ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯಿತು.
ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ನಿಖಿಲ್ ಮತ್ತು ರೇವತಿ ಕಂಗೊಳಿಸಿದರು. ಪಿಂಕ್ ಕಲರ್ ಸೀರೆಯಲ್ಲಿ ರೇವತಿ ಕಂಗೊಳಿಸಿದರೆ, ಕ್ರೀಮ್ ಕಲರ್ ಕುರ್ತಾದಲ್ಲಿ ನಿಖಿಲ್ ಮಿಂಚುತ್ತಿದ್ದರು. ನಿಖಿಲ್ ಕುಮಾರ್ ಅವರ ಫೇಸ್ಬುಕ್ ಪೇಜ್ನಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮದ ಲೈವ್ ಪ್ರಸಾರ ಮಾಡಲಾಗುತ್ತಿದೆ.
ಮಾಜಿ ಪ್ರಧಾನಿ ಮತ್ತು ಅಜ್ಜ ದೇವೇಗೌಡರ ದಂಪತಿ ಸಮಕ್ಷಮದಲ್ಲಿ ವಜ್ರದುಂಗುರ ಬದಲಾಯಿಸಿಕೊಂಡರು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಸೇರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ನಿಖಿಲ್ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ನಿವೃತ್ತ ಡಿಜಿ ಐಜಿಪಿ ನೀಲಮಣಿ ಎನ್. ರಾಜು, ಮಾಜಿ ಡಿಸಿಎಂ ಜಿ ಪರಮೇಶ್ವರ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಶಾಸಕ ಎಂ. ಕೃಷ್ಣಪ್ಪ ದಂಪತಿ, ಮಾಜಿ ಶಾಸಕ ಪ್ರಿಯಕೃಷ್ಣ ಕುಟುಂಬ ಮತ್ತಿತರ ಗಣ್ಯರು ಸಾಕ್ಷಿಯಾದರು.
ನನಗಿವತ್ತು ತುಂಬ ಸಂತೋಷದ ದಿನ. ಹಿರಿಯರ ಆಶಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆದ ಅದ್ದೂರಿ ಸಮಾರಂಭದ ಬಳಿಕ ಮಾತನಾಡಿದ ಅವರು, ನಮ್ಮ ಅಜ್ಜಿ-ತಾತ, ಅಪ್ಪ-ಅಮ್ಮನಂತೆ ನಾವೂ ಇರುತ್ತೇವೆ. ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಒಂದು ಮಹತ್ತರವಾದ ಘಟ್ಟ. ಈ ಸಂದರ್ಭದಲ್ಲಿ ನನ್ನನ್ನು ಪ್ರೀತಿಸುವ ಎಲ್ಲರಿಗೂ ಊಟ ಹಾಕಿಸಬೇಕು ಎಂಬ ಆಸೆ ಇತ್ತು. ಅದು ಈಡೇರುತ್ತಿದೆ ಎಂದರು.
ಕಳೆದ ಕೆಲವು ದಿನಗಳಿಂದ ನಾನು ರೇವತಿಯವರೊಂದಿಗೆ ಮಾತನಾಡುತ್ತಿದ್ದೇನೆ. ಸಂಪ್ರದಾಯಸ್ಥ, ಸುಸಂಸ್ಕೃತ ಗುಣಗಳಿರುವ ಹುಡುಗಿ. ತುಂಬ ಚೆನ್ನಾಗಿ ನಮ್ಮೊಂದಿಗೆ ಹೊಂದಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ. ಇಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ ಎಂದು ನಿಖಿಲ್ ಹೇಳಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ. 23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India”…
ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು…
ಕೆಲವು ಸಮಯಗಳ ಹಿಂದೆ ರಾತ್ರಿ ಸುಮಾರು 10 ಘಂಟೆ ಸುಮಾರಿಗೆ ನೈಟ್ ಡ್ಯೂಟಿ ಮಾಡುವ ಸಲುವಾಗಿ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ನಾಗಮಲ್ಲು ಅವರು ಸಿಂಗಲ್ ಬಳಿ ಬಂದರು, ಇನ್ನು ಈ ಸಮಯದಲ್ಲಿ 11 ವರ್ಷದ ಒಬ್ಬ ಹುಡುಗ ಅಳುತ್ತ ರೋಡ ನಲ್ಲಿ ತಿರುಗಾಡುತ್ತಿದ್ದ. ಹಾಗಾದರೆ ಆ ಹುಡುಗ ಅಲ್ಲಿ ಯಾಕೆ ತಿರುಗಾಡುತ್ತಿದ್ದ ಮತ್ತು ಆತನಿಗೆ ಆದ ತೊಂದರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ…
ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ ಮೊತ್ತ 80 ಸಾವಿರ ರೂ. ತಲುಪಿದ್ದು ಇದೆ. ಮೋಟಾರು ವಾಹನ ಕಾಯಿದೆ (ತಿದ್ದುಪಡಿ) 2019, ಜಾರಿಗೆ ಬಂದ ದಿನದಿಂದಲೂ ದೇಶಾದ್ಯಂತ ಸಂಚಾರ ಶಿಸ್ತು ಪಾಲನೆ ಮಾಡದ ಸವಾರರಿಗೆ ಭಾರೀ ಮೊತ್ತದ ದಂಡ ಪೀಕಿಸುತ್ತಿರುವ ಸುದ್ದಿಗಳೇ ಎಲ್ಲೆಲ್ಲೂ. ಇವುಗಳ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ…
ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ. ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಆಹಾರವು ವಿಷವಾಗುವ ಪರಿಣಾಮ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಆಹಾರ ವಿಷವಾಗುವುದು ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ….
ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ. ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ…