ತು ಉಪಯೋಗವನ್ನು ಉತ್ತೇಜಿಸಲು ಹೆಚ್.ಟಿ.ಕೈಗಾರಿಕೆ ಮತ್ತು ಹೆಚ್.ಟಿ.ವಾಣಿಜ್ಯ ಗ್ರಾಹಕರು ಇಚ್ಛಿಸಿದಲ್ಲಿ ಅವರಿಗೆ ಅನ್ವಯವಾಗುವ ದರಕ್ಕಿಂತ ಪ್ರತಿ ಯೂನಿಟ್‍ಗೆ 50 ಪೈಸೆಯಷ್ಟು ಹೆಚ್ಚಿನ ಹಸಿರು ದರವನ್ನು ಮುಂದುವರೆಸಿರುವದಾಗಿ ಆಯೋಗ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನ. 25ರ ಕಡೆಯ ಕಾರ್ತೀಕ ಸೋಮರವರದ ಕಡಲೆಕಾಯಿ ಪರಿಷೆಗೆ ವಿನೂತನ ಕಾರ್ಯಕ್ರಮಗಳೊಂದಿಗೆ ಸಜ್ಜಾಗುತ್ತಿರುವ ಬೆಂಗಳೂರಿನ ಬಸವನಗುಡಿ…!

    ಪ್ರತಿ ವರ್ಷದಂತೆ ಈ ಬಾರಿಯೂ ಹೊಸತನದೊಂದಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಗಾಗಿ ಬಸವನಗುಡಿ ಸಜ್ಜಾಗುತ್ತಿದೆ. ಕಡೇ ಕಾರ್ತೀಕ ಸೋಮವಾರ(ನ.25)ದಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಪರಿಚಯಿಸಲು ಭಿನ್ನರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಪರಿಷೆಗೆ ರಾಮನಗರ, ಮಾಗಡಿ, ಕನಕಪುರ,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಕಡ್ಲೆಕಾಯಿ ಬರುತ್ತದೆ. ಈ ಬಾರಿ ಈ ಭಾಗಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ…

  • ಕ್ರೀಡೆ

    ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಬಾಂಗ್ಲಾದೇಶದ ಕಿಡಿಗೇಡಿ ಕ್ರಿಕೆಟ್ ಅಭಿಮಾನಿಗಳು!ತಿಳಿಯಲು ಈ ಲೇಖನ ಓದಿ….

    ದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.

  • ಸುದ್ದಿ

    ಮದುವೆಯಾದ ಮೊದಲ ರಾತ್ರಿಯ ನಂತರ ಬೆಳಿಗ್ಗೆ ಮನೆ ಬಿಟ್ಟ ವಧು!ಅಸಲಿ ವಿಷಯ ನೀವು ಅಂದುಕೊಂಡ ಹಾಗೆ ಇಲ್ಲ….

    ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ  ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…

  • ಸುದ್ದಿ

    100ಕ್ಕೂ ಹೆಚ್ಚು ಪುರುಷರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಬಂಧಿಸಿದ್ರು…..ಕಾರಣ?

    ಇಂಗ್ಲೆಂಡ್ ನ ವೆಸ್ಟ್ ಯಾರ್ಕ್ ನಲ್ಲಿ 23 ವರ್ಷದ ಮಹಿಳೆ ಹೇಳಿದ ವಿಷ್ಯ ದಂಗಾಗಿಸುವಂತಿದೆ. 100ಕ್ಕೂ ಹೆಚ್ಚು ಪುರುಷರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರಂತೆ. ಆದ್ರೆ ಆರೋಪಿಗಳನ್ನು ಬಂಧಿಸುವ ಬದಲು ಮಹಿಳೆಯನ್ನೇ ಪೊಲೀಸರು ಅನೇಕ ಬಾರಿ ಬಂಧಿಸಿದ್ದಾರಂತೆ. ಪೀಡಿತೆ 11 ವರ್ಷದಲ್ಲಿರುವಾಗ ಆಕೆ ಮೇಲೆ ಅತ್ಯಾಚಾರ ನಡೆಯಲು ಶುರುವಾಗಿತ್ತಂತೆ. ಡ್ರಗ್ ನೀಡಿ ಪೀಡಿತೆ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತಂತೆ. ಇದು ಪೊಲೀಸರಿಗೂ ತಿಳಿದಿತ್ತಂತೆ. ಆದ್ರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು ಎನ್ನಲಾಗಿದೆ. ಡ್ರಗ್ಸ್ ಜೊತೆ ಪೀಡಿತೆ ಸಿಕ್ಕಿಬಿದ್ದಾಗ ಆಕೆಗೆ ಎಚ್ಚರಿಕೆ ನೀಡಿ…

  • ಸುದ್ದಿ

    ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಈತ 100 ಕಿ.ಮೀ. ದೂರದಿಂದ ಎದ್ದು ಬಂದಿದ್ದೇಗೆ ಗೊತ್ತಾ?

    ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್‌ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಚಳಿಗಾಲದಲ್ಲಿ ಗೋಡಂಬಿ ಸೇವನೆ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ!

    ಚಳಿಗಾಲ ಬಂತೆಂದರೆ ಏನನ್ನಾದರೂ ತಿನ್ನುತ್ತಲೇ ಇರಬೇಕು ಎನಿಸದೇ ಇರದು. ಕಾಳು, ಹಣ್ಣುಗಳು, ತುಪ್ಪದಂತಹ ಪದಾರ್ಥಗಳು ದೇಹದ ಉಷ್ಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ, ಹಾಗಾಗಿ ಈ ಬಗೆ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ದೇಹದ ಉಷ್ಣತೆ ಕಾಪಾಡುವುದರ ಜತೆಗೆ ಕಾಯಿಲೆ ಬೀಳದಿರಲು ಇದೊಂದು ಒಳ್ಳೆಯ ಉಪಾಯವೂ ಹೌದು. ಶೇಂಗಾ ಮತ್ತು ದ್ವಿದಳ ಧಾನ್ಯಗಳು, ಬಾದಾಮಿ ಮತ್ತು ಗೋಡಂಬಿ ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ಉತ್ತಮ. ಅಲ್ಲದೆ ಇವು ದೇಹದೊಳಗಿನ ಕೊಲೆಸ್ಟ್ರಾಲ್​ನ್ನು ಹೆಚ್ಚಿಸುವುದಿಲ್ಲ. ಗೋಡಂಬಿ ಸೇವನೆಯಿಂದ ದೇಹದೊಳಗೆ ಕೊಲೆಸ್ಟ್ರಾಲ್​…