ಸುದ್ದಿ

ಸದನದಲ್ಲಿ ಪತ್ನಿಯನ್ನು ಹೊಗಳಿ, ಸಾಮಾಜಿಕ ತಾಣಕ್ಕೆ ಛೀ ತೂ ಅಂದ ಎಚ್‌ಡಿ ಕುಮಾರಸ್ವಾಮಿ…!

63

ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು.  ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. 


ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ ಜತೆಯಲ್ಲಿದ್ದಾರೆ. ನನ್ನ ಎಲ್ಲ ತಪ್ಪುಗಳನ್ನು ಅವಳು ಕ್ಷಮಿಸಿದ್ದಾಳೆ ಎಂದು ಪತ್ನಿಯನ್ನು ಹೊಗಳಿದರು. 
ಇಂದಿನ ಕಲಾಪ ಇತಿಹಾಸದಲ್ಲಿ ದಾಖಲಾಗುವಂತಹದ್ದಾಗಿದೆ. ನಾನು ಸಂತೋಷವಾಗಿ ಮುಖ್ಯಮಂತ್ರಿ ಹುದ್ದೆ ‌ತೊರೆಯುಯಲು ನಾನು ಸಿದ್ಧವಾಗಿದ್ದೇನೆ ಎಂದರು. 

ಸಾಮಾಜಿಕ ತಾಣಗಳ ಮೇಲೆ ಕೆಂಡಾಮಂಡಲ 
ಸಮಾಜಿಕ ತಾಣಗಳೇ ಇಂದು ಎಲ್ಲವನ್ನೂ ಹಾಳು ಮಾಡುತ್ತಿದೆ. ಯುವಕರು ಕುಲಗೆಡುತ್ತಿದ್ದಾರೆ. ದೇಶದ ಸಂಸ್ಕೃತಿಯನ್ನು ಹಾಳಳು ಮಾಡಲು ಸೋಷಿಯಲ್‌ ಮೀಡಿಯಾಗಳು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮಂಗಳವಾರ ಕಲಾಪ ಆರಂಭವಾದರೂ ನಾನು ಹೋಟೆಲ್‌ ನಲ್ಲಿ ಕುಳಿತು ಆರಾಮವಾಗಿ ಕುಳಿತಿದ್ದೇನೆ ಎಂದು ಹೇಳಲಾಗುತ್ತಿತ್ತು. ಅಲ್ಲಿ ನಾನು ಸುಮ್ಮನೆ ಕುಳಿತಿಲ್ಲ. ನಾನು ಸಿದ್ಧತೆ ನಡೆಸುತ್ತಿದ್ದೆ. ಜನರ ತೆರಿಗೆ ಹಣವನ್ನು ಹೋಟೆಲ್‌ನಲ್ಲಿ ಕುಳಿತು ಪೋಲು ಮಾಡಲಾಗುತ್ತಿದೆ ಎಂದೆಲ್ಲ ಹೇಳಲಾಗಿದೆ. ಈ ಎಲ್ಲ ವಿಚಾರಗಳು ಸಾಕಷ್ಟು ಬೇಸರ ಉಂಟು ಮಾಡಿದೆ. 



ರಾಜ್ಯ ರಾಜಕಾರಣ ಟ್ರೋಲಿಗರಿಗೆ ಬಾಡೂಟ…. ಏನೆಲ್ಲ ಮಾಡಿದಾರೆ ನೋಡಿ! 

ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿಂದಲೂ ಅಪಪ್ರಾಚಾರ ಮಾಡಲಾಗುತ್ತುದೆ. ಸೋಷಿಯಲ್‌ ಮೀಡಿಯಾದಲ್ಲಿ ಮನಬಂದಂತೆ ಪೋಸ್ಟ್‌ ಹಾಕಲಾಗಿದೆ. ರೈತರ ವಿಚಾರದಲ್ಲಿ ಸುಳ್ಳು ಹೇಳಲು ನಾನು ಹೋಗುವುದಿಲ್ಲ. ಈ ಹಿಂದಿನ ಬಿಜೆಪಿ ಜತೆಗಿನ ಮೈತ್ರಿ ಸರಕಾರದ ಪತನದ ಬಳಿಕ ನನ್ನನ್ನು ವಚನ ಭ್ರಷ್ಟ ಎನ್ನಲಾಗುತ್ತಿದೆ. ವಿಶ್ವಾಸಮತ ಯಾಚಿಸದೇ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದರು. ನಾನು ಅಧಿಕಾರ ಅವರಿಗೆ ಹಸ್ತಾಂತರಿಸಿದ್ದೆ. ನನ್ನಿಂದ ಯಾವುದೇ ತಪ್ಪಾಗಿಲ್ಲ. ಪದೇ ಪದೇ ನನ್ನನ್ನು ವಚನ ಭ್ರಷ್ಟ ಅನ್ನಬೇಡಿ. ಈ ಬಗ್ಗೆ ನಿಮ್ಮ ಕಾರ್ಯಕರ್ತರಿಗೆ ತಿಳಿಸಿ ಹೇಳುವಂತೆ ಹೇಳಿದರು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ