ಸುದ್ದಿ

ತೆಲುಗು ನಟ ರಾಮ್‍ಗೆ ಪೊಲೀಸರಿಂದ 200 ರೂ. ದಂಡ…!

50

ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.

ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದರು. ಜೊತೆಗೆ ಹೈದರಾಬಾದ್ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ. ರಾಮ್ ಕೂಡ ದಂಡದ ಶುಲ್ಕವನ್ನು ಪಾವತಿಸಿದ್ದಾರೆ.

ಇಲ್ಲಿಯವರೆಗೆ ಚಾರ್ಮಿನಾರ್ ನಲ್ಲಿ ಧೂಮಪಾನ ಮಾಡಿದ್ದಕ್ಕಾಗಿ 20 ಜನರನ್ನು ಹಿಡಿದು ದಂಡ ವಿಧಿಸಲಾಗಿದೆ. ಇದೇ ರೀತಿ ಕಾರ್ಯಚರಣೆಯನ್ನು ಮುಂದುವರಿಸುತ್ತೇವೆ. ಇದರಿಂದ ಜನರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಸಬ್ ಇನ್ಸ್‍ಪೆಕ್ಟರ್ ಬಿ.ಪಾಂಡರಿ ಹೇಳಿದ್ದಾರೆ.
ಇಸ್ಮಾರ್ಟ್ ಶಂಕರ್’ ಸಿನಿಮಾವನ್ನು ಪ್ರಸ್ತುತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಮಾಡುತ್ತಿದ್ದು, ನಭಾ ನಟೇಶ್ ಮತ್ತು ನಿಧಿ ಅಗರ್ವಾಲ್ ಸಿನಿಮಾದಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ತಂತ್ರಜ್ಞಾನ

    ಭಾರತ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎಲ್ಲಿದೆಯೆಂದು ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.

  • ಸುದ್ದಿ

    ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(2 ಡಿಸೆಂಬರ್, 2018) ನೀವು ನಂತರ ಪಶ್ಚಾತ್ತಾಪಪಡುವಷ್ಟು ಕೆಟ್ಟದಾಗಿ ನೀವೇನಾದರೂ ಮಾಡುವಷ್ಟು ನೀವು ಕೋಪಗೊಳ್ಳುವಂತೆ ಮಾಡಲು ಯಾರಿಗೂ ಅವಕಾಶ ನೀಡಬೇಡಿ. ಮನರಂಜನೆಅಥವಾ ಹೊರನೋಟದ…

  • govt, ಉದ್ಯೋಗ

    IFFCO ನೇಮಕಾತಿ 2020

    ಇಫ್ಕೊ ನೇಮಕಾತಿ 2020 ಅಧಿಸೂಚನೆ ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ iffco.in ಇಫ್ಕೊ ನೇಮಕಾತಿ 2020: ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಭಾರತೀಯ ರೈತ ರಸಗೊಬ್ಬರ ಸಹಕಾರಿ (ಇಫ್ಕೊ) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇಫ್ಕೊ ಅಧಿಕೃತ ಅಧಿಸೂಚನೆ ಸೆಪ್ಟೆಂಬರ್ -2020 ಮೂಲಕ ಆಹ್ವಾನಿಸಿದೆ….

  • ಸುದ್ದಿ

    ಅಧ್ಯಯನ ಮುಂದುವರೆಸಿದ ಇಸ್ರೋ HOPE FOR THE BEST ಎಂದ ಮೋದಿ,..!

    ದೇಶದ ಮಹತ್ವದ ಚಂದ್ರಯಾನ-2 ದ ವಿಕ್ರಂ ಲ್ಯಾಂಡರ್​  ಸಂಪರ್ಕ ಕಡಿತಗೊಂಡಿದ್ದರೂ ನೀರಿಕ್ಷೆಗಳು ಮುಗಿದಿಲ್ಲ. ಹೌದು ಇಸ್ರೋ ಚಂದ್ರಾನ್ವೇಷಣೆ ಯತ್ನದಲ್ಲಿ ಇನ್ನೂ ಕೊನೆಯ ನಿರೀಕ್ಷೆಗಳು ಇದ್ದೇ ಇವೆ. ಕೊನೆ ಹಂತದಲ್ಲಿ ಸಂಪರ್ಕ ಕಡಿದುಕೊಂಡ ವಿಕ್ರಮ್​​ ಲ್ಯಾಂಡರ್​​​ ಬಗ್ಗೆ ಇಸ್ರೋ ಅಧ್ಯಯನ ಮುಂದುವರೆಸಿದ್ದು, ಯಾವುದೇ ಕ್ಷಣದಲ್ಲಾದರೂ ವಿಕ್ರಮ್​ ಲ್ಯಾಂಡರ್​ ಮಾಹಿತಿ ರವಾನಿಸಬಹುದೆಂಬ ನೀರಿಕ್ಷೆಯಲ್ಲಿದೆ ಇಸ್ರೋ. ಚಂದ್ರನ ದಕ್ಷಿಣ ಧ್ರುವಕ್ಕೆ ಸ್ಪರ್ಶ ಮಾಡುವ ಹಂತದಲ್ಲಿ ವಿಕ್ರಂ ಲ್ಯಾಂಡರ್​​​​​​​ ಸಂಪರ್ಕ ಕಡಿತಕೊಂಡಿತ್ತು. 2.1 ಕಿಲೋ ಮೀಟರ್​ ದೂರದಲ್ಲಿ ಇಸ್ರೋ ಹಿಡಿತಕ್ಕೆ ಸಿಗದೇ ಮುಂಜಾನೆ 1.55ರ…

  • ರೆಸಿಪಿ

    ನಿಮ್ಮ ಮನೆಯಲ್ಲೇ ರುಚಿ ರುಚಿಯಾದ “ಪಾನಿ ಪುರಿ” ತಯಾರಿಸಿ…

    ಸಂಜೆ ಆದ್ರೂ ಸಾಕು, ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕೆಂದು ಎಲ್ಲಾ ರೀತಿಯ ವಯೋಮಾನದವರಿಗೆ ಇಷ್ಟವಾಗುತ್ತದೆ. ಆದ್ರೆ ಹೆಚ್ಚಾಗಿ ತಳ್ಳು ಗಾಡಿಯಲ್ಲಿ ಸಿಗುವ ಪಾನಿ ಪುರಿಯನ್ನು ತಿನ್ನಲು ಕೆಲವರು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ.ಯಾಕೆಂದ್ರೆ ತಳ್ಳು ಗಾಡಿಯಲ್ಲಿನ ಸ್ವಚ್ಚತೆ ಕುರಿತು ಕೆಲವರಿಗೂ ಅನುಮಾನ. ಆದ್ರೂ ತಿನ್ನದೇ ಸುಮ್ಮನೆ ಇರಲಿಕ್ಕೆ ಆಗೋದಿಲ್ಲ.