ಆರೋಗ್ಯ

ಈ ಹಣ್ಣಿನಿಂದ ಒಬ್ಬರ ಜೀವ ಉಳಿಸಬಹುದು, ಹಲವರಿಗೆ ಗೊತ್ತಿಲ್ಲ ಈ ಅದ್ಬುತ ಹಣ್ಣಿನ ಬಗ್ಗೆ. ಈ ಅರೋಗ್ಯ ಮಾಹಿತಿ ನೋಡಿ.

128

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಇನ್ನು ಈ ಜ್ವರ ನಮಗೆ ಕಾಣಿಸಿಕೊಂಡ ತಕ್ಷಣ ನಮ್ಮ ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ ಮತ್ತು ನಮ್ಮ ಜೀವ ಕುಗ್ಗುತ್ತಾ ಹೋಗುತ್ತದೆ. ಸ್ನೇಹಿತರೆ ನಮಗೆ ಜ್ವರ ಕಾಣಿಸಿಕೊಂಡರೆ ಈ ಒಂದು ಹಣ್ಣನ್ನ ಸೇವನೆ ಮಾಡಿದರೆ ನಿಮ್ಮ ದೇಹವನ್ನ ಜ್ವರದಿಂದ ರಕ್ಷಣೆ ಮಾಡಿಕೊಳ್ಳಬಹುದು, ಹಾಗಾದರೆ ಆ ಹಣ್ಣು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹಣ್ಣಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಡೆಂಗ್ಯೂ ಜ್ವರ ಬಂದ ಸಂದರ್ಭದಲ್ಲಿ ಹಲವಾರು ಮಂದಿ ನಿಮಗೆ ಪಾಪಾಯಿ ಎಲೆಯ ರಸ ಸ್ವಲ್ಲ ಸೇವಿಸಿ ಹಾಗೆಯೇ ಕಿವಿ ಹಣ್ಣನ್ನು ಕೂಡ ತಿನ್ನಿ ಎಂದು ಹೇಳಿರುವುದನ್ನು ನೀವು ಕೇಳಿರಬಹುದು.

ಹೌದು ನಿಜವಾಗಿಯೂ ಡೆಂಗ್ಯೂ ಎನ್ನುವ ಸೈಲೆಂಟ್ ಕಿಲ್ಲರ್ ರೋಗವನ್ನು ಕೂಡ ತಡೆಹಿಡಿಯುವ ತಾಕತ್ತು ಈ ಕಿವಿ ಎನ್ನುವ ಅದ್ಬುತ ಹಣ್ಣಿಗಿದೆ, ಹೌದು ಡೆಂಗ್ಯೂ ಜ್ವರ ನಿಮಗೆ ಅವರಿಸಿದಾಗ ಮೊದಲು ನಿಮ್ಮ ರಕ್ತದಲ್ಲಿನ ಪ್ಲೇಟ್ಲೆಟ್ ಕೌಂಟ್ ಕಡಿಮೆಯಾಗುತ್ತಾ ಹೋಗುತ್ತದೆ ಹೀಗಾಗಿ ದೇಹಕ್ಕೆ ಯಾವುದೇ ರೋಗದ ವಿರುದ್ಧ ಹೋರಾಡುವ ಶಕ್ತಿಯೇ ಇರುವುದಿಲ್ಲ ಮತ್ತು ಇಂತಹ ಸಂದರ್ಭದಲ್ಲಿ ಕಿವಿ ಹಣ್ಣು ರಾಮಬಾಣ ಎನ್ನಬಹುದು. ಈ ಕಿವಿ ಹಣ್ಣು ಸೇವಿಸುವುದರಿಂದ ಪ್ಲೇಟ್ಲೆಟ್ ಹೆಚ್ಚಾಗುತ್ತದೆ, ಹಾಗೂ ರೋಗಿ ಶೀಘ್ರದಲ್ಲಿಯೇ ಚೇತರಿಸಿಕೊಳ್ಳುತ್ತಾನೆ, ಇಂತಹ ಕಿವಿ ಹಣ್ಣಿನ ಅದ್ಬುತ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ ನೋಡಿ.

ಕೀವಿ ಹಣ್ಣು, ತ್ವಚೆಯ ಕಾಂತಿಗೂ ಉತ್ತಮ,  ಜಂಕ್​ಫುಡ್ಸ್​ ಸೇವನೆಯಿಂದ ಉಂಟಾಗುವ ಆ್ಯಸಿಡಿಕ್ ಅಂಶವನ್ನು ತೆಗೆದುಹಾಕಿ ದೇಹದಲ್ಲಿ ಪಿಹೆಚ್​ ಮಟ್ಟವನ್ನು ನಿಯಂತ್ರಿಸುತ್ತದೆ ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಗುಣವಿರುವುದರಿಂದ ತ್ವಚೆಯ ಏಜಿಂಗ್​ನ್ನು ನಿಯಂತ್ರಿಸಿ, ಸುಕ್ಕುಗಟ್ಟುವುದು, ನೆರಿಗೆ, ಕಲೆಗಳನ್ನು ತಡೆಯುತ್ತದೆ. ಯಾರಾದರೂ ಡೆಂಗ್ಯೂ ರೋಗಿಗಳಿದ್ದರೆ ಅವರಿಗೆ ಕಿವಿ ಹಣ್ಣು ನೀಡುವುದು ಬಹಳ ಉತ್ತಮವಾದ ಮದ್ದು. ಸಾಮಾನ್ಯವಾಗಿ ಡೆಂಗ್ಯೂ ಜ್ವರವನ್ನು ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯ, ಈ ಜ್ವರ ಸದ್ದಿಲ್ಲದೆ ವ್ಯಕ್ತಿಯನ್ನು ದುರ್ಬಲನನ್ನಾಗಿ ಮಾಡುತ್ತದೆ.

ಈ ಹಣ್ಣಿನಲ್ಲಿ ವಿಟಮಿನ್​ ಸಿ ಸಿಗುತ್ತದೆ ಕಿತ್ತಳೆ, ನಿಂಬೆಹಣ್ಣಿಗೆ ಹೋಲಿಸಿದರೆ ಕೀವಿ ಹಣ್ಣಿನಲ್ಲಿ ವಿಟಮಿನ್​ ಸಿ ಅಂಶ ಹೆಚ್ಚಿದೆ ಆದ್ದರಿಂದ ಈ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್​ ಹಾಗೆ ಇದು ಫ್ರೀ ರಾಡಿಕಲ್ಸ್​ನ್ನು ತೆಗೆದುಹಾಕಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಿವಿ ಹಣ್ಣು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೀವಿ ಹಣ್ಣು ಉತ್ತಮ ಮತ್ತು ಇದರಲ್ಲಿರುವ ಡಯೆಟ್ರಿ ಫೈಬರ್​ ಅಂಶ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ. ನಿದ್ದೆ ಸಮಸ್ಯೆಗೆ ಪರಿಹಾರ ನೀಡುತ್ತದೆ, ಕೀವಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಮತ್ತು ಸೆರೊಟೊನಿನ್​ ಅಂಶ ನಿದ್ದೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ ಮತ್ತು ಮಲಗುವ ಮುನ್ನ ಒಂದು ಕೀವಿ ಹಣ್ಣನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. 
ಹೀಗಾಗಿ ಜೀವ ಉಳಿಸಬಲ್ಲ ಗುಣವಿರುವ ಈ ಕಿವಿ ಫ್ರೂಟ್ ಬಹಳ ಉತ್ತಮವಾದ ಹಣ್ಣು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ