ಸಿನಿಮಾ, ಸುದ್ದಿ

ಕಿಚ್ಚ ಸುದೀಪ್ ಗೆ ಪತ್ನಿಯಿಂದಲೇ ಧಮ್ಕಿ, ಪತ್ನಿಗೆ ಹೆದರಿ ಹನ್ನೊಂದು ಬಾರಿ ಒಂದೇ ಸಿನಿಮಾ ನೋಡಿದ ಕಿಚ್ಚ.!

56

ತಿಯೊಬ್ಬ ಸಿನಿಮಾ ಅಭಿಮಾನಿಯಾಗಲಿ ನಟನಾಗಲಿ‌ ಒಂದು ಸಿನಿಮಾವನ್ನು ಎಷ್ಟು ಬಾರಿ ನೋಡಬಹುದು ಹೇಳಿ? ಹೇಗಾದರು ಮಾಡಿ ಎರಡರಿಂದ ಮೂರು ಬಾರಿ ಸಿನಿಮಾ ವೀಕ್ಷಣೆ ಮಾಡಬಹುದು. ಅದರಲ್ಲೂ ಸ್ಟಾರ್ ನಟರಂತೂ ತಾವು ಮಾಡಿದ ಸಿನಿಮಾವನ್ನು ಒಂದು ಬಾರಿ ನೋಡುವುದೇ ಕಷ್ಟದ ಪರಿಸ್ಥಿತಿ. ಆದರೆ, ಚಿತ್ರರಂಗದ ಕಿಚ್ಚ ಮಾತ್ರ ಒಂದೇ ಸಿನಿಮಾವನ್ನು ಹತ್ತರಿಂದ ಹನ್ನೊಂದು ಬಾರಿ ನೋಡಿದ್ದಾರಂತೆ. ಅದೂ ಅವರ ಪತ್ನಿಯೊಂದಿಗೆ! ಪತ್ನಿಯ ಧಮ್ಕಿಗೆ ಹೆದರದೆ ಫೈಲ್ವಾನ್ ಈ ರೀತಿ ಮಾಡಿದ್ದಾರಂತೆ.

ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರ ತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರದ ಕುರಿತ ಸಂದರ್ಶನವೊಂದರಲ್ಲಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿ ಈ ರೀತಿ ಹೇಳಿದ್ದಾರೆ. ನನ್ನ ಪತ್ನಿಯಿಂದಾಗಿ ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಹತ್ತರಿಂದ ಹನ್ನೊಂದು ಬಾರಿ ನೋಡಿದ್ದೇನೆ. ನೀನು ನನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗದಿದ್ದರೆ ನಾನು ಬೇರೆಯವರ ಜೊತೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಪ್ರತೀ ಬಾರಿ ಅವಳ ಜೊತೆ ಚಿತ್ರಮಂದಿರಕ್ಕೆ ಹೋಗಿ ಕುಳಿತು, ಚಿತ್ರ ನೋಡಿ ಮರಳಿ ಬರುತ್ತಿದ್ದೆ ಎಂದು ಮಡದಿಯ ಧಮ್ಕಿ ಕುರಿತು ಹೇಳಿದ್ದಾರೆ.

ಮೊದಲ ಬಾರಿ ಸಿನಿಮಾ ನೋಡಿದಾಗ ಹೃತಿಕ್ ರೋಷನ್ ಅವರ ನಟನೆ, ಡ್ಯಾನ್ಸ್, ಸ್ಟೈಲ್ ಸೇರಿದಂತೆ ಅವರ ಅಭಿನಯ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾದಲ್ಲಿ ಹೃತಿಕ್ ಡ್ಯಾನ್ಸ್ ಮಾಡುತ್ತಿದ್ದಾಗ, ಇಲ್ಲಿ ನನ್ನ ಪತ್ನಿ ನನ್ನ ಕೈ ಚಿವುಟುತ್ತಿದ್ದರು. ಆಗ ನನಗೆ ಸಿಟ್ಟು ಬರುತ್ತಿತ್ತು. ನಾನು ಒಬ್ಬ ನಟ. ನನಗೂ ರಾಜ್ಯದ ತುಂಬ ಅಭಿಮಾನಿಗಳು ಇದ್ದರು. ಆದರೆ, ನನ್ನ ಪತ್ನಿ ಬೇರೆ ನಟನ ಅಭಿಮಾನಿಯಾಗಿದ್ದು, ಬೇಸರ ಮೂಡಿಸುತ್ತಿತ್ತು ಎಂದು ಹಾಸ್ಯಭರಿತವಾಗಿ ಹೇಳಿದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಎನ್ ಡಿಎ 2.0 ತನ್ನ ಮೊದಲ ಐದು ವರ್ಷಗಳ ಆರ್ಥಿಕ ಕಾರ್ಯತಂತ್ರ ಯೋಜನೆ ಜಾರಿಗೆ ತರಲಿ: ಕಿರಣ್ ಮಜುಂದಾರ್ ಶಾ ಹೆಳಿಕೆ…..

    ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…

  • ಆರೋಗ್ಯ

    ಹುಷಾರ್.!ನೀವು ಕಬಾಬ್ ತಿನ್ನುತ್ತಿರಾ.? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ…

    ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್‌ ಫುಲ್ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ. ಹಣ ಕೊಟ್ಟು ಸಿಕ್ಕಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ.ಅಲ್ಲದೆ ಸಿಗರೇಟಿನ  ವೇಸ್ಟ್ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ. ಸಿಗರೇಟು ಸೇದಿದ ಹಾಗೂ…

  • ಉಪಯುಕ್ತ ಮಾಹಿತಿ

    ಇನ್ಮುಂದೆ ಈ ರೂಲ್ಸ್ ತಿರಸ್ಕರಿಸಿದ ತಕ್ಷಣವೆ ನಿಮ್ಮ ಫೇಸ್ಬುಕ್ ಬ್ಲಾಕ್….!

    ನ್ಯೂಜಿಲ್ಯಾಂಡ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ನಿಯಮಗಳನ್ನು ಬದಲಾಯಿಸಿಕೊಂಡಿದೆ. ಉಗ್ರನೋರ್ವ ಹಿಂಸಾತ್ಮಕ ದಾಳಿಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಆಗಿ ವಿಡಿಯೋ ಮಾಡಿದ ನಂತರ, ಫೇಸ್‌ಬುಕ್ ತನ್ನ ಲೈವ್-ಸ್ಟ್ರೀಮಿಂಗ್ ಸೇವೆಯನ್ನು ಬಳಸುವುದಕ್ಕೆ ನಿಬಂಧನೆಗಳನ್ನು ಹೇರಿರುವುದಾಗಿ ಘೋಷಿಸಿದೆ. ನ್ಯೂಜಿಲ್ಯಾಂಡ್ ದಾಳಿಯಿಂದ ಭಾರೀ ವಿವಾದಕ್ಕೆ ಒಳಗಾಗಿದ್ದ ಫೇಸ್‌ಬುಕ್ ತನ್ನ ನೇರ ಪ್ರಸಾರ ನಿಯಮಗಳನ್ನು ಬದಲಿಸಿರುವುದಾಗಿ ತಿಳಿಸಿದ್ದು, ತಾನು ನೂತನವಾಗಿ ಜಾರಿಗೆ ತಂದಿರುವ ನಿಯಮಗಳನ್ನು ಮೀರಿ ಯಾರಾದರೂ ಹಿಂಸಾತ್ಮಕ ವೀಡಿಯೊ ಸ್ಟ್ರೀಮಿಂಗ್ ಅಥವಾ ಪೋಸ್ಟ್‌ಗಳನ್ನು ಅಪ್ ಲೋಡ್…

  • ಸುದ್ದಿ

    ಕರ್ತವ್ಯಕ್ಕೆ ತೆರಳಿದ ಪತಿಗಾಗಿ 19 ವರ್ಷ ಶಬರಿಯಂತೆ ಕಾಯ್ದ ಪತ್ನಿ…….!

    ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ. 1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು…

  • ಸುದ್ದಿ

    ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ದರ್ಶನ್ ಈಗ ಮಾಲಿವುಡ್​ನಲ್ಲಿ ತೆರೆಕಾಣಲಿದ್ದಾರೆ,…

    ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಅಂದರೆ ಯಾರಿಗೆ  ತಾನೇ ಇಷ್ಟ ಇರಲ್ಲ ಹೇಳಿ, ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದವರು. ಈಗ ಅವರು ಮಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ಮಲಯಾಳಂ ಸಿನಿಮಾ ಮಾಡುತ್ತಿದ್ದಾರೆ ಅಂತ ಅಲ್ಲ , ಅವರು ಯಾವ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ . ಅಸಲಿ ವಿಚಾರ ಏನೆಂದರೆ, ‘ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿರುವ  ಕಾರಣಕ್ಕಾಗಿ ಈ ಸಮಾಚಾರ ಹುಟ್ಟುಹಾಕಿದೆ. ದರ್ಶನ್​, ಹಿರಿಯ ನಟ ಅಂಬರೀಶ್​, ನಟ ನಿಖಿಲ್​ ಕುಮಾರಸ್ವಾಮಿ, ರವಿಚಂದ್ರನ್​ ಸೇರಿ ಅನೇಕರು ಈ…