ಸುದ್ದಿ

ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುತ್ತಿರುವ ಮಹಿಳೆ ಈಗ 1 ಕೋಟಿಯ ಒಡತಿ,.! ಏಗೆ ಗೊತ್ತಾ.?

50

ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೆಬಿಸಿ 11ರಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮೆದ್ದಾರೆ. ಪ್ರತಿದಿನ ಸರಿ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ ಅವರು ಈಗ ಕೆಬಿಸಿ 11ನೇ ಆವೃತ್ತಿ ಕಾರ್ಯಕ್ರಮದಿಂದ ಕೋಟ್ಯಧಿಪತಿ ಆಗಿದ್ದಾರೆ.

80 ಸಾವಿರದ ಪ್ರಶ್ನೆಗೆ ಬಬಿತಾ ಅವರು ತಮ್ಮ ಮೊದಲ ಲೈಫ್‍ಲೈನ್ ಬಳಸಿದ್ದರು. ಆ ಪ್ರಶ್ನೆಯೂ ಪುರಾಣ ಕಥೆಗೆ ಸಂಬಂಧಿಸಿದಾಗಿತ್ತು. ಅದಕ್ಕೆ ಅವರು ಆಡಿಯನ್ಸ್ ಪೋಲ್ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ತಮ್ಮ 1.6 ಲಕ್ಷ ರೂ. ಪ್ರಶ್ನೆಗೆ ಬಬಿತಾ ಅವರು ತಮ್ಮ ಎರಡನೇ ಲೈಫ್‍ಲೈನ್ ಬಳಸಿಕೊಂಡಿದ್ದರು. ಆಗ 50:50 ಆಯ್ಕೆ ಮಾಡಿಕೊಂಡು ಸರಿಯಾದ ಉತ್ತರ ಕೊಟ್ಟಿದ್ದರು. ಬಳಿಕ 50 ಲಕ್ಷದ ಪ್ರಶ್ನೆಗೆ ಅವರು ತಮ್ಮ ಮೂರನೇ ಲೈಫ್‍ಲೈನ್ ಉಪಯೋಗಿಸಿಕೊಂಡರು. ಬಳಿಕ ಕೊನೆ ಹಂತ 1 ಕೋಟಿ ಪ್ರಶ್ನೆಗೆ ಎಕ್ಸಪರ್ಟ್ ಲೈಫ್‍ಲೈನ್ ತೆಗೆದುಕೊಂಡು ಕೋಟ್ಯಧಿಪತಿಯಾದರು.

“ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ಆಸ್ಥಾನದಲ್ಲಿ ಯಾವ ಕವಿ 1857ರ ದಂಗೆಯ ಕುರಿತಾದ ತಮ್ಮ ವೈಯಕ್ತಿಕ ದಸ್ತಾನ್-ಎ-ಗದರ್ ನ್ನು ಬರೆದಿದ್ದಾರೆ?” ಇದು ಬಬಿತಾ ಅವರ 1 ಕೋಟಿಗೆ ಬಿಗ್ ಬಿ ಕೇಳಿದ ಪ್ರಶ್ನೆಯಾಗಿತ್ತು. ಅಂತಿಮವಾಗಿ ಬಬಿತಾ ಅವರಿಗೆ ಜಾಕ್ ಪಾಟ್ ಪ್ರಶ್ನೆಯಾಗಿ “ಈ ಕೆಳಗಿನ ಯಾವ ರಾಜ್ಯಗಳಲ್ಲಿನ ಅಧಿಕ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳಾಗಿದ್ದಾರೆ” ಎಂದು ಕೇಳಲಾಗಿತ್ತು. ಆಗ ಅವರಿಗೆ ಉತ್ತರ ಖಚಿತವಿರದಿದ್ದ ಕಾರಣಕ್ಕೆ ಅವರು ಆಟವನ್ನು ಬಿಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅಮಿತಾಬ್ ಯಾವ ಉತ್ತರ ಸರಿ ಇರಬಹುದು ಎಂದು ಕೇಳಿದಾಗ ಅವರು ಬಿಹಾರ ಎಂದು ಉತ್ತರಿಸಿದರು. ಆದರೆ ಬಬಿತಾ ಅವರ ಉತ್ತರ ಸರಿಯಾಗಿತ್ತು. ಒಂದು ವೇಲೆ ಬಬಿತಾ ಅವರು ಆಟವನ್ನು ಬಿಡದೆ ಮುಂದುವರಿಸಿದ್ದರೆ ಇಂದು 7 ಕೋಟಿಯ ಒಡತಿಯಾಗುತ್ತಿದ್ದರು.

ತಿಂಗಳಿಗೆ 1,500 ರೂ. ಸಂಬಳ ಪಡೆಯುತ್ತಿದ್ದ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ 1 ಕೋಟಿ ರೂ. ಗೆದ್ದಿದ್ದಕ್ಕೆ ಅಮಿತಾಬ್ ಬಚ್ಚನ್ ಕೂಡ ಖುಷಿಯಾದರು. ಬಬಿತಾ ಅವರು 3.2 ಲಕ್ಷ ರೂ. ಗೆದ್ದಾಗ ಈ ಹಣವನ್ನು ಏನು ಮಾಡುತ್ತಿರಿ ಎಂದು ಬಿಗ್ ಬಿ ಕೇಳಿದ್ದರು. ಈ ಹಣದಿಂದ ನಾನು ಮೊಬೈಲ್ ಖರೀದಿಸುತ್ತೇನೆ ಎಂದು ಬಬಿತಾ ಅವರು ಹೇಳಿದ್ದರು. ಇದನ್ನು ನೆನಪಿಟ್ಟುಕೊಂಡು ಬಿಗ್‍ಬಿ ಬಬಿತಾ ಅವರಿಗೆ ಹೊಸ ಮೊಬೈಲ್ ಉಡುಗೊರೆಯಾಗಿ ನೀಡಿದ್ದಾರೆ. ಬಬಿತಾ ಅವರು ಕೆಬಿಸಿ 11 ಕಾರ್ಯಕ್ರಮದಲ್ಲಿ ಕೇವಲ 1 ಕೋಟಿಯ ಮಾತ್ರವಲ್ಲ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ