ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಕ್ ಗುರು ಎನಿಸಿಕೊಂಡಿರುವ ಗೂಗಲ್ ವಿಡಿಯೊ ಕಾಲಿಂಗ್‌ಗಾಗಿ ‘ಗೂಗಲ್ ಡುಯೋ'(Google Duo) ಆಪ್ ಅನ್ನು ಪರಿಚಯಿಸಿದೆ. ಈ ಆಪ್‌ನಲ್ಲಿ ವಿಡಿಯೊ ಕಾಲಿಂಗ್ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ವಿಡಿಯೊ ಕಾಲಿಂಗ್ ಭಾರೀ ಟ್ರೆಂಡ್ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಮತ್ತಷ್ಟು ಹೊಸತನಗಳನ್ನು ಅಳವಡಿಸಲು ಸಜ್ಜಾಗಿದೆ.

ಹೌದು, ಗೂಗಲ್ ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಇದೀಗ ‘ಗ್ರೂಪ್ ವಿಡಿಯೊ ಕಾಲಿಂಗ್’ ಮತ್ತು ‘ಡಾಟಾ ಸೇವಿಂಗ್ ಮೋಡ್’ ಫೀಚರ್ಸ್‌ಗಳನ್ನು ಸೇರಿಸಲಿದೆ. ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಫೇಸ್ ಟು ಫೇಸ್ ವಿಡಿಯೊ ಕಾಲಿಂಗ್ ಮಾಡಲು ಇಚ್ಚಿಸುತ್ತಿದ್ದು, ಈಗಾಗಲೇ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಗೂಗಲ್ ಡುಯೋ ಆಪ್‌ನ ಬಳಕೆದಾರರ ಸಂಖ್ಯೆಯು ಸಹ ಏರಿಕೆಗತಿಯಲ್ಲಿದೆ. ಎಂದು ಗೂಗಲ್ ಪ್ರೊಡೆಕ್ಟ್ ಮ್ಯಾನೇಜರ ಶ್ವೇತಾ ವೈದ್ಯ ಹೇಳಿದ್ದಾರೆ.ಎರಡು ಹೊಸ ಫೀಚರ್ಸ್‌ಗಳೊಂದಿಗೆ ಕಂಪನಿಯು ಬಳಕೆದಾರರು ಖಾಸಗಿತನದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದು, ವಿಡಿಯೊ ಕಾಲಿಂಗ್ ಗುಣಮಟ್ಟವು ಹೈ ಕ್ವಾಲಿಟಿಯಲ್ಲಿರುತ್ತದೆ. ಹಾಗಾದರೇ ಗೂಗಲ್ ಡುಯೋ ಕಾಲಿಂಗ್ ಆಪ್ ನೂತನ ಫೀಚರ್ಸ್‌ಗಳು ಏನೆಲ್ಲಾ ಪ್ರಯೋಜನ ಒದಗಿಸಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡೇಟಾ ಸೇವಿಂಗ್ ಹೆಚ್ಚು ಜನಪ್ರಿಯವಾಗುತ್ತಿರುವ ಗೂಗಲ್ ಡುಯೋ ವಿಡಿಯೊ ಕಾಲಿಂಗ್ ಆಪ್‌ನಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಡೇಟಾ ಸೇವಿಂಗ್ ಮೋಡ್ ಆಯ್ಕೆಯನ್ನು ಸೇರಿಸಲಿದ್ದು, ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳುವ ಮೂಲಕ ಬಳಕೆದಾರರು ಶೇ.50% ಮೊಬೈಲ್ ಡಾಟಾ ಉಳಿಸಿಬಹುದು. ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಸೇರಿಕೊಳ್ಳಲಿದೆ ಎನ್ನಲಾಗಿದೆ.
ಗ್ರೂಪ್ ವಿಡಿಯೊ ಕಾಲಿಂಗ್ ಗೂಗಲ್ ಡುಯೋ ಆಪ್‌ನಲ್ಲಿ ಸಂಸ್ಥೆಯು ಹೊಸದಾಗಿ ಗ್ರೂಪ್ ವಿಡಿಯೊ ಕಾಲಿಂಗ್ ಆಯ್ಕೆಯನ್ನು ಸೇರಿಸಲಿದ್ದು, ಗ್ರೂಪ್ ಕಾಲಿಂಗ್ ಫೀಚರ್‌ನಲ್ಲಿ ಒಂದು ಬಾರಿಗೆ ಗರಿಷ್ಠ 8 ಸದಸ್ಯರೊಂದಿಗೆ ಕಾಲ್ ಕನೆಕ್ಟ್ ಮಾಡಬಹುದಾಗಿದೆ. ಗ್ರೂಪ್ ವಿಡಿಯೊ ಕಾಲಿಂಗ್ ಆಯ್ಕೆ ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎನ್ನಲಾಗುತ್ತಿದೆ.

ಭದ್ರತೆ ಗೂಗಲ್ ಎರಡು ಮಹತ್ತರ ಫೀಚರ್ಸ್‌ಗಳನ್ನು ಸೇರಿಸಲಿದ್ದು, ಇದರೊಂದಿಗೆ ಬಳಕೆದಾರರ ಕಾಲಿಂಗ್ ಮತ್ತು ಮೆಸೆಜ್‌ಗೆ ಸುರಕ್ಷತೆ ಒಸಗಿಸಲು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಭದ್ರತೆ ನೀಡುತ್ತದೆ. ಬಳಕೆದಾರಿಗೆ ತಮ್ಮ ಗ್ರೂಪ್ ಕಾಲಿಂಗ್‌ನಲ್ಲಿ ಖಾಸಗಿತನ ಕಾಪಾಡಲು ಈ ಆಯ್ಕೆ ಉಪಯುಕ್ತವೆನಿಸಲಿದೆ.
ಡಾಟಾ ಬಳಕೆ ಲಿಮಿಟ್ ಡಾಟಾ ಬಳಕೆಯಲ್ಲಿ ಲಿಮಿಟ್ ಆಯ್ಕೆ ಸಹ ಇರಲಿದ್ದು, ಈ ಆಯ್ಕೆಯು ಮೊಬೈಲ್ ಡಾಟಾ ಮತ್ತು ವೈಫೈ ನೆಟವರ್ಕ್ ಸೌಲಭ್ಯದ ಬಳಕೆಯಲ್ಲಿಯು ಲಭ್ಯವಾಗಲಿದೆ. ಭಾರತ, ಇಂಡೊನೇಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಬಳಕೆದಾರರಿಗೆ ಡಾಟಾ ಬಳಕೆಯಲ್ಲಿ ಲಿಮಿಟ್ ಆಯ್ಕೆ ದೊರೆಯಲಿದೆ.
ಫೀಚರ್ಸ್ ಸೇರ್ಪಡೆ ಗೂಗಲ್‌ನ ಎರಡು ಹೊಸ ಫೀಚರ್ಸ್‌ಗಳು ಭಾರತದ ಅಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಐಓಎಸ್ ಮಾದರಿಯ ಓಎಸ್ ಬಳಕೆದಾರರಿಗೂ ದೊರೆಯಲಿದೆ. ನೂತನ ಅಪ್‌ಡೇಟ್ ವರ್ಷನ್‌ನಲ್ಲಿ ಈ ಫೀಚರ್ಸ್‌ಗಳು ಸೇರಿಕೊಳ್ಳಲಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಇದೀಗ ಈ ಪ್ರಕರಣಕ್ಕೆ ರಾಜಕೀಯ ಪ್ರವೇಶ ಕೂಡ ಆಗಿದೆ. ನಟ ಅರ್ಜುನ್ ಸರ್ಜಾ ಪೋಲಿಸ್ ವಿಚಾರಣೆ ವೇಳೆ ಬಿಜೆಪಿಯ ತೇಜಸ್ವಿನಿ ರಮೇಶ್ ಕೂಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ತಂದೆಯವರು ಮೂಲತಃ ಆರ್‍ಎಸ್‍ಎಸ್ ನವರಾಗಿದ್ದು ಎಡಪಂಥಿಯರು ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್…
ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದರೆ ಅತಿಯಾದ ನಷ್ಟ. ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ…
ಕಾಫಿ, ಟೀಗೆ ಸಂಬಂದಿಸಿದಂತೆ ದಿನನಿತ್ಯ ಹಲವಾರು ಸುದ್ದಿಗಳು ಹರಿದಾಡುತ್ತಿರುತ್ತವೆ. ಕೆಲವರು ಕಾಫಿ,ಟೀ ಆರೊಗ್ಯಕ್ಕೆ ಒಳ್ಳೆಯದು ಎಂದರೆ ಇನ್ನು ಕೆಲವರು ಒಳ್ಳೆಯದಲ್ಲ ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಕಾಫಿ, ಟೀ ಮೇಲೆ ಆಗಾಗ ನಾನಾ ಬಗೆಯ ಸಂಶೋಧನೆಗಳೂ ನಡೆಯುತ್ತಿರುತ್ತವೆ.
ಬೇಸರವಾಗುತ್ತಿದ್ದಾರೆ ನಿಜವಾಗಿಯೂ ಆಸಕ್ತಿರಹಿತವಾಗಿರುತ್ತದೆ, ಆದರೆ ನೀವು ಅದನ್ನು ಉತ್ತಮ ಸಮಯಕ್ಕೆ ಬದಲಾಯಿಸಬಹುದು.
ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು ‘ಕನ್ನಡದ ಕೋಟ್ಯಧಿಪತಿ’ ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ…
ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಕಿಸಾನ್ ಸಮ್ಮಾನ್’ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಅಂತಿಮ ದಿನವಾಗಿದೆ. ಇದುವರೆಗೂ ಅರ್ಜಿ ಸಲ್ಲಿಸದ ರೈತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಈ ಯೋಜನೆಯನ್ವಯ ರೈತರಿಗೆ ಒಟ್ಟು ಮೂರು ಕಂತುಗಳಲ್ಲಿ 6000 ರೂ. ಸಹಾಯ ಧನ ನೀಡಲಾಗುತ್ತಿದ್ದು, ಫಲಾನುಭವಿಗಳು ನಾಡಕಚೇರಿ, ಅಟಲ್ ಜನ ಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ ಲಭ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ರೈತರ ಖಾತೆಗೆ ನೇರವಾಗಿ ಹಣ ಬರಲಿದ್ದು,…