inspirational, ಸುದ್ದಿ

ಕ್ವಾರಂಟೈನ್‌ ಸಮಯವನ್ನು ವ್ಯರ್ಥ ಮಾಡದೇ, ಗಣೇಶ ವಿಗ್ರಹ ರಚಿಸಿದ ಕಲೆಗಾರ. ಸಿಕ್ಕ ಬೆಲೆಯೆಷ್ಟು ಗೊತ್ತಾ?

520

ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ.

ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್‌ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್‌ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಲಾವಿದ ಮಲ್ಲಪ್ಪ ಅವರು ಲೋಕಾಪುರದ ಮೊರಾರ್ಜಿ ಶಾಲೆಯಲ್ಲಿ ಪತ್ನಿ ಲಕ್ಷ್ಮಿ ಮತ್ತು ಮಕ್ಕಳೊಂದಿಗೆ ಕ್ವಾರಂಟೈನ್‌ ಆಗಿದ್ದರು. ಪತ್ನಿಯನ್ನು ಕರೆದುಕೊಂಡು ಬರಲು ಮಹಾರಾಷ್ಟ್ರದ ರತ್ನಗಿರಿಗೆ ತೆರಳಿ ಮರಳಿ ಬರುವಾಗ ಅಧಿಕಾರಿಗಳು ಕ್ವಾರಂಟೈನ್‌ ಮಾಡಿದ್ದರು. ಆಗ ಮಲ್ಲಪ್ಪ ಅವರ ಕೋರಿಕೆಯಂತೆ ಶಿಲ್ಪಕಲೆಯ ಕೇಂದ್ರದಲ್ಲಿ ಕಲ್ಲು ಹಾಗೂ ಉಳಿಯನ್ನು ತಂದುಕೊಟ್ಟಿದ್ದರು.

ಆಗ ಎರಡೆನೆಯ ದಿನದಂದು ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಕ್ವಾರಂಟೈನ್‌ ಜೂ. 1 ರಂದು ಪೂರ್ಣವಾಗುತ್ತಿದ್ದಂತೆ ಗಣೇಶನ ವಿಗ್ರಹ ರೆಡಿಯಾಗಿತ್ತು. ಅಧಿಕಾರಿಗಳು ಭರವಸೆ ನೀಡಿದಂತೆ ಈ ವಿಗ್ರಹವನ್ನು 10 ಸಾವಿರಕ್ಕೆ ಖರೀದಿಸಿದ್ದಾರೆ. ಈ ವಿಗ್ರಹವನ್ನು ನೋಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ, ಗೌತಮ ಬುದ್ಧನ ಮೂರ್ತಿಗೆ ಆರ್ಡರ್‌ ನೀಡಿದ್ದಾರೆ.

ಮಲ್ಲಪ್ಪನವರು ಉತ್ತಮ ಕಲಾವಿದ ಎಂದು ನಮಗೆ ಗೊತ್ತಿತ್ತು ಆದ್ದರಿಂದ ಅವರ ಬೇಡಿಕೆಯಂತೆ ಕಲ್ಲು ಮತ್ತು ಉಳಿಯನ್ನು ತಂದುಕೊಟ್ಟಿದ್ದವು ಎಂದಿದ್ದಾರೆ. ಮಲ್ಲಪ್ಪನವರು 14 ದಿನಗಳಲ್ಲಿ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು ಪಂಚಾಯಿತಿಯವರು ಖರೀದಿ ಮಾಡಿದ್ದಾರೆ. ನನ್ನ ಕಲೆಗೆ ಅವಕಾಶ ಹಾಗೂ ಬೆಲೆ ದೊರೆತಿದ್ದಕ್ಕೆ ಖುಷಿಯಾಗಿದೆ. ನನಗೆ ಈಗ ಮತ್ತಷ್ಟು ಬೇಡಿಕೆ ಬಂದಿದೆ ಎನ್ನುತ್ತಾರೆ ಮಲ್ಲಪ್ಪ ಬಡಿಗೇರ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ