ಸುದ್ದಿ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಗರ ಸಭೆ ಸಂಸ್ಥೆಗಳಿಗೆ 40 ಕೋಟಿ ರೂ. ಬಿಡುಗಡೆ…!

84

ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವುದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವುದು. ನೀರು ಸರಬರಾಜು ಪೈಪುಗಳ ದುರಸ್ಥಿ-ಬದಲಾವಣೆ ಕಾಮಗಾರಿಗಳು ಮತ್ತು ಅತ್ಯವಶ್ಯಕತೆಯಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಹಾಗೂ ಪಂಪು ಮೋಟಾರ್ ಅಳವಡಿಸುವ ಕಾಮಗಾರಿಗಳನ್ನು ಮಾತ್ರ ಈ ಅನುದಾನದಡಿ ಕೈಗೆತ್ತಿಕೊಳ್ಳಲು ಹಾಗೂ ಅನುಮೋದನೆ ನೀಡಿರುವ ಅನುದಾನವನ್ನು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶಗಳಿಗೆ ಬಳಸಬಹುದಾಗಿದೆ.

ಇತರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಕಾಮಗಾರಿಗಳಿಗೆ ಅವಶ್ಯಕವಿರುವ ಪಂಪು, ಮೋಟಾರ್, ಪೈಪ್ಲೈನ್ ಮತ್ತು ಇತರೆ ಸಲಕರಣೆಗಳ ಸಂಗ್ರಹಣೆಯನ್ನು ನಿಯಮಾನುಸಾರ ಕೆಟಿಪಿಪಿ ಕಾಯಿದೆ 1999 ಮತ್ತು ನಿಯಮಗಳು 2000 ‍ರನ್ವಯ ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

40 ಕೋಟಿ ರೂ. ಬಿಡುಗಡೆ ಮಾಡಲಾದ ಅನುದಾನವನ್ನು ಜಿಲ್ಲಾಧಿಕಾರಿಗಳು ತಮ್ಮ ಖಾತೆಯಲ್ಲಿ ಅನವಶ್ಯಕವಾಗಿ ಜಮಾಗೊಳಿಸಬಾರದು. ಖಜಾನೆಯಿಂದ ಹಣ ಪಡೆದು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಬಳಸಬೇಕು. ಹಾಗೂ ಅನುದಾನ ಬಳಕೆ ಸಂಬಂಧ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿ, ಅನುದಾನ ಬಳಕೆ ಬಗ್ಗೆ ಖಚಿತಪಡಿಸಬೇಕು ಎಂದು ಆದೇಶಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತಿರುವನಂತಪುರಂ ದೇವಾಲಯದ ಏಳನೇ ಬಾಗಿಲಿನ ರಹಸ್ಯ ಇಲ್ಲಿದೆ ನೋಡಿ.

    ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಕೆಲವು ದೇವಾಲಯಗಳ ರಹಸ್ಯಗಳನ್ನು ಇಲ್ಲಿಯವರೆಗೆ ಯಾರೂ ಬಹಿರಂಗಪಡಿಸಿಲ್ಲ. ಇಂದು ನಾವು ನಿಮಗೆ ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಾಲಯವನ್ನು ನೀವು ನೋಡಿರದಿದ್ದರೂ, ಅದರ ಹೆಸರನ್ನು ಖಂಡಿತ ಕೇಳಿರುತ್ತೀರಿ. ಏಕೆಂದರೆ ಈ ದೇವಾಲಯವು ಕೆಲವು ನಿಗೂಢತೆಗಳಿಗೆ ಮತ್ತು ಅದರ ಸಂಪತ್ತಿಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಆದ್ದರಿಂದ ಇದನ್ನು ಭಾರತದ ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಅನೇಕ ರಹಸ್ಯ ನೆಲಮಾಳಿಗೆಗಳಿವೆ. ಅವುಗಳಲ್ಲಿ ಕೆಲವು ತೆರೆದಿವೆ. ಆ ಮಳಿಗೆಗಳಿಂದ ಕೋಟ್ಯಂತರ…

  • ಆರೋಗ್ಯ

    ಕಾಲುಗಳ ಸೆಳೆತದಿಂದ ನಿಮ್ಮ ನಿದ್ದೆ ಹಾಳಾಗಿದೆಯೇ..? ಪರಿಹಾರ ತಿಳಿಯಲು ಈ ಲೇಖನ ಓದಿ ..

    ರಾತ್ರಿ ಹೊತ್ತು ಕಾಲುಸೆಳೆತವುಂಟಾಗಿ ನಿಮಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಿದೆಯೇ..? ಹೀಗೆ ಸೆಳೆತ ಉಂಟಾಗಲು ಹಲವಾರು ಕಾರಣಗಳಿವೆ. ಮಧುಮೇಹ, ನರಗಳ ಬಲಹೀನತೆ, ಗರ್ಭಧಾರಣೆ ಹಾಗೂ ಡೀಹೈಡ್ರೇಶನ್(ನಿರ್ಜಲೀಕರಣ) ಮುಂತಾದ ಕಾರಣಗಳಿಂದ ಕಾಲುಗಳ ಸೆಳೆತ ಉಂಟಾಗಬಹುದು.

  • Cinema

    ಸಮಾಜ ಸೇವೆಗೆಂದು ಕೈ ಜೋಡಿಸಿದ ದರ್ಶನ್ ಹಾಗು ಚಿಕ್ಕಣ್ಣ…..

    ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ ಜೋಡಿಸಿದ್ದಾರೆ. ಹೌದು, ದರ್ಶನ್ ಅವರು ತಮ್ಮ ಸಫಾರಿಯ ವೇಳೆ ಸೆರೆ ಹಿಡಿದಿದ್ದ ಫೋಟೋವನ್ನು ನಟ ಚಿಕ್ಕಣ್ಣ 1 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ…

  • ಸುದ್ದಿ

    ಜಾತಿ ವಿಚಾರ ಮಾತನಾಡಿದ ಜೆಡಿಎಸ್ ಶಿವರಾಮೇಗೌಡರಿಗೆ ಟಾಂಗ್ ಕೊಟ್ಟ MTB ನಾಗರಾಜ್..!

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೌಡ್ತಿಯಲ್ಲ ನಾಯ್ಡು ಎಂದು ಸಂಸದ ಶಿವರಾಮೇಗೌಡ ಮಾಡುತ್ತಿರುವ ಜಾತಿ ರಾಜಕೀಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೌದು, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ರಾಜಕಾರಣದ ಕೆಸರೆರಚಾಟ ತೀವ್ರಗೊಂಡಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಗೌಡ್ತಿಯಲ್ಲ, ನಾಯ್ಡು ಎಂದು ಮಾತಿನುದ್ದಕ್ಕೂ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ರು. ಇದೀಗ ಶಿವರಾಮೇಗೌಡ ಮಾಡ್ತಿರೋ ಜಾತಿ ರಾಜಕಾರಣಕ್ಕೆ ಸಚಿವ ಎಂಟಿಬಿ ನಾಗರಾಜ್‍ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್‍, ಯಾವುದೇ ಹೆಣ್ಣಿಗೂ ಮದುವೆಯಾಗಿ ಒಂದು…

  • ಜ್ಯೋತಿಷ್ಯ

    ನಿಮ್ಮ ಮಂಗಳವಾರ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ…

    ಮಂಗಳವಾರ, 03/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಾಕಾಂಕ್ಷಿಗಳಿಗೆ ಸದವಕಾಶ ಒದಗಿ ಬರಲಿದೆ. ಕೂಲವಾದೀತು. ವೃತ್ತಿರಂಗದಲ್ಲಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ. ವಿಶ್ವಾಸದ ದುರುಪಯೋಗವಾಗುತ್ತದೆ. ಆಗಾಗ ಅಡಚಣೆಗಳಿಂದಲೇ ಕಾರ್ಯಾನು ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನೋಲ್ಲಾಸ ಮೂಡಲಿದೆ. ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ವೃಷಭ:- ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ ತಂದೀತು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬದ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಆರೋಗ್ಯದ…

  • ಉಪಯುಕ್ತ ಮಾಹಿತಿ

    ಅಟಲ್ ಪಿಂಚಣಿ ಯೋಜನೆ ಮೂಲಕ ಪ್ರತೀ ತಿಂಗಳು 5000 ಪಡೆಯಿರಿ.!ಹೆಚ್ಚಿನ ಮಾಹಿತಿಗೆ ಮುಂದೆ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು  ಪ್ರೋತ್ಸಾಹಿಸುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ. ಏನಿದು ಅಟಲ್ ಪಿಂಚಣಿ ಯೋಜನೆ..? ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಬ್ಯಾಂಕ್ ಗೆ ಕಟ್ಟಿದರೆ.. ನಾವು ಎಷ್ಟು ಹಣ…