ಸುದ್ದಿ

ಪ್ರಸಿದ್ಧ ತಾಣದಲ್ಲಿರುವ ಈ ಹೋಟೆಲ್​ನಲ್ಲಿ ರೂಂ ಬಾಡಿಗೆ ದಿನಕ್ಕೆ ಕೇವಲ 66 ರೂಗಳು ಮಾತ್ರ.! ಆದ್ರೆ ಕಂಡೀಷನ್ಸ್ ಅಪ್ಲೈ…

29

ನೀವು ಪ್ರವಾಸಕ್ಕಾಗಲಿ, ಬ್ಯುಸಿನೆಸ್ ಕಾರಣಕ್ಕಾಗಲಿ ಬೇರೆ ಊರಿಗೆ ಅಥವಾ ವಿದೇಶಕ್ಕೆ ಹೋದಾಗ, ಅಲ್ಲಿ ಉಳಿದುಕೊಳ್ಳಲು ಸಾಕಷ್ಟು ಖರ್ಚು ಮಾಡ್ಬೇಕಾಗುತ್ತೆ. ಯಾವುದೇ ಹೋಟೆಲ್​ಗಳಲ್ಲಿ ಉಳಿದುಕೊಂಡ್ರು, ಬಿಲ್ ಸಾವಿರಗಟ್ಟಲೆ ಆಗುತ್ತೆ. ಜಪಾನ್​ನ ಫುಕುಯೋಕಾದಲ್ಲಿರುವ ಅಸಾಹಿ ರ್ಯೋಕನ್ ಎಂಬ ಹೊಟೆಲ್​ನಲ್ಲಿ ಒಂದು ದಿನಕ್ಕೆ ಕೇವಲ 100 ಎನ್​ಗೆ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಜಸ್ಟ್ 66 ರೂಪಾಯಿಗೆ ರೂಂ ನೀಡಲಾಗುತ್ತೆ.

ಆದ್ರೆ ಎಲ್ಲಾ ರೂಂಗಳಿಗೂ ಇದೇ ರೇಟ್ ಅಲ್ಲ. ಹೊಟೆಲ್​ನ 8ನೇ ನಂಬರಿನ ರೂಂಗೆ ಮಾತ್ರ ಈ 100 ಎನ್ ಫಿಕ್ಸ್​ ಮಾಡಲಾಗಿದೆ. ಒಂದು ರೂಂಗೆ ಮಾತ್ರ ಕಡಿಮೆ ಬಾಡಿಗೆ ಅಂದ್ರೆ ಅಲ್ಲೇನೋ ಸಮಸ್ಯೆ ಇದೆ ಅಂತ ಯೋಚ್ನೆ ಮಾಡ್ಬೇಡಿ. ಬೇರೆ ರೂಂನಂತೆಯೇ ಈ ರೂಂ ಕೂಡ ಚೆನ್ನಾಗಿಯೇ ಇದೆ. ಆದ್ರೆ ಒಂದು ಕಂಡೀಷನ್ ಮಾತ್ರ ಅಪ್ಲೈ ಆಗುತ್ತೆ.

ಕಂಡೀಷನ್ ಏನಪ್ಪಾ ಅಂದ್ರೆ, ನೀವು ಆ ರೂಂನಲ್ಲಿರೋ ಇಡೀ ದಿನವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತೆ. ಅಂದ್ರೆ ನೀವು ಆ ರೂಂ ಒಳಗೆ ಹೋದ ನಂತರ ಏನು ಮಾಡ್ತೀರಿ ಅನ್ನೋ ಪ್ರತಿಯೊಂದು ವಿಷಯವೂ ಕೂಡ ಯೂಟ್ಯೂಬ್​ನಲ್ಲಿ ಲೈವ್ ಆಗಿ ಪ್ರಸಾರ ಆಗುತ್ತೆ. ಅಯ್ಯೋ ನಮ್ಮ ಪ್ರೈವೇಟ್ ಮಾತುಕತೆಗಳು ಬಹಿರಂಗವಾಗುತ್ತೆ ಅನ್ನೋ ಭಯ ಬೇಕಿಲ್ಲ. ಯಾಕಂದ್ರೆ ವಿಡಿಯೋ ಮಾತ್ರ ಪ್ಲೇ ಆಗುತ್ತೆ ಹೊರತು, ಆಡಿಯೋ ಪ್ಲೇ ಆಗೋದಿಲ್ಲ.

ಇದೊಂದು ಜಪಾನೀಸ್​ ಸ್ಟೈಲ್​ನಲ್ಲಿರುವ ರೂಂ ಆಗಿದ್ದು, ಮಲಗೋದಕ್ಕೆ ಒಂದು ಮ್ಯಾಟ್​ನ ವ್ಯವಸ್ಥೆ ಇದೆ. ನೋಡೋದಕ್ಕೆ ಟಿವಿ ಕೂಡ ಇರುತ್ತೆ. ಅಲ್ಲದೇ ಚಿಕ್ಕದೊಂದು ಕಾಫಿ ಟೇಬಲ್ ವ್ಯವಸ್ಥೆ ಕೂಡ ಇರುತ್ತೆ. ಯಾವುದೇ ಬ್ಲೈಂಡ್ ಸ್ಪಾಟ್ ಇಲ್ಲದಂತೆ ರೂಂನ ಮಧ್ಯ ಭಾಗದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ. ಆದ್ರೆ ಬಾತ್​ರೂಂಗೆ ಮಾತ್ರ ಕ್ಯಾಮೆರಾ ವ್ಯವಸ್ಥೆ ಇಲ್ಲ.ಈ ರೂಮ್​ನಲ್ಲಿ ಯಾರೇ ಉಳಿದುಕೊಂಡ್ರೂ ಅದರ ವಿಡಿಯೋ ‘ಒನ್ ಡಾಲರ್ ಹೊಟೆಲ್’ ಅನ್ನೋ ಯೂಟ್ಯೂಬ್​ ಚಾನೆಲ್​ನಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತೆ. ಈಗಾಗಲೇ ಸಾಕಷ್ಟು ಮಂದಿ ಈ ಅನುಭವವನ್ನು ಪಡೆದುಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ

    ಕೋಲಾರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ, ಹೊಳೂರು ಹೋಬಳಿ, ನಾಯಕರಹಳ್ಳಿ ಗ್ರಾಮದ ಮುಬಾರಕ್ ಪಾಷ ಬಿನ್ ಅಜೀಜ್‌ಸಾಬಿ ಎಂಬಾತನು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಬೈರರವರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸ್ಪೇಷಲ್ ಸಿ. (ಪೋಕ್ಸೋ) ಪ್ರಕರಣದ ಸಂಖ್ಯೆ: 70/2022ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಶ್ರೀ…

  • ಆಟೋಮೊಬೈಲ್ಸ್

    ಈ ಸ್ಕೂಟರ್ 125 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ..! ತಿಳಿಯಲು ಈ ಲೇಖನ ಓದಿ..

    ಯುಜೆಟ್ ಎಂಬ ಹೆಸರಿನ ಫೋಲ್ಡ್ ಮಾಡಬಹುದಾದ ಒಂದು ಅನನ್ಯ ಸ್ಕೂಟರನ್ನು ತರಲು ಸಿದ್ಧವಾಗಿದೆ. ಬ್ಯಾಟರಿ ಚಾಲಿತವಾದ ಈ ಸ್ಕೂಟರ್ ಪೂರ್ಣ ಚಾರ್ಜ್ ಮಾಡಿದ ನಂತರ 125 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎಂದು ಕಂಪನಿ ಹೇಳಿದೆ. 2018 ರಲ್ಲಿ ಲಾಸ್ ವೇಗಾಸ್ನಲ್ಲಿ ಓಡುವ ಸ್ಕೂಟರ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) ಅನ್ನು ಯುಜೆಟ್ ಕಂಪನಿಯು ಪ್ರಾರಂಭಿಸಿದೆ.

  • ಕರ್ನಾಟಕ

    ರೈತರ ಸಾಲ ಮನ್ನಾ ಮಾಡಿ, ಮೋದಿಗೆ ಸವಾಲ್ ಹಾಕಿದ ಸಿದ್ದರಾಮಯ್ಯ!!!

    ಬಿಜೆಪಿ ಆಡಳಿತ ಸರ್ಕಾರವಿರುವ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ರೈತರ ಸಾಲಮನ್ನಾ, ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯಾದ ನಂತರ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳು ತೀವ್ರವಾಗಿ ಆಗ್ರಹಿಸಿದ್ದವು.

  • ಆರೋಗ್ಯ, ಉಪಯುಕ್ತ ಮಾಹಿತಿ

    ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…

  • ಸುದ್ದಿ

    ನಾಯಿ ಸಾಕಾಣಿಕೆ ಇಂದ ಹೃದಯ ಆರೋಗ್ಯವಾಗಿ ಇರುತ್ತಂತೆ!

    ಕೆಲವರಿಗೆ ನಾಯಿ ಎಂದರೆ ಅಪಾರ ಪ್ರೀತಿ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ನಾಯಿ ಜೊತೆಗಿರಬೇಕು. ಇನ್ನು ಕೆಲವರು ನಾಯಿ ಎಂದರೆ ಮೂಗು ಮುರಿಯುತ್ತಾರೆ. ಆದರೆ ನಾಯಿ ಸಾಕುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹಾಗೂ ಅವರಲ್ಲಿ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ. ಕಾರಣ ಸಾಕಿದ…

  • ಸುದ್ದಿ

    ಬಿಳಿ ಎಕ್ಕದ ಗಿಡದಲ್ಲಿರುವ ಈ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು, ನೀವು ತಪ್ಪದೆ ತಿಳಿಯಬೇಕಾದ ವಿಷಯ,.!

    ಬಿಳಿ ಎಕ್ಕದ ಗಿಡದಲ್ಲಿ  ನಮಗೆ ತಿಳಿಯದ  ಔಷಧಿ ಗುಣಗಳು ತುಂಬಾನೇ ಇದೆ, ನಮ್ಮ ಮನೆ ಹತ್ತಿರ ಅಥವಾ ರೋಡ್ನಲ್ಲಿ ಒಂದು ಔಷಧಿ ಗಿಡ ತುಂಬಾ ಜನರಿಗೆ ಗೊತ್ತಿಲ್ಲ ನಮ್ಮಲ್ಲಿ ಈಗಲೂ ಕೂಡ ಇದನ್ನು ಹಳ್ಳಿಕಡೆ ಬಳಸುತ್ತ ಬಂದಿದ್ದಾರೆ.ಎಕ್ಕದ ಗಿಡದಲ್ಲಿ ಎರಡು ಪ್ರಭೇದಗಳಿವೆ ಅವು ಬಿಳಿ ಮತ್ತು ಕೆಂಪು ಗಿಡಗಳು ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿ ಗೆ ಬೇಕಾದ ಶ್ರೇಷ್ಠ ವಾದ ಎಲೆ. ಈ ಒಂದು ಗಿಡ ಅಪ್ಪು ಸೈನಿಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು…