ಸುದ್ದಿ

ಪೊಲೀಸರ ನಿರ್ಲಕ್ಷ್ಯ. ಪಾಕ್ ಪರ ಘೋಷಣೆ ಕೂಗಿದ್ದ ದೇಶದ್ರೋಹಿ ವಿದ್ಯಾರ್ಥಿಗಳ ಬಿಡುಗಡೆ!ಕಿಡಿಕಾರಿದ ವಕೀಲರು.

61

ಪಾಕ್ ಪರವಾಗಿ ಘೋಷಣೆಯನ್ನು ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಇಂದು ಜಾಮೀನು ನೀಡಿದೆ. ಹೌದು ಹುಬ್ಬಳಿಯ ನ್ಯಾಯಾಲಯ ಜೆಎಂಎಫ್‍ಸಿ-2 ಇಂದು ಜಾಮೀನಿನ ಮೇಲೆ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದೆ.

ಇದು ಪೋಲೀಸರ ನಿರ್ಲ್ಯಕ್ಷ ಹಾಗೂ ಇವರ ಸೋಮಾರಿತನದಿಂದ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಜಾಮೀನಿನ ಮುಖಾಂತರ ಹೊರಗಡೆ ಬಂದಿದ್ದಾರೆ ಇದರ ವಿರುದ್ಧ ವಕೀಲ ಸಂಘದ ಅಧ್ಯಕ್ಷ ಅಶೋಕ್ ಕಿಡಿಕಾರಿದ್ದಾರೆ.

ಹುಬ್ಬಳಿ ಗ್ರಾಮೀಣದ ಪೊಲೀಸರು ಸರಿಯಾದ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಸದೇ ಇರುವ ಕಾರಣ ನ್ಯಾಯಾಲಯ ದೇಶ ದ್ರೋಹಿಗಳಿಗೆ ಜಾಮೀನಿನ ಮುಖಾಂತರ ಬಿಡುಗಡೆ ಮಾಡಿದೆ. ಗ್ರಾಮೀಣ ಪೊಲೀಸರು 90 ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ದಾಖಲಿಸಬೇಕಾಗಿತ್ತು. ಆದರೆ 109 ದಿನಗಳ ನಂತರ ಚಾರ್ಜ್ ಶೀಟ್ ಸಲ್ಲಿಸಿರುವ ಕಾರಣ ಆರೋಪಿಗಳು ಜಮೀನಿನ ಮೇಲೆ ಹೊರಗಡೆ ಬರಲು ಸಾಧ್ಯವಾಯಿತು ಎಂದು ದೂರನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಎಫ್‍ಐಆರ್ ದಾಖಲೆಯಾಗಿದೇ ಆದರೆ ಪೊಲೀಸರು ಚಾರ್ಜ್ ಶೀಟ್ ಸಮಯಕ್ಕೆ ಸರಿಯಾಗಿ ನೀಡಿರಲಿಲ್ಲ ಇದು ಪೋಲೀಸರ ಸಮಯಪ್ರಜ್ಞೆ ನಿರ್ಲ್ಯಕ್ಷದಿಂದ ಹಾಗಿದೆ. ಇದು ಉದ್ದೇಶಪೂರ್ವಕವಾಗಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಚಾವ್ ಮಾಡುವ ಷಡ್ಯಂತ್ರ. ಕರ್ತವ್ಯ ನಿಷ್ಠೆ ಮರೆತ ಪೊಲೀಸರನ್ನು ಅಮಾನತು ಮಾಡಬೇಕೆಂದು ಯುವ ವಕೀಲರ ಸಂಘ ಒತ್ತಾಯಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ