ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನ ಸೆಳೆದಿದೆ.
ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ ಕುರ್ಚಿ ಗಿಡಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿದೆ. ಗಿಡಗಳ ಮೂಲಕ ಇಲ್ಲಿ 250 ಚೇರ್‍ಗಳು, 100 ಲ್ಯಾಂಪ್‍ಗಳು ಮತ್ತು 50 ಟೇಬಲ್‍ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.ಕುರ್ಚಿ ಗಿಡ ಬೆಳೆಯಲು ಗೋವಿನ್‍ಗೆ ಬಾಲ್ಯವೇ ಪ್ರೇರಣೆ. ಬೋನ್ಸಾಯಿ ಗಿಡಗಳು ಬೆಳೆದು ಕುರ್ಚಿಯಂತೆ ಕಾಣುತ್ತಿತ್ತು. ಅಲ್ಲದೇ ಗೋವಿನ್‍ಗೆ ಬೆನ್ನುಲುಬು ಸಮಸ್ಯೆ ಇತ್ತು. ಬಾಲ್ಯದಲ್ಲಿ ಅವರ ಬೆನ್ನು ಮೂಳೆ ಸೊಟ್ಟವಾಗಿತ್ತು. ಅದನ್ನು ಸರಿಪಡಿಸಲು ಹಲವು ವರ್ಷಗಳ ಕಾಲ ಮೆಟಲ್ ಫ್ರೇಮ್ ಧರಿಸಿದ್ದರು. ಕುರ್ಚಿ ಗಿಡ ಬೆಳೆಯಲು ಗೋವಿನ್ 2006ರಲ್ಲಿ ಯತ್ನಿಸಿದರು. ಇಂಗ್ಲೆಂಡ್‍ನ ಪೀಕ್ ಜಿಲ್ಲೆಯಲ್ಲಿ ಎರಡು ತುಂಡು ನೆಲದಲ್ಲಿ ಅವರು ಮರದ ಕುರ್ಚಿಗಳನ್ನು ಸ್ವಾಭಾವಿಕವಾಗಿ ಬೆಳೆಸಲು ಮುಂದಾದರು.
2012ರಲ್ಲಿ ತಮ್ಮ ಯೋಜನೆಯನ್ನು ವಿಸ್ತರಿಸಿದರು. ಅದೇ ವರ್ಷ ಅಲೈಸ್ ಜೊತೆ ಗೋವಿನ್ ವಿವಾಹವಾಯಿತು. ದೊಡ್ಡ ಮಟ್ಟದಲ್ಲಿ ಮರದ ಕುರ್ಚಿಗಳನ್ನು ಬೆಳೆಯಬೇಕೆಂಬ ಅಭಿಲಾಷೆ ದುರಂತದಲ್ಲಿ ಅಂತ್ಯವಾಯಿತು. ಈ ಗಿಡಗಳನ್ನು ಹಸುಗಳು ಮತ್ತು ಮೊಲಗಳು ತಿಂದು ಹಾಕಿದವು. ಇದರಿಂದ ದೃತಿಗಡೆದ ದಂಪತಿ ಬೆಳವಣಿಗೆಯನ್ನು ಕುಂಠಿತ ಗೊಳಿಸದೆ ಮರವನ್ನು ಕುರ್ಚಿ ಆಕಾರದಲ್ಲಿ ಬೆಳೆಸಲು ಪರಿಣಾಮಕಾರಿ ಮಾರ್ಗ ಕಂಡುಕೊಂಡರು.
ಬೆಳೆಯುತ್ತಿರುವ ಕಾಂಡಗಳನ್ನು ಸರಿಯಾದ ದಿಕ್ಕಿನಲ್ಲಿ ಹಬ್ಬಿ ಕುರ್ಚಿಯ ಆಕಾರ ಪಡೆಯುವಂತೆ ಮಾಡಿದರು. ರೆಂಬೆಗಳು ಒಂದಕ್ಕೊಂದು ಬೆಸೆದುಕೊಳ್ಳಲು ಕಸಿ ವಿಧಾನ ಅನುಸರಿಸಿದರು. ಇವರ ಶ್ರಮ ಫಲ ನೀಡಿತು. ಕುರ್ಚಿಗಳು 12,480 ಡಾಲರ್, ಲ್ಯಾಂಪ್‍ಗಳು 2,870 ಡಾಲರ್ ಹಾಗೂ ಮೇಜುಗಳು 15,600 ಡಾಲರ್ ಮೌಲ್ಯ ಹೊಂದಿವೆ.ತೋಟದಲ್ಲೇ ಬೆಳೆಯುವ ಈ ಗಿಡ ಪೂರ್ಣಪ್ರಮಾಣದಲ್ಲಿ ಕುರ್ಚಿಯ ರೂಪ ಪಡೆಯಲು ಆರರಿಂದ ಒಂಭತ್ತು ವರ್ಷಗಳು ಬೇಕು. ಅಲ್ಲದೇ ಇದು ಸಂಪೂರ್ಣ ಒಣಗಲು ತೆಗೆದುಕೊಳ್ಳುವ ಅವಧಿ ಒಂದು ವರ್ಷ. 2030ರ ವೇಳೆಗೆ ಈ ಫರ್ನಿಚರ್ ಫಾರಂನನ್ನು ಮತ್ತಷ್ಟು ವಿಸ್ತರಿಸಲು ದಂಪತಿ ಬಯಸಿದ್ದಾರೆ. ಇದು ನಿವೃತ್ತರಾಗಿ ವಿಶ್ರಾಂತಿ ಪಡೆಯುವ ಮಂದಿಗೆ ಸೂಕ್ತವಾದ ಕುರ್ಚಿ ಎನಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ತನ್ನ ತಂದೆ ತಾಯಿ ಅಥವಾ ಅಘೋಷಿತವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ಮಾನಸಿಕ ಮತ್ತು ದೈಹಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ಅವನ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಹುಟ್ಟುವ ಸಮಯದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿ ಇದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗುತ್ತದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರಗಳಲ್ಲಿ…
ಬೆಂಗಳೂರು: ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ…
ನೂಡಲ್ಸ್ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೂಡಲ್ಸ್ ತಿನ್ನಲು ಇಷ್ಟಪಡ್ತಾರೆ. ತಿನ್ನುವ ಈ ನೂಡಲ್ಸನ್ನು ವ್ಯಕ್ತಿಯೊಬ್ಬ ಮನೆ ಕಟ್ಟಲು ಬಳಸಿದ್ದಾನೆ. ಯಸ್, ಇದು ಸತ್ಯ. ಚೀನಾದ ಜಾಂಗ್ ಎಂಬ ವ್ಯಕ್ತಿ ನೂಡಲ್ಸ್ ನಿಂದ ಮನೆ ನಿರ್ಮಾಣ ಮಾಡಿದ್ದಾನೆ. ಶೀಘ್ರವೇ ತಂದೆಯಾಗಲಿರುವ ಜಾಂಗ್, ಹುಟ್ಟುವ ಮಗುವಿಗಾಗಿ ಈ ಮನೆ ನಿರ್ಮಾಣ ಮಾಡಿದ್ದಾನೆ. ಅವಧಿ ಮೀರಿದ 2000 ನೂಡಲ್ಸ್ ಪ್ಯಾಕ್ ನಿಂದ ಈ ಮನೆ ನಿರ್ಮಾಣವಾಗಿದೆಯಂತೆ. ಜಾಂಗ್, ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸಕ್ಕೆ…
ಜೆಡಿಎಸ್ ನ ಶಾಸಕರಾಗಿದ್ದ ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಜಮೀರ್ ಅಹ್ಮದ್ ಖಾನ್, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ ಮತ್ತು ಭೀಮಾ ನಾಯ್ಕ್ ಪಕ್ಷದಲ್ಲಿಯೇ ಸಂಚಲನ ಸೃಷ್ಟಿಸುವುದರ ಮೂಲಕ ಪಕ್ಷದ ದೋರಣೆಗೆ ಗುರಿಯಾಗಿದ್ದರು. ಅಡ್ಡಮತದಾನ ಮಾಡಿರುವ ಏಳು ಮಂದಿ ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಂತೆ ಅದೇಶಿಸುವಂತೆ ಕೋರಿ ಜೆಡಿಎಸ್ನ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ, ಮೂಡಿಗೆರೆಯ ಬಿ.ವಿ ನಿಂಗಯ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕಳೆದ 2016ರಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ…
ದೇಹದಲ್ಲಿ ಪ್ರೊಟೀನ್ ಮತ್ತು ಪೋಷಕಾಂಶದ ಕೊರತೆಯಿದ್ದರೆ ಎತ್ತರ ಬೆಳೆಯುವುದು ಕಷ್ಟ. ಎತ್ತರವಾಗಬೇಕೆಂದು ಎಷ್ಟೋ ಪ್ರಯತ್ನ ಮಾಡಿದ್ದರೂ ಅದು ಫಲ ಕೊಟ್ಟಿರುವುದಿಲ್ಲ.
ಯಾರದ್ದೋ ಎದುರಿಗೆ ನಿಂತು ಅವರಷ್ಟು ಉದ್ದ ಇರಬೇಕಿತ್ತು ಅಂದು ಕೊಳ್ಳುತ್ತೀರ. ಅದು ಅಸಾಧ್ಯ ಅನ್ನುವ ಸಂಗತಿ ಕೂಡ ಗೊತ್ತೇ ಇದೆ. ಆದರೂ ಮನಸ್ಸು ಸಮಾಧಾನಗೊಳ್ಳುವುದಿಲ್ಲ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ