ಉಪಯುಕ್ತ ಮಾಹಿತಿ

ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಬಿಟ್‌ಕಾಯಿನ್‌ ಹಣದ ಬಗ್ಗೆ ನಿಮಗೆ ಗೊತ್ತಾ..?ನಿಮ್ಮಲ್ಲಿ ಬಿಟ್‌ಕಾಯಿನ್‌ ಕರೆನ್ಸಿ ಇದ್ರೆ ನೀವ್ ಏನಾಗ್ತೀರಾ..?ತಿಳಿಯಲು ಈ ಲೇಖನ ಓದಿ…

580

ಬಿಟ್‌ಕಾಯಿನ್‌ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ವರ್ಚುಯಲ್‌ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್‌” ಕೂಡ ವರ್ಚುಯಲ್‌, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ. ಮೂಲತಃ ನಾಣ್ಯ- ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್‌ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ. ನಾವೆಲ್ಲ ಪರ್ಸಿನಲ್ಲಿ ದುಡ್ಡು ಇಟ್ಟುಕೊಳ್ಳುತ್ತೇವಲ್ಲ, ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್‌ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ

 ಏನಿದು ಬಿಟ್‌ಕಾಯಿನ್?

ಬಳಕೆದಾರರು ಹೇಳುವ ಪ್ರಕಾರ ಇದು ಒಂದು ಡಿಜಿಟಲ್ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸಬಹುದು. ಕೆಲವು ಕಡೆಗಳಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಪಡೆಯಲು ಕೂಡ ಉಪಯೋಗಿಸಬಹುದು. ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಬೇಕಾದರೂ ಮಾಡಬಹುದು. ಆದರೆ ಇಲ್ಲಿ ವರ್ಗಾವಣೆಗಳೆಲ್ಲವೂ ಇಂಟರ್‌ನೆಟ್ ಮೂಲಕ ನಡೆಯುತ್ತದೆ. ಬಿಟ್‌ಕಾಯಿನ್‌ನ ಮೌಲ್ಯವನ್ನು ಕೊನೆಯಲ್ಲಿ ನಿಮ್ಮ ಆಯ್ಕೆಯ ಕರೆನ್ಸಿಗೆ ಪರಿವರ್ತಿಸಿಕೊಳ್ಳಬಹುದು.

ಬಿಟ್‌ಕಾಯಿನ್ ಸೃಷ್ಟಿಕರ್ತ ಯಾರು..?

ಬಿಟ್‌ಕಾಯಿನ್‌ ವ್ಯವಸ್ಥೆ ಪರಿಚಯವಾದದ್ದು 2009ರಲ್ಲಿ. ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿಯನ್ನು ಬಿಟ್‌ಕಾಯಿನ್‌ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ, ಅದು ಯಾರಾದರೂ ನಿಜವಾದ ಹೆಸರೋ ಅಲ್ಲವೋ ಎನ್ನುವುದರ ಬಗ್ಗೆ ಸಾಕಷ್ಟು ಸಂದೇಹಗಳಿವೆ. ಅಷ್ಟೇ ಅಲ್ಲ, ಬಿಟ್‌ಕಾಯಿನ್‌ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.
ಪ್ರತಿ ದೇಶದಲ್ಲೂ ಚಲಾವಣೆಯಲ್ಲಿರುವ ಕರೆನ್ಸಿಗಳಂತೆ ಬಿಟ್‌ಕಾಯಿನ್‌ ಅನ್ನು ಯಾವುದೇ ಬ್ಯಾಂಕ್‌ ಅಥವಾ ಸರಕಾರ ನಿಯಂತ್ರಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಬಿಟ್‌ಕಾಯಿನ್‌ ಕರೆನ್ಸಿಯನ್ನು ಗೊತ್ತುಗುರಿಯಿಲ್ಲದಂತೆ ಚಲಾವಣೆಗೆ ತರಲಾಗುತ್ತದೆ ಎಂದೇನೂ ಇಲ್ಲ, ಪೂರೈಕೆ ಹೆಚ್ಚಾಗಿ ಹಣದುಬ್ಬರ ಉಂಟಾಗದಂತೆ ತಡೆಯಲು ಪ್ರತಿ ಬಾರಿಯೂ ನಿರ್ದಿಷ್ಟ ಪ್ರಮಾಣದ ಬಿಟ್‌ಕಾಯಿನ್‌ಗಳಷ್ಟೆ ಹೊಸದಾಗಿ ಚಲಾವಣೆಗೆ ಬರುತ್ತವೆ.

ಈ ಬಿಟ್‌ಕಾಯಿನ್‌ ಅನ್ನು ಸಂಪಾದಿಸುವುದು ಹೇಗೆ..?

ಬಿಟ್‌ಕಾಯಿನ್‌ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥಯವನ್ನು ಬಳಸಿಕೊಂಡು ವಿಶ್ವದೆಲ್ಲೆಡೆ  ಬಿಟ್‌ಕಾಯಿನ್‌ ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಸಂಕೀರ್ಣ ಲೆಕ್ಕಾಚಾರಗಳನ್ನು ಕೈಗೊಳ್ಳಬೇಕಾದ್ದರಿಂದ ಅದು ಕ್ಲಿಷ್ಟವಷ್ಟೇ ಅಲ್ಲ, ನಿಧಾನವೂ ಹೌದು. ಈ ಪ್ರಕ್ರಿಯೆ ಮುಂದುವರಿಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್‌ ರೂಪದ ಹಣ ದೊರಕುತ್ತ ಹೋಗುತ್ತದೆ, ಆ ಮೂಲಕ ಚಲಾವಣೆಯಲ್ಲಿರುವ ಬಿಟ್‌ಕಾಯಿನ್‌ಗಳ ಪ್ರಮಾಣವೂ ಹೆಚ್ಚುತ್ತದೆ. ಬಳ್ಳಾರಿಯಲ್ಲಿ ಮಣ್ಣು ಬಗೆಯುವ ಬದಲು ಕಂಪ್ಯೂಟರಿನಲ್ಲಿ ಬಿಟ್‌ಕಾಯಿನ್‌ ಕೂಡಿಸುವ ಈ ಪ್ರಕ್ರಿಯೆಗೂ ಮೈನಿಂಗ್‌ ಎಂದೇ ಹೆಸರು. ಈಚೆಗೆ ಬಿಟ್‌ಕಾಯಿನ್‌ ಗಣಿಗಾರಿಕೆಯ ಈ ಕೆಲಸ ಸಾಧಾರಣ ಕಂಪ್ಯೂಟರುಗಳ ಸಾಮರ್ಥಯವನ್ನು ಮೀರಿ ಬೆಳೆದುಬಿಟ್ಟಿರುವುದರಿಂದ ಅದಕ್ಕೆಂದೇ ಮೈನರ್‌ಗಳೆಂಬ ವಿಶೇಷ ಯಂತ್ರಾಂಶಗಳೂ ತಯಾರಾಗುತ್ತಿವೆ.

ಷೇರು ಮಾರುಕಟ್ಟೆ ಜೂಜು..!

ಇತ್ತೀಚೆಗೆ ಒಂದು ಬಿಟ್‌ಕಾಯಿನ್‌ನ ಬೆಲೆ 10,000 ಡಾಲರ್‌ನಷ್ಟು ಏರಿರುವುದು ವಿಶ್ವದೆಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ಷೇರು ಮಾರುಕಟ್ಟೆ ಜೂಜು ಎಂದು ಕರೆಯುತ್ತಿದ್ದಾರೆ. ಕೇವಲ 4 ತಿಂಗಳಿನಲ್ಲಿ 6 ಲಕ್ಷ ಬೆಲೆ ಏರಿಕೆಯಾಗಿರುವುದು ಇದಕ್ಕೆ ಉದಾಹರಣೆಯಾಗಿದ್ದು, ಇಷ್ಟೆಲ್ಲ ದುಡ್ಡು ಯಾಕೆ ಸುರಿಯುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.!!

ಇದರ ಅನುಕೂಲಗಳು ಮತ್ತು ಅನಾನುಕುಲಗಳ ಬಗ್ಗೆ ತಿಳಿಯಿರಿ…

  • 1. ಬೇರೆಲ್ಲಾ ಮಾಧ್ಯಮಗಳಿಗಿಂತ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹಣ ವರ್ಗಾವಣೆ ಸಾಧ್ಯ. ಶುಲ್ಕವೂ ಅತೀ ಕಡಿಮೆ.
  • 2. ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆಯೂ ಬಿಟ್ ಕಾಯಿನ್‍ಗಳನ್ನು  ನೀವು ಹೊಂದಬಹುದು, ಅವುಗಳನ್ನು  ಇನ್ನೊಬ್ಬರಿಗೆ ವರ್ಗಾಯಿಸಬಹುದು.
  • 3. ಬಿಟ್ ಕಾಯಿನ್ ಮೂಲಕ ಒಮ್ಮೆ ಮಾಡಿದ  ಪಾವತಿಯನ್ನು ರದ್ದು ಮಾಡಲು ಆಗುವುದಿಲ್ಲ.
  • 4. ಇತರೆ ಹಣಕಾಸು ವಹಿವಾಟುಗಳ ಹೋಲಿಕೆಯಲ್ಲಿ ಬಿಟ್ ಕಾಯಿನ್  ಅಷ್ಟು ಸುಲಭವಾಗಿ  ಪತ್ತೆ ಮಾಡಲಾಗುವುದಿಲ್ಲ. ಯಾರ ನಿಯಂತ್ರಣವೂ ಇಲ್ಲದ ಕಾರಣ ಸರಕಾರದ ಅಥವಾ ಹಣಕಾಸು  ಇಲಾಖೆಯ ಗಮನಕ್ಕೆ ಬಾರದೇ ಮೊತ್ತ ವರ್ಗಾವಣೆ ಮಾಡಬಹುದು.ಹೀಗಾಗಿ ಬೇನಾಮಿ ಹಣಪಾವತಿಗಳು, ಹವಾಲಾಗಳು ಈ ಮಾಧ್ಯಮದಿಂದ ನಡೆಯುವ ಸಾಧ್ಯತೆಯೂ ಇದೆ.

 

 

 ಬಿಟ್‌ಕಾಯಿನ್‌ ‘ನ ಪ್ರಮುಖ ಉಪಯೋಗಗಳೇನು..?

ಹಣದ ತ್ವರಿತ ವರ್ಗಾವಣೆಗೆ ಇಲ್ಲಿ ಸಂಸ್ಕರಣೆ ಶುಲ್ಕ ಇರುವುದಿಲ್ಲ. ಇದ್ದರೂ ಅತ್ಯಲ್ಪ. ವಿಶ್ವಾದ್ಯಂತ ಚಲಾವಣೆ ಮಾಡಬಹುದು. ಆದರೆ ಚೀನಾ ಇತ್ತೀಚೆಗೆ ತನ್ನ ಬ್ಯಾಂಕಿಂಗ್ ವಲಯದಲ್ಲಿ ಬಳಕೆಯನ್ನು ನಿಷೇಧಿಸಿದೆ. ಉತ್ಪನ್ನ, ಸೇವೆಗಳ ಖರೀದಿಗೆ ಬಳಸಬಹುದು. ಒಂದು ವೇಳೆ ನಷ್ಟವಾದರೆ ತಡೆದುಕೊಳ್ಳಬಲ್ಲೆ ಎಂಬ ನಂಬಿಕೆ ಇದ್ದರೆ ಹೂಡಿಕೆಯನ್ನೂ ಮಾಡಬಹುದು. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ಮುಂತಾದ ಆನ್‌ಲೈನ್ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.

ಇದರಿಂದ ಆಗುವ ಅಪಾಯಗಳೇನು..?

ಬಿಟ್‌ಕಾಯಿನ್‌ಗಳು ಅಪರಾಧಿಗಳಿಗೆ ಆರ್ಥಿಕ ಅಪರಾಧಗಳನ್ನು ಎಸಗಲು ಹಾದಿ ಮಾಡಿಕೊಟ್ಟಿದೆ. ಮಾದಕ ದ್ರವ್ಯಗಳ ಕಳ್ಳಸಾಗಣೆದಾರರಿಗೆ ಹಣ ವರ್ಗಾವಣೆಗೆ ಬಿಟ್‌ಕಾಯಿನ್‌ಗಳು ಬಳಕೆಯಾಗುತ್ತದೆ. ಯಾಕೆಂದರೆ ಇಲ್ಲಿ ಹಣದ ವರ್ಗಾವಣೆ ಯಾರು ಯಾರಿಗೆ ಮಾಡಿದರು ಎಂಬ ವಿವರವನ್ನು ಪತ್ತೆ ಹಚ್ಚಲಾಗುವುದಿಲ್ಲ. ಇದರ ಬೆಲೆ ಕೂಡ ಕ್ಷಣ ಕ್ಷಣಕ್ಕೆ ತೀವ್ರ ಏರಿಳಿತವಾಗುತ್ತಿರುವುದರಿಂದ ಹೂಡಿಕೆದಾರರಿಗೆ ಯಾವಾಗ ಬೇಕಾದರೂ ಭಾರಿ ನಷ್ಟವಾಗಬಹುದು. ಅಲ್ಲದೆ ಬಳಕೆದಾರರು ಹೆಚ್ಚಿದಂತೆ ಲಭ್ಯತೆ ಕಡಿಮೆಯಾಗುತ್ತದೆ.

ಅಂತರಜಾಲದಲ್ಲೇ  ಬಿಟ್‌ಕಾಯಿನ್‌ಗಳನ್ನು ಕದಿಯುತ್ತಾರೆ..!

ಈಗ ಬೇರೊಬ್ಬರ ಬಿಟ್‌ಕಾಯಿನ್‌ಗಳನ್ನು ಕದ್ದು ಬಳಸುವ ವಂಚಕರೂ ಹುಟ್ಟಿಕೊಂಡಿದ್ದಾರೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಬಳಕೆದಾರರ ಸಾವಿರಾರು ಬಿಟ್‌ಕಾಯಿನ್‌ಗಳು ಕಳ್ಳತನವಾದ ಅನೇಕ ಘಟನೆಗಳು ವರದಿಯಾಗಿವೆ. ಅಂತರಜಾಲದಲ್ಲಿರುವ ಬಿಟ್‌ಕಾಯಿನ್‌ ವಿನಿಮಯ ಕೇಂದ್ರಗಳಿಗೂ ಹಲವುಬಾರಿ ಕನ್ನಹಾಕಿದ ಕಳ್ಳರು ಅಲ್ಲೂ ತಮ್ಮ ಕೈಚಳಕ ತೋರಿಸಿದ್ದರು. ಅಂತಹ ಒಂದು ಸಂದರ್ಭದಲ್ಲಿ ಉಂಟಾದ ಗೊಂದಲ ಎಷ್ಟರಮಟ್ಟಿಗಿತ್ತು ಎಂದರೆ ಬಿಟ್‌ಕಾಯಿನ್‌ಗಳ ವಿನಿಮಯ ದರ ಒಮ್ಮೆಲೇ ಹತ್ತಾರು ಪಟ್ಟು ಕುಸಿದು ಅವುಗಳ ಅಸ್ತಿತ್ವಕ್ಕೇ ಸಂಚಕಾರ ಬರುವಂತಹ ಪರಿಸ್ಥಿತಿ ಉಂಟಾಗಿತ್ತು.

ಭಾರತದಲ್ಲಿ ಕಾನೂನುಬದ್ಧವೇ..?

ಈ ಡಿಜಿಟಲ್‌ ಕರೆನ್ಸಿಗೆ ದೇಶದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಇವುಗಳ ಖರೀದಿ ಮತ್ತು ವಹಿವಾಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸದ್ಯ ಬಿಟ್‌ಕಾಯಿನ್‌ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್‌ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಕೂಡ ಇದೆ. ಹಣಕಾಸು ಸಂಸ್ಥೆಗಳು ಬಿಟ್‌ಕಾಯಿನ್‌ ವಹಿವಾಟಿನಲ್ಲಿ ತೊಡಗದಂತೆ ಕೆಲದಿನಗಳ ಹಿಂದೆ ಚೀನಾದಲ್ಲಿ ಘೋಷಣೆಯಾದ ನಿರ್ಬಂಧ ಇದಕ್ಕೊಂದು ಉದಾಹರಣೆ.

ಬಿಟ್‌ಕಾಯಿನ್ ಸುರಕ್ಷಿತವೇ..?

ಸದ್ಯ ಬಿಟ್‌ಕಾಯಿನ್‌ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್‌ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಇದೆ.ಬಿಟ್‌ಕಾಯಿನ್‌ ಮೌಲ್ಯದಲ್ಲಿ ಬಹಳ ಕ್ಷಿಪ್ರವಾಗಿ ಸಂಭವಿಸುವ ಏರಿಳಿತಗಳಿಂದ ಅವುಗಳ ಸ್ಥಿರತೆಯ ಬಗೆಗೂ ಅನುಮಾನ ಮೂಡಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬೆಳ್ಳುಳ್ಳಿ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ

    ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. 2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. 3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು. 4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ ಕೋಲಾರ:- ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ, ಅತ್ತಿಗಿರಿಕೊಪ್ಪ ಗ್ರಾಮದ ನಾಗೇಂದ್ರ @ ಚಿನ್ನಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಬೂದಿಕೋಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಕಲಂ 6 ಪೋಕ್ಸೋ ಕಾಯ್ದೆ ಹಾಗೂ…

  • ಸುದ್ದಿ

    400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ವಿಸ್ಮಯಕಾರಿ ಹೂವು..! ಎಲ್ಲಿ ಸಿಗುತ್ತದೆ ಗೊತ್ತಾ?

    ಚಿಕ್ಕ ಚಿಕ್ಕ ಹೂಕೋಸನ್ನು ಮಂಟಪದಂತೆ ಜೋಡಿಸಿಟ್ಟಂತೆ ಕಾಣುವ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಇದು ಹೂಕೋಸಲ್ಲ. ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ಎಂದು ಹೇಳಲಾಗಿದೆ. ಇದರ ಹೆಸರು ಪಗೋಡ ಅಂದರೆ ಗೋಪುರ ಎಂದರ್ಥ. ಕೆನೆ ಬಣ್ಣದ ಕೋನ್‌ ಆಕಾರದಲ್ಲಿ ಹೂವಿನ ಸುತ್ತ ಹಸಿರು ಎಲೆಗಳು ಆವರಿಸಿಕೊಂಡಿದ್ದು, ನೋಡಲು ಸುಂದರವಾಗಿದೆ. ಆದರೆ ನಿಜಕ್ಕೂ ಇದು ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಮಾತ್ರ ಅರಳುವ ಪಗೋಡ ಹೂವೇ ಎಂದು ಪರಿಶೀಲಿಸಿದಾಗ ಇದು ಪಗೋಡಾ ಅಲ್. ಅಥವಾ ಅಪರೂಪಕ್ಕೆ ಅರಳುವ ಹೂವೂ…

  • ಸುದ್ದಿ

    ಹೆಂಡತಿಯ ಹತ್ತಿರ 20 ಸಾವಿರ ಸಾಲ ಪಡೆದ ಪತಿ, 28.45 ಕೋ.ರೂ ಗೆದ್ದ…!

    ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್‌ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…

  • ಆರೋಗ್ಯ

    ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಿಕೊಳ್ಳಳು ಬೇಕಾದ ಆಹಾರ ಯಾವುದು ಗೊತ್ತ…? ಹಾಗಾದರೆ ಈ ಲೇಖನವನ್ನು ಓದಿ …

    ದೇಹದಲ್ಲಿ ಪ್ರೊಟೀನ್ ಮತ್ತು ಪೋಷಕಾಂಶದ ಕೊರತೆಯಿದ್ದರೆ ಎತ್ತರ ಬೆಳೆಯುವುದು ಕಷ್ಟ. ಎತ್ತರವಾಗಬೇಕೆಂದು ಎಷ್ಟೋ ಪ್ರಯತ್ನ ಮಾಡಿದ್ದರೂ ಅದು ಫಲ ಕೊಟ್ಟಿರುವುದಿಲ್ಲ.
    ಯಾರದ್ದೋ ಎದುರಿಗೆ ನಿಂತು ಅವರಷ್ಟು ಉದ್ದ ಇರಬೇಕಿತ್ತು ಅಂದು ಕೊಳ್ಳುತ್ತೀರ. ಅದು ಅಸಾಧ್ಯ ಅನ್ನುವ ಸಂಗತಿ ಕೂಡ ಗೊತ್ತೇ ಇದೆ. ಆದರೂ ಮನಸ್ಸು ಸಮಾಧಾನಗೊಳ್ಳುವುದಿಲ್ಲ.

  • ವಿಚಿತ್ರ ಆದರೂ ಸತ್ಯ

    ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ..!ತಿಳಿಯಲು ಈ ಲೇಖನ ಓದಿ…

    ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.