ಸುದ್ದಿ

ಬಸ್ ಕಂದಕಕ್ಕೆ ಬಿದ್ದು 6 ಮಂದಿ ಸಾವು, 39 ಜನರಿಗೆ ತೀವ್ರ ಗಾಯ….!

42

ಬಸ್ ಕಂದಕಕ್ಕೆ ಉರುಳಿ 6 ಮಂದಿ ಮೃತಪಟ್ಟು, 39 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಜಾರ್ಖಂಡ್‍ನ ಗಹ್ರ್ವಾದಲ್ಲಿ ನಡೆದಿದೆ.

ಜಿಲ್ಲಾ ಕೇಂದ್ರವಾದ ಗಹ್ರ್ವಾದಿಂದ ಅಂಬಿಕಾಪುರ ರಸ್ತೆಯ 14 ಕಿ.ಮೀ ದೂರದಲ್ಲಿ ಇರುವ ಅನ್ನಜ್ ನವೀದ್ ಕಣಿವೆಯಲ್ಲಿ ಬಸ್ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ 6 ಮಂದಿ ಮೃತಪಟ್ಟಿದ್ದು, 39 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಅಂಬಿಕಾಪುರದಿಂದ ಸಾಸಾರಾಮ್ ಕಡೆಗೆ ಹೋಗುತ್ತಿತ್ತು.

ನಸುಕಿನ ಜಾವ ಸುಮಾರು 2.30ಕ್ಕೆ ಈ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಆಸ್ಪತ್ರೆಗೆ ದಾಖಲಾದ ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.

ಬಸ್ ಕಂದಕಕ್ಕೆ ಉರುಳಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಪೊಲೀಸರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಬಸ್ ಕೆಳಗೆ ಇನ್ನು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಸಹ ರಕ್ಷಣಾ ಕಾರ್ಯಕ್ಕೆ ಪೊಲೀಸರಿಗೆ ಸಾಥ್ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ