ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು ಇದೀಗ 132 ಕೋಟಿ ಮೌಲ್ಯ ಹೊಂದಿದ್ದು, ಆಟೋ ಮೊಬೈಲ್ ಉದ್ಯಮದಲ್ಲೇ ಹೊಸ ಸಂಚಲನ ಸೃಷ್ಠಿಸಿದೆ.
2008ರಿಂದ ಎಫ್1 ನಂಬರ್ ಪ್ಲೇಟ್ ಮಾಲೀಕನಾಗಿರುವ ಖಾನ್ ಡಿಸೈನ್ ಮಾಲೀಕ ಅಫ್ಜಲ್ ಖಾನ್ ಇದೀಗ ಅದೇ ನಂಬರ್ ಅನ್ನು ಮಾರಾಟ ಮಾಡುತ್ತಿದ್ದು, ಫ್ಯಾನ್ಸಿ ನಂಬರ್ ಪ್ಲೇಟ್‌ನ ಬೆಲೆಯನ್ನು 132 ಕೋಟಿಗೆ ನಿಗದಿಪಡಿಸಿದ್ದಾನೆ.
F1 ಎಂಬುದು ಖಾನ್ ಅವರ ಫೇವರಿಟ್ ನಾವೆಲ್ಟಿ ಪ್ಲೇಟ್ ನಂಬರ್ ಆಗಿದ್ದು, ಇದು 109 ವರ್ಷಗಳ ಇತಿಹಾಸವನ್ನು ಹೊಂದಿದೆ. 2008ರಲ್ಲಿ ಖಾನ್ ಅವರು 4,40,000 ಬ್ರಿಟಿಷ್ ಪೌಂಡ್ ನೀಡಿ ( ಅಂದಾಜು 4.5 ಕೋಟಿ ರು.) ಖರೀದಿಸಿದ್ದರು.
ಅಂದರೆ 10 ವರ್ಷದೊಳಗೆ ‘F1’ ನಾವೆಲ್ಟಿ ಪ್ಲೇಟ್ ಮೌಲ್ಯವು ಶೇ.33 ಪಟ್ಟು ದುಪ್ಪಟ್ಟುಗೊಂಡಿದೆ. ಈ ಎಫ್1 ನಂಬರ್ ಪ್ಲೇಟ್ ಅತಿ ದುಬಾರಿ ಬುಕಾಟಿ ವೆರೊನ್ ಹಾಗೂ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎರ್ ಮೆಕ್‌ಲ್ಯಾರೆನ್‌ನಲ್ಲಿ ಆಳವಡಿಸಲಾಗಿದೆ. ಇದರ ಜೊತೆಗೆ ಖಾನ್ ಅವರು ‘4HRH’ ಮತ್ತು ‘NO1’ ನಂಬರ್‌ನ ಹೆಮ್ಮೆಯ ಮಾಲೀಕರೂ ಕೂಡಾ ಆಗಿದ್ದಾರೆ.ಅಂದಹಾಗೆ ಇದು ಮೊದಲ ಬಾರಿಯೇನಲ್ಲ. ಇಂತಹದ್ದೆ ಘಟನೆ ಈ ಹಿಂದೆ ಸಯೀದ್ ಖೋರಿ ಎಂಬ ಅಬುದಾಬಿ ಉದ್ಯಮಿ ಯುನೈಟೈಡ್ ಅರಬ್ ಎಮಿರೇಟ್ಸ್‌ಗೆ 70 ಕೋಟಿ ನೀಡಿ ರುಪಾಯಿ ನೀಡಿ ‘1’ ಫ್ಯಾನ್ಸಿ ನಂಬರ್ ಖರೀದಿಸಿದ್ದರು. ಇದುವರೆಗೂ ಇದೇ ಜಗತ್ತಿನ ಅತಿ ದುಬಾರಿ ನಂಬರ್ ಪ್ಲೇಟ್ ಖರೀದಿಯಾಗಿತ್ತು.
ಆದರೆ ಇದನ್ನು ಹಿಂದಿಕ್ಕಿಲಿರುವ ಬ್ರಿಟನ್ ಜನಪ್ರಿಯ ಎಫ್1 ನಂಬರ್ ಪ್ಲೇಟ್ ಇದೀಗ 132 ಕೋಟಿ ಆರಂಭಿಕ ಬೆಲೆ ಹೊಂದಿದ್ದು, ಇದು ಹರಾಜು ವೇಳೆ ಇನ್ನು ಹೆಚ್ಚಾಗುವ ಸಾಧ್ಯತೆಗಳು ಕೂಡಾ ಇವೆ. ಇನ್ನು ಹೊಸ ಫ್ಯಾನ್ಸಿ ನಂಬರ್ ಖರೀದಿಸುವ ಕಾರು ಮಾಲೀಕನು ಮುಂದಿನ ಐದು ವರ್ಷಗಳ ಅವಧಿಗೆ ಆ ನಂಬರ್ ಮೇಲೆ ಅವರು ಅಧಿಕಾರ ಹೊಂದಿರುತ್ತಾರೆ.ತದನಂತರ ಅವರು ಹೆಚ್ಚುವರಿ ಮೊತ್ತಕ್ಕೆ ಮಾರಾಟ ಮಾಡಬಹುದಾಗಿದ್ದು, ಇಲ್ಲವೇ ಹೆಚ್ಚುವರಿ ಮೊತ್ತ ಪಾವತಿಸಿ ಅದೇ ನಂಬರ್ ಪ್ಲೇಟ್ ಅನ್ನು ಮುಂದುವರಿಸುವ ಅವಕಾಶ ಕೂಡಾ ಇರುತ್ತದೆ. ಆದ್ರೆ ಅದೇನೇ ಇರಲಿ ಒಂದು ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ನೂರಾರು ಕೋಟಿ ವ್ಯಯ ಮಾಡುವ ಜನ ಇದ್ದಾರೆ ಅಲ್ಲಾ ಅನ್ನೋದೆ ವಿಚಿತ್ರ ಅನಿಸುತ್ತೆ. ಆದ್ರೂ ಇದು ಸತ್ಯ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು…
ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದಾರೆ.
ಎಲೊನ್ ಮಸ್ಕ್ ಅವರ ಟೆಸ್ಲಾ ಮೋಟಾರ್ಸ್ ಸದ್ಯದಲ್ಲೇ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಭಾರತದ ರಸ್ತೆಗಿಳಿಸುವುದಾಗಿ ಹೇಳಿದೆ. ಇನ್ನೊಂದ್ಕಡೆ ನಟ ರಿತೇಶ್ ದೇಶ್ಮುಖ್ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯು ವಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. ಕನಸು ಅನೇಕ ಮುನ್ಸೂಚನೆಗಳನ್ನು ನೀಡುತ್ತದೆ. ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಪ್ರತಿಯೊಬ್ಬರಿಗೂ ಪ್ರತಿ ದಿನ ಬೇರೆ ಬೇರೆ ಕನಸುಗಳು ಕಾಣ್ತವೆ. ಕೆಲವರಿಗೆ ಕನಸಿನಲ್ಲಿ ಪದೇ ಪದೇ ದೇವರು ಕಾಣಿಸಿಕೊಳ್ತಾನೆ. ಕನಸಿನಲ್ಲಿ ದೇವರು ಕಂಡ್ರೆ ಖುಷಿಪಡಬೇಕು. ಇದು ಶುಭ ಸಂಕೇತ. ಯಾರಿಗೆ ದೇವರ ಕೃಪೆ ಇರುತ್ತದೆಯೋ ಅವ್ರಿಗೆ…
ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ.ರಾಕಿಂಗ್ ಸ್ಟಾರ್ ಪತ್ನಿ ಸೀಮಂತ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಅಂತಾನೆ ಖ್ಯಾತಿಗಳಿಸಿರುವ ರಾಧಿಕಾ ಸೀಮಂತ ಸಂಭ್ರಮದಲ್ಲಿ ಸಿಂಡ್ರೆಲ್ಲಾ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಸ್ನೇಹಿತರು ರಾಧಿಕಾಗೆ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಈ ಬಗ್ಗೆ ರಾಧಿಕಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ನನ್ನ ಸ್ನೇಹಿತರು ನನಗೆ ಅದ್ಭುತವಾದ ಬೇಬಿ ಶವರ್…
ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್! ಫೇಸ್ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್ನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಫೆಬ್ರವರಿ 1, 2020ರ ಬಳಿಕ ಕೆಲ ಮೊಬೈಲ್ಗಳಿಗೆ ತನ್ನ ಸೌಲಭ್ಯವನ್ನು ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ. ಪ್ರಪಂಚದ ಜನಪ್ರಿಯ ಸಂದೇಶ ರವಾನೆ ಮಾಡುವ ವೇದಿಕೆಗಳಲ್ಲಿ ವಾಟ್ಸಾಪ್ ಹೆಚ್ಚು ಜನಮೆಚ್ಚುಗೆ ಪಡೆದುಕೊಂಡಿದೆ. ಇದೀಗ ವಾಟ್ಸಾಪ್ ಪ್ರಿಯರಿಗೆ ಒಂದ ಕಹಿ ಸುದ್ದಿ ಬಂದಿದ್ದು ಕೆಲ ಮೊಬೈಲ್ಗಳಲ್ಲಿ ವಾಟ್ಸಾಪ್ ಸೇವೆ ಬಂದ್ ಆಗಲಿದೆ ಎಂದು ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದ ದೈತ್ಯ ಮಾದ್ಯಮವಾಗಿ ಬೆಳೆದಿರುವ…