ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಸ್ತಾವನೆ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯೂನಿಟ್ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ. 14.14, ಮೆಸ್ಕಾಂ 20.49, ಚೆಸ್ಕಾಂ 15.02, ಹೆಸ್ಕಾಂ 24.67 ಹಾಗೂ ಜಸ್ಕಾಂ 18.89 ರಷ್ಟು ಏರಿಕೆ ಹೆಚ್ಚಿಸುವಂತೆ ಒಟ್ಟಾರೆ ಶೇ.17.37 ರಷ್ಟು ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದವು.
ಗೃಹಬಳಕೆ ಗ್ರಾಹಕರಿಗೆ ಅನ್ವಯವಾಗುವ ದರ:
ಬೆಸ್ಕಾಂ ವ್ಯಾಪ್ತಿಯ ಹಾಗೂ ಇತರೆ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸ್ಥಾವರಗಳಿಗೆ ಪ್ರತಿ ಯೂನಿಟ್ಗೆ 25 ಪೈಸೆ ಒಟ್ಟಾರೆ ಹೆಚ್ಚಳವಾಗಿದೆ. 30 ಯೂನಿಟ್ಗಳವರೆಗೆ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ಗೆ ಪ್ರಸಕ್ತ ದರ 3.50 ರೂ.ನಿಂದ ರೂ. 3.75 ಕ್ಕೆ ಏರಿಸಲಾಗಿದೆ. 31-100 ಯೂನಿಟ್ವರೆಗಿನ ಬಳಕೆಗೆ ಪ್ರತಿ ಯೂನಿಟ್ಗೆ ರೂ.4.95 ರಿಂದ ರೂ.5.20 ಕ್ಕೆ ಏರಿಕೆಯಾಗಿದೆ.
ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಡಿಯ ಗ್ರಾಮೀಣ ಪ್ರದೇಶದ ಗೃಹ ಬಳಕೆದಾರರಿಗೆ 1-30 ಯೂನಿಟ್ವರೆಗೆ ಮಾಸಿಕ ಬಳಕೆಗೆ ಪ್ರಸಕ್ತ ರೂ.3.40 ಇದ್ದು, ಇದು ರೂ.3.65 ಕ್ಕೆ ಹಾಗೂ 31-100 ಯೂನಿಟ್ಗೆ ರೂ.4.65 ರಿಂದ ರೂ.4.90 ಕ್ಕೆ ಹೆಚ್ಚಿಸಲಾಗಿದೆ. 101-200 ಯೂನಿಟ್ಗೆ ರೂ.6.20 ರಿಂದ ರೂ.6.45 ಕ್ಕೆ ಏರಿಕೆಯಾಗಿದೆ.
ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ 1-300 ಯೂನಿಟ್ಗಳವರೆಗೆ ಪ್ರತಿ ತಿಂಗಳಿಗೆ ರೂ.3.70, 200 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್ಗೆ ರೂ.7.55- ರೂ.7.80 ಕ್ಕೆ ಏರಿಕೆಯಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿ ಗೃಹಬಳಕೆ ಗ್ರಾಹಕರಿಗೆ 1-30 ಯೂನಿಟ್ವರಗೆ ರೂ.36, 200 ಯೂನಿಟ್ ಮೇಲ್ಪಟ್ಟ ಬಳಕೆಗೆ ರೂ.7.05-7.30 ರಷ್ಟು ಹೆಚ್ಚಿಸಲಾಗಿದೆ.
ಕೈಗಾರಿಕಾ ಬಳಕೆದಾರರಿಗೆ ಪ್ರಸಕ್ತ ಪ್ರತಿ ಯೂನಿಟ್ಗೆ 15 ಪೈಸೆಯಿಂದ 20 ಪೈಸೆಯಿರುತ್ತದೆ. ಬೆಸ್ಕಾಂ ವ್ಯಾಪ್ತಿ, ಪುರಸಭೆ ಎಲ್.ಟಿ.ಕೈಗಾರಿಕಾ ಬಳಕೆದಾರರಿಗೆ, ಮೊದಲ 500 ಯೂನಿಟ್ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ಗೆ ರೂ.5.65 ಹಾಗೂ 500 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್ಗೆ ರೂ.6.95 ದರ ಹೆಚ್ಚಿಸಿದೆ. ಇತರ ಪ್ರದೇಶಗಳ ಬಳಕೆದಾರರಿಗೆ ಮೊದಲ 500 ಯೂನಿಟ್ಗಳಿಗೆ ರೂ.3.35, ಅದಕ್ಕೂ ಮೇಲ್ಪಟ್ಟ ಬಳಕೆಗೆ ರೂ.6.30 ಆಗಿದೆ.
ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್ಗೆ ರೂ.8 50, ಅದರ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್ಗೆ ರೂ.9 ಗ್ರಾಮಾಂತರ ಪ್ರದೇಶದಲ್ಲಿ ಇದು ಆರಂಭಿಕ ಯೂನಿಟ್ ಗೆ ರೂ.7.50 ಹಾಗೂ 50 ಯೂನಿಟ್ ಮೀರಿದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ಗೆ ರೂ.8.50 ದರ ಹೆಚ್ಚಳ ಆಗುತ್ತದೆ.
ಬೆಸ್ಕಾಂ, ಬಿಬಿಎಂಪಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶ ಹಾಗೂ ಇತರೆ ಪ್ರದೇಶಗಳ ಹೆಚ್.ಟಿ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್ಗೆ 20 ಪೈಸೆ ಏರಿಕೆಯಾಗಿದೆ.
ಇತರೆ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿನ ಹೆಚ್.ಟಿ.ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುವ ವಿದ್ಯುತ್ಚ್ಛಕ್ತಿ ದರಗಳಲ್ಲಿ ಪ್ರತಿ ಯೂನಿಟ್ಗೆ 20 ಪೈಸೆಗಳ ಏರಿಕೆಯಾಗಿರುತ್ತದೆ.
ಇತರೆ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯ ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿನ ಎಲ್.ಟಿ.ಪ್ರವರ್ಗಕ್ಕೆ ಮೊದಲ 200 ಯೂನಿಟ್ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ಗೆ ಪರಿಷ್ಕೃತ ದರ ರೂ.6.90 ಹೆಚ್ಚಳವಾಗಿದೆ.
ಹೆಚ್.ಟಿ.ಪ್ರವರ್ಗದಲ್ಲಿ ವಿದ್ಯುತ್ ಪಡೆಯುವ ಬೆಸ್ಕಾಂ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಧರ್ಮಾರ್ಥ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಅನುದಾನಿತ ವಿದ್ಯಾ ಸಂಸ್ಥೆಗಳ ಮೊದಲ 1 ಲಕ್ಷ ಯೂನಿಟ್ ವಿದ್ಯುತ್ ಮಾಸಿಕ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್ ಗೆ ರೂ.6.85 ಆಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿನ ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೊದಲ ಒಂದು ಲಕ್ಷ ಯೂನಿಟ್ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್ಗೆ ರೂ.7.85 ಆಗಲಿದೆ. ಇತರ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿ ಪ್ರದೇಶಗಳಲ್ಲಿ ಮೊದಲ ಒಂದು ಲಕ್ಷ ಯೂನಿಟ್ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಯೂನಿಟ್ಗೆ ರೂ.7.80 ಹಾಗೂ ಒಂದು ಲಕ್ಷ ಯೂನಿಟ್ಗಳ ನಂತರದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ಗೆ ರೂ.8.20 ಆಗುತ್ತದೆ.
ಹಸಿರು ದರ: ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಖರೀದಿ ಮತ್ತು ಉಪಯೋಗವನ್ನು ಉತ್ತೇಜಿಸಲು ಹೆಚ್.ಟಿ.ಕೈಗಾರಿಕೆ ಮತ್ತು ಹೆಚ್.ಟಿ.ವಾಣಿಜ್ಯ ಗ್ರಾಹಕರು ಇಚ್ಛಿಸಿದಲ್ಲಿ ಅವರಿಗೆ ಅನ್ವಯವಾಗುವ ದರಕ್ಕಿಂತ ಪ್ರತಿ ಯೂನಿಟ್ಗೆ 50 ಪೈಸೆಯಷ್ಟು ಹೆಚ್ಚಿನ ಹಸಿರು ದರವನ್ನು ಮುಂದುವರೆಸಿರುವದಾಗಿ ಆಯೋಗ ತಿಳಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಐಸಿಸಿ ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಸಂದರ್ಭದಲ್ಲಿ ಕಾಯಿಲೆ ನೆಪ ಹೇಳಿ, ಅಂತ್ಯಸಂಸ್ಕಾರದಿಂದ ದೂರ ಉಳಿದಿದ್ದರು. ಅಂತ್ಯ ಸಂಸ್ಕಾರಕ್ಕೆ ಬಾರದ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಸ್ಪಷ್ಟನೆ ನೀಡಿದ್ದ ರಮ್ಯಾ ತಾವು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ, ಇದರ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳದಿದ್ದರೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದೆ. ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಂಬರೀಶ್…
ಚೆನ್ನೈನಲ್ಲಿ ಎದುರಾಗಿರುವ ನೀರಿನ ತೀವ್ರ ಕೊರತೆಯನ್ನು ನಿರ್ವಹಿಸಲು ನಿತ್ಯ 1 ಕೋಟಿ ಲೀಟರ್ ನೀರು ಪೂರೈಸುವುದಾಗಿ ಈ ಹಿಂದೆ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 68 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಇದೀಗ ಈ ಯೋಜನೆಯ ಭಾಗವಾಗಿ ಚೆನ್ನೈಗೆ ಮೊದಲ ನೀರಿನ ರೈಲು ಆಗಮಿಸಿದೆ. ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.ವೆಲ್ಲೂರು ಜಿಲ್ಲೆಯ ಜೋಲಾರ್ ಪೇಟೆಯಿಂದ ಬರೊಬ್ಬರಿ 25…
ಭಾರಿ ಚರ್ಚೆಗೆ ಕಾರಣವಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಬಿಡುಗಡೆ ತಡೆ ನೀಡುವಂತೆ ಆಗ್ರಹಿಸಿ ಉದಯ್ ಪುರ ರಾಜವಂಶಸ್ಥರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು. ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ ಇಲ್ಲದೆ ಸ್ಥಳಕ್ಕೆ ಬಂದ ಕೋತಿ,…
ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ.
ಪ್ಲಾಸ್ಟಿಕ್ ತಿನ್ನುವ ಮೇಣದ ಹುಳುಗಳ ಆವಿಷ್ಕಾರ ಆಕಸ್ಮಿಕ ಮತ್ತು ಆಶ್ಚರ್ಯದ ಅನ್ವೇಷಣೆಯಾಗಿತ್ತು.. ಸ್ಪೇನ್ ನಲ್ಲಿ ಕ್ಯಾಂಟಾಬ್ರಿಯಾದ ಬಯೋಮೆಡಿಸಿನ್ ಮತ್ತು ಬಯೋಟೆಕ್ನಾಲಜಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಮತ್ತು ಹವ್ಯಾಸಿ ಜೇನುಸಾಕಣೆಗಾರ್ತಿ ಫೆಡೆರಿಕಾ ಬೆರ್ಟೊಕ್ಚಿನಿಯು ತನ್ನ ಮನೆಯಲ್ಲಿ ಮೇಣದ ಹುಳುಗಳೊಂದಿಗೆ ಮುತ್ತಿಕೊಂಡಿರುವ ಜೇನು ಗೂಡುಗಳನ್ನು ನೋಡಿ ಬೇಸರಗೊಂಡು ಜೇನುಗೂಡಿನನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು, ಮೇಣದ ಹುಳುಗಳನ್ನು ಸಾಮಾನ್ಯ ಪ್ಲ್ಯಾಸ್ಟಿಕ್ ಶಾಪಿಂಗ್ ಬ್ಯಾಗ್ನಲ್ಲಿ ಇಟ್ಟುಹೋದರು. ಅವರು ಪ್ಲಾಸ್ಟಿಕ್ ಚೀಲವನ್ನು 6 7 ಗಂಟೆಗಳ ಬಳಿಕ ಅವರು ನೋಡಿದಾಗ, ಹುಳುಗಳು ಎಲ್ಲೆಡೆಯೂ ಪ್ಲಾಸ್ಟಿಕ್ ಅನ್ನು ಸಣ್ಣ…