ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್‌ಪುರ ಆಸ್ಪತ್ರೆಗೆ ತೆರಳಿದ್ದರು.
ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾನಿಂಗ್ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ.
ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್ ಇನ್‌ವರ್ಸಸ್’ ಎಂದು ಕರೆಯಲಾಗುವ ಇದೊಂದು ಅಪರೂಪದ ಪ್ರಕರಣವಾಗಿದೆ. ವಿಶ್ವದ ಕೆಲವೇ ವ್ಯಕ್ತಿಗಳ ದೇಹವು ಈ ರೀತಿ ರಚನೆಯಾಗಿರುತ್ತದೆ.
‘ಸೈಟಸ್ ಇನ್‌ವರ್ಸಸ್’ ಇದ್ದರೂ ಕೂಡಾ ವ್ಯಕ್ತಿಯ ಅಂಗಾಂಗಗಳ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿಂದು ನಡೆದ ಈ ಜಲ ವರ್ಷದ ಅಂತಿಮ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತಕಾರಿ ಸುದ್ದಿ ಬಂದಿದೆ. ತಮಿಳುನಾಡಿಗೆ ನಿಗದಿಯಂತೆ ಕಾವೇರಿ ನದಿ ನೀರು ಬಿಡುವಂತೆ ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಆದೇಶಿಸಿದ್ದಾರೆ. ಈ ಮೂಲಕದ ತಮಿಳುನಾಡಿನ ಬೇಡಿಕೆಗೆ ಕಾವೇರಿ ನದಿ ಪ್ರಾಧಿಕಾರ ಮಣಿದಿದೆ. ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ.ಜೂನ್ ತಿಂಗಳ ಕೋಟಾ 9.25 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಬಹುತೇಕ ಎಲ್ಲಾ…
ಸ್ಯಾಂಡಲ್ವುಡ್ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್ ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು. ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್.ನಾರಾಯಣ್…
ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…
ಮೇಷ ರಾಶಿ ಭವಿಷ್ಯ (Tuesday, November 23, 2021) ನಿಮ್ಮ ಅನಿರೀಕ್ಷಿತ ಸ್ವಭಾವ ನಿಮ್ಮ ವೈವಾಹಿಕ ಸಂಬಂಧವನ್ನು ಹಾಳು ಮಾಡಲು ಬಿಡಬೇಡಿ. ಇದನ್ನು ತಡೆಯುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದಲ್ಲಿ ನೀವು ನಂತರ ವಿಷಾದಪಡಬಹುದು. ಆಹ್ವಾನಿಸದ ಯಾವುದೇ ಅತಿಥಿ ಇಂದು ಮನೆಗೆ ಬರಬಹುದು ಆದರೆ ಈ ಅತಿಥಿಯ ಅದೃಷ್ಟದ ಕಾರಣದಿಂದ ಇಂದು ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ಮಕ್ಕಳು ನಿಮ್ಮ ದಿನವನ್ನು ಕಠಿಣಗೊಳಿಸುತ್ತಾರೆ. ಅವರ ಆಸಕ್ತಿ ಕಾಯ್ದುಕೊಳ್ಳಲು ಪ್ರೀತಿಯ ಅಸ್ತ್ರ ಬಳಸಿ ಮತ್ತು ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಪ್ರೀತಿಯಿಂದ…
ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂಬೈ ಮೆಟ್ರೋ ನಿಗಮ ನಿರ್ಧರಿಸಿದೆ, ಕಾಮಗಾರಿಯೂ ಆರಂಭಗೊಂಡಿದೆ. ಗ್ಯಾಲರಿ ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ. ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್ ಸೇಂಟ್ಸ್ ಚರ್ಚ್ ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ…
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.) ತಂಡ 5 ರನ್ ನಿಂದ ಸೋಲು ಕಂಡಿದೆ. 1 ನೋಬಾಲ್ ನಿಂದಾಗಿ ಆರ್.ಸಿ.ಬಿ. ಪಂದ್ಯ ಕಳೆದುಕೊಳ್ಳುವಂತಾಗಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ತಂಡ ನೀಡಿದ 187 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ.ಗೆ ಕೊನೆಯ ಓವರಿನಲ್ಲಿ 17 ರನ್ ಗಳಿಸುವ ಅವಶ್ಯಕತೆ ಇತ್ತು. ಲಸಿತ್ ಮಾಲಿಂಗ ಎಸೆದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ…