ಹಣ ಕಾಸು

ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

1850

ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ  ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ ಎಂಬ ಮಾಹಿತಿಯನ್ನು ಮುಂದೆ ಓದಿ….

*ದುಬಾರಿಯಾಗಲಿರುವ ಸೇವೆಗಳು:-

ನೋಟ್ ಬ್ಯಾನ್ ಆದ ನಂತರ  ಬ್ಯಾಂಕ್ ವ್ಯವಹಾರಗಳ ಮತ್ತು , ಎಟಿಎಂ ನಿಂದ ಹಣ ತೆಗೆಯುವವರ  ಮೇಲೆ ಲಿಮಿಟ್ ಹೇರಿದ್ದ ಬ್ಯಾಂಕ್‍ಗಳು ಈಗ ಜಿಎಸ್‍ಟಿ ತೆರಿಗೆ ಹೆಸರಲ್ಲಿ ಹೆಚ್ಚುವರಿ ಸೇವಾ ತೆರಿಗೆ ವಿಧಿಸಲು ಮುಂದಾಗಿವೆ.

ಬ್ಯಾಂಕ್ ನ ಯಾವ ಯಾವ ಸೇವೆಗಳು ದುಬಾರಿ?

 

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಿರ್ವಹಣೆಗೆ ಸೇವಾ ತೆರಿಗೆ ಹೆಚ್ಚಳವಾಗಲಿದೆ. ಜೊತೆಗೆ  4 ಬಾರಿ ಎಟಿಎಂ ವಿತ್‍ಡ್ರಾ ಲಿಮಿಟ್ ಮುಗಿದ್ಮೇಲೆ,ಮಾಡುವೆ ಪ್ರತಿ ವಿತ್‍ಡ್ರಾಗೂ  ಶುಲ್ಕ ಕಟ್ಟಬೇಕು. ಪೆಟ್ರೋಲ್ ಹಾಕಿಸಿದ್ರೆ, ಶಾಪಿಂಗ್, ಹೋಟೆಲ್‍ನಲ್ಲಿ ಕಾರ್ಡ್ ಉಜ್ಜಿದ್ರೂ ಸರ್ವಿಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ನಿಮ್ಮ ವಿಮೆ(ಇನ್ಸುರೆನ್ಸೆ)ಮೇಲೆ ಜಿಎಸ್ಟಿ ಪ್ರಭಾವ

ನೀವು ವಿಮೆ(ಇನ್ಸುರೆನ್ಸೆ) ಮಾಡಿಸಿದ್ರೆ  ಪ್ರತಿ ಕಂತಿನ ಮೇಲೆ ಸೇವಾ ತೆರಿಗೆ ಹಾಗೂ  ಇನ್ಶುರೆನ್ಸ್ ಚೆಕ್ ರೂಪದಲ್ಲಿ, ನಗದು ರೂಪದಲ್ಲಿ ಹಣ ಕಟ್ಟಿದ್ರೂ ಸೇವಾ ತೆರಿಗೆ  ಹೆಚ್ಚಳವಾಗಲಿದೆ.

 ರೈತರನ್ನು ಬಿಡದ ಜಿಎಸ್ಟಿ:-

ಅನ್ನದಾತ ರೈತರು ವ್ಯವಸಾಯಕ್ಕಾಗಿ ಬಳಸುವ ರಾಸಾಯನಿಕ ಗೊಬ್ಬರ, ಯಂತ್ರಗಳ ಮೇಲೂ ಜಿಎಸ್‍ಟಿ ತೆರಿಗೆ ಬೀಳಲಿದೆ. ಹೊಸ ಟ್ರ್ಯಾಕ್ಟರ್ ಮತ್ತು ಬಿಡಿಭಾಗಗಳು ಖರೀದಿಗೂ ತೆರಿಗೆ ಹೊರೆ ಬೀಳಲಿದೆ. ಬೆಳೆಗಳಿಗೆ ಬಳಸುವ ಕ್ರಿಮಿನಾಶಕಗಳ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ತೆರಿಗೆ ಹೊರೆ ಬೀಳಲಿದೆ.

ಆಭರಣ ಪ್ರಿಯರಿಗೆ ತೆರಿಗೆ :-

ಆಭರಣ ಪ್ರಿಯರು ಇನ್ಮುಂದೆ ಸ್ವಲ್ಪ ಯೋಚನೆ ಮಾಡಿ ಚಿನ್ನ ಕೊಳ್ಳಬೇಕಾಗಬಹುದು. ಏಕೆಂದರೆ  ಚಿನ್ನದ ಮೇಲೆ ಮತ್ತು ಮೇಕಿಂಗ್ ಮೇಲೆ ತೆರಿಗೆ ಬೀಳಲಿದೆ. ಬೆಳ್ಳಿ ಮೇಲೆಯೂ  ಜಿಎಸ್‍ಟಿ ತೆರಿಗೆ ಬೀಳಲಿದೆ.

ಮಹಿಳೆಯರ ಇನ್ಮುಂದೆ ಮೇಕಪ್ ಮಾಡಕ್ಕೂ ಮುಂಚೆ ಯೋಚನೆ ಮಾಡಿ:-

ಮಹಿಳೆಯರ ಮೇಕಪ್ ಐಟಮ್ಸ್, ಬ್ಯೂಟಿ ಪಾರ್ಲರ್ ಸೇವೆಗಳು ದುಬಾರಿಯಾಗಲಿವೆ. ಮೆನಿಕ್ಯೂರ್, ಪೆಡಿಕ್ಯೂರ್, ಸುಗಂಧ ದ್ರವ್ಯಗಳ, ಮೇಕಪ್ ಸಾಧನಗಳ, ಸ್ಕಿನ್ ಕೇರ್ ಸನ್‍ಸ್ಕ್ರೀನ್ ಮೇಲೆ  ಜಿಎಸ್‍ಟಿ ಬೀಳಲಿದೆ. ಇನ್ನು ಲೆದರ್ ಬ್ಯಾಗ್ ಹಾಗೂ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲೆ ಕೂಡ ಜಿಎಸ್‍ಟಿ ತೆರಿಗೆ ಹೆಚ್ಚಲಿದೆ.

ಜಿಎಸ್‍ಟಿಯಿಂದ ವಿನಾಯಿತಿ ಪಡೆಯಲಿರುವ ವಸ್ತುಗಳು ಯಾವುವು ಗೊತ್ತಾ…

ಮಹಿಳೆಯರ ಬಳೆ, ಕುಂಕುಮ ಹಾಗೂ ಬಿಂದಿಗೆ ಜಿಎಸ್‍ಟಿ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.

ಕುಡುಕರ ನಶೆ ಇಳಿಸಲಿರುವ ಜಿಎಸ್ಟಿ..

ತುರಾಡೋ ಕುಡುಕರಿಗೆ ಶಾಕ್ ಕೊಡಲಿರುವ  ಜಿಎಸ್‍ಟಿ ಜಾರಿಯಾದ್ಮೇಲೆ ಮದ್ಯ ತಯಾರಿಸೋ ಕಂಪನಿಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದನ್ನ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ವಸೂಲಿ ಮಾಡಲು ಕಂಪನಿಗಳು ನಿರ್ಧರಿಸಿವೆ. ಮದ್ಯ ತಯಾರಿಕಾ ಕಂಪನಿಗಳ ಪ್ರಕಾರ ಉತ್ಪಾದನಾ ತೆರಿಗೆ ಹೆಚ್ಚಾಗಲಿದ್ದು, ಈ ಹೊರೆಯನ್ನ ತಪ್ಪಿಸಲು ರಮ್, ಜಿನ್ನು, ವೈನ್, ಬಿಯರ್, ವಿಸ್ಕಿ ದರ ಹೆಚ್ಚಿಸಿ ಅದನ್ನ ಸೇವಾದರ ಹೆಸರಲ್ಲಿ ಗ್ರಾಹಕರಿಂದಲೇ ವಸೂಲಿ ಮಾಡಲು ಕಂಪನಿಗಳು ತೀರ್ಮಾನಿಸಿವೆ.

ನಟ ನಟಿಯರ ಮೇಲೆ ಜಿಎಸ್ಟಿ ತೆರಿಗೆ


ಜಿಎಸ್‍ಟಿ ಯಿಂದ 20 ಲಕ್ಷಕ್ಕೂ ಅಧಿಕ ಸಂಭಾವನೆ ಪಡೆಯುವ  ನಟ ನಟಿಯರಿಗೂ ಬಿಸಿ ತಟ್ಟಲಿದೆ. ನಟ ನಟಿಯರ ಸಂಭಾವನೆ ಮೇಲಿನ ತೆರಿಗೆ ಹೆಚ್ಚಳವಾಗಿದೆ.

ಆನ್‍ಲೈನ್ ಬುಕ್ಕಿಂಗ್ ಮತ್ತು  ವ್ಯವಹಾರದ ಮೇಲೆ ಜಿಎಸ್ಟಿ ಬರೆ

ಜುಲೈ 1 ರಾ ನಂತರ  ಆನ್‍ಲೈನ್ ವ್ಯವಹಾರದ ಮೇಲೆ 1% ತೆರಿಗೆ ನಿಗದಿಯಾಗಿದೆ. ನಷ್ಟ ಸರಿದೂಗಿಸಲು ಆನ್‍ಲೈನ್ ಬುಕಿಂಗ್ ಕಂಪನಿಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದೆ.

ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್:-

ಜುಲೈ 1ರಿಂದ ದೇಶಾದ್ಯಂತ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಜಾರಿಯಾಗ್ತಿದ್ದು, ಎಲ್ಲಾ ವಸ್ತುಗಳು ಒಂದೇ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದ್ರಿಂದ ಮನೆ ಖರೀದಿ ಕಡಿಮೆಯಾಗಲಿದೆ ಎನ್ನಲಾಗಿದೆ.

ಕನಸಿನ ಮನೆ ನಿರ್ಮಾಣ ಕಷ್ಟ :-

 

ಕಟ್ಟಡಕ್ಕೆ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಲಿದ್ದು, ಕಟ್ಟಡ ರಿಪೇರಿಗಾಗಿ ಪಡೆಯುವ ಸಾಲದ ಮೇಲೆ ಸಹ ಜಿಎಸ್ಟಿ ತೆರಿಗೆ ಬೀಳಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದುವೆಯಾದ್ರು ಬಸ್​​​ನಲ್ಲೇ ಜೀವನ ನಡೆಸುತ್ತಿರುವ ಪ್ರೇಮಿಗಳು..!ಇದಕ್ಕೆ ಕಾರಣ ಏನು ಗೊತ್ತಾ..?

    ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್​​​ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…

  • govt, ಕರ್ನಾಟಕ

    ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್‌ ಸಾರಿಗೆ ಸಮ್ಮೇಳನದಲ್ಲಿ KSRTC ವೋಲ್ವೊ ಬಸ್‌ಗೆ ಪ್ರಶಸ್ತಿ, ಯಾಕೆ ಗೊತ್ತಾ.?

    ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್‌ ಸಾರಿಗೆ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್‌ಆರ್‌ಟಿಸಿ) ವೋಲ್ವೊ ಬಸ್‌ಗಳು ರಿಪೇರಿಯಿಲ್ಲದೆ 20 ಲಕ್ಷ ಕಿ.ಮೀ. ಕ್ರಮಿಸಿ 2 ಮಿಲಿಯನ್‌  ಕ್ಲಬ್‌ಗೆ ಸೇರ್ಪಡೆಯಾಗಿ ಜಾಗತಿಕ ಮನ್ನಣೆ ಗಳಿಸಿವೆ. ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಓಡುತ್ತಿರುವ ವೋಲ್ವೊ ಬಸ್‌ಗಳು ಹೆಚ್ಚಿನ ಮೈಲೇಜ್‌ ನೀಡುವ ಜತೆಗೆ, ರಿಪೇರಿಯಿಲ್ಲದೆ 20 ಲಕ್ಷ ಕಿ.ಮೀ ಸಂಚರಿಸಿವೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್‌ ಸಾರಿಗೆ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ವೋಲ್ವೊ ಬಸ್‌…

  • ಆಧ್ಯಾತ್ಮ, ಉಪಯುಕ್ತ ಮಾಹಿತಿ

    ದೇವರಿಗೆ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು ಏಕೆ ಗೊತ್ತಾ?ಇದರ ಹಿಂದೆ ಕಾರಣ…

    ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(4 ಡಿಸೆಂಬರ್, 2018) ನೀವು ಏನು ಮಾಡಬೇಕೆಂದುಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ನೀವು ಇಂದು ಪ್ರೀತಿಮಾಡುವ ಅವಕಾಶವನ್ನುಕಳೆದುಕೊಳ್ಳದಿದ್ದಲ್ಲಿ,…

  • ಆರೋಗ್ಯ

    ವೀಳ್ಯದೆಲೆ ಸೇವಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ವೀಳ್ಯದೆಲೆ ಸೇವಸುವುದು ಹಳೆ ಕಾಲದವರು ಎಂದು ಬಹಳ ಮಂದಿ ಮೂಗು ಮುರಿಯಬಹುದು. ಆದರೆ ಅಂತಹವರು ವೀಳ್ಯದೆಲೆಯಲ್ಲಿ ಇಷ್ಟೊಂದು ಆರೋಗ್ಯ ವೃದ್ಧಿಸುವು ಅಂಶಗಳು ಇವೆ ಎಂದು ತಿಳಿದರೆ ಆಶ್ಚರ್ಯ ಮಾಡುತ್ತಾರೆ.