ಸುದ್ದಿ

ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಸಾಧನೆ!ಲೈವ್ ಸ್ಯಾಟೆಲೈಟ್ ಹೊಡೆದುರುಳಿಸಿದ ವಿಜ್ಞಾನಿಗಳು.. ಮೋದಿಯಿಂದ ಅಧಿಕೃತ ಘೋಷಣೆ..

53

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ವೊಂದನ್ನು ಹೊಡೆದುರುಳಿಸುವ ಮೂಲಕ ಅತ್ಯಂತ ಅಪರೂಪದ ಸಾಧನೆಯೊಂದನ್ನು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಧ್ಯಾಹ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 300 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು ಭಾರತ ಇಂದು ಹೊಡೆದು ಹಾಕಿದೆ. ಒಟ್ಟು ಮೂರು ನಿಮಿಷದಲ್ಲಿ ಉಪಗ್ರಹ ಪ್ರತಿರೋಧಿ ಕ್ಷಿಪಣಿ ಪ್ರಯೋಗದ ಮಿಶನ್ ಶಕ್ತಿ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕ, ರಷ್ಯಾ, ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಈ ಮೊದಲು ಅಮೇರಿಕಾ, ಚೀನಾ ಹಾಗೂ ರಷ್ಯಾ ಬಳಿ ಮಾತ್ರವೇ ಈ ಸಾಮರ್ಥ್ಯವಿತ್ತು. ಭಾರತ ಕೂಡ ಲೋ ಆರ್ಬಿಟ್‌ ​ಸ್ಯಾಟಲೈಟ್‌ಗಳನ್ನ ಅಂತರೀಕ್ಷದಲ್ಲೇ ಹೊಡೆದುರುಳಿಸುವ ಕ್ಷಿಪಣಿ ಬಗ್ಗೆ ಹಲವು ವರ್ಷಗಳಿಂದ ಪರೀಕ್ಷೆ ನಡೆಸ್ತಾ ಇತ್ತು. ಇದಕ್ಕಾಗಿಯೇ ಶಕ್ತಿ ಮಿಷನ್‌ ಅನ್ನೋ ಯೋಜನೆ ಕೈಗೊಂಡಿತ್ತು. ಇದೀಗ ಮಿಷನ್ ಸಕ್ಸಸ್ ಆಗಿದೆ.

ಶಕ್ತಿ ಮಿಷನ್‌ ಒಂದು ಶತ್ರು ರಾಷ್ಟ್ರಗಳ ಸ್ಯಾಟಲೈಟ್‌ ಪ್ರತಿರೋಧಕ ತಂತ್ರಜ್ಞಾನವಾಗಿದ್ದು, ಈ ಕ್ಷಿಪಣಿಗಳು ಶತ್ರು ರಾಷ್ಟ್ರದ ಉಪಗ್ರಹಗಳನ್ನ ಅಂತರೀಕ್ಷದಲ್ಲೇ ಹೊಡೆದು ಹಾಕಬಲ್ಲವು. ಇವತ್ತು ನಡೆದ ಆಪರೇಷನ್‌ನಲ್ಲಿ ಮೂರೇ ನಿಮಿಷದಲ್ಲಿ ಶಕ್ತಿ ಮಿಷನ್‌​​ ಯಶಸ್ವಿಯಾಗಿದೆ. ಇದರಿಂದ ದೇಶದ ಗೌರವ ಹೆಚ್ಚಾಗಿದೆ.
ಪ್ರಯೋಗಾರ್ಥ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಶತ್ರು ರಾಷ್ಟ್ರಗಳ ಉಪಗ್ರಹವನ್ನು ಭಾರತ ಬಾಹ್ಯಾಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಪಡೆದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ