ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ.

ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು.

ಬೆಳೆ ಮೊಳಕೆಯೊಡೆದು ಈಗ ನೆಲ ಬಿಟ್ಟು ಮೇಲೆದಿದ್ದೆ. ಆದರೆ ಈ ಸಂದರ್ಭದಲ್ಲಿ ಬೇಕಾಗಿರುವ ಮಳೆ ಈಗ ಕೈಕೊಟ್ಟಿದ್ದು ರಣ ಬಿಸಿಲು ಆವರಿಸಿದೆ. ಇದರಿಂದ ರೈತನ ಪರಿಸ್ಥಿತಿ ಚಿಂತಾಜನಕವಾಗಿದೆ. ಹೇಗಾದರೂ ಮಾಡಿ ನೆಲದಿಂದ ಮೇಲೆದ್ದಿರುವ ಹೆಸರು ಮತ್ತು ಬಿಟಿ ಹತ್ತಿ ಉಳಿಸಿಕೊಳ್ಳಬೇಕು ಎಂದು ಸಾಲ ಮಾಡಿ ಬಾಡಿಗೆ ಟ್ಯಾಂಕರ್ ಪಡೆದು ನೀರು ಹಾಕುತ್ತಿದ್ದಾರೆ.

ಟ್ಯಾಂಕ್ವೊಂದಕ್ಕೆ ದಿನಕ್ಕೆ 500 ರೂಪಾಯಿ ಬಾಡಿಗೆ ಕೊಡಬೇಕಾಗಿದೆ. ಒಂದು ಟ್ಯಾಂಕರ್ ನೀರಿಗೆ 150ರಿಂದ 200 ರೂಪಾಯಿ ಕೊಟ್ಟು ಎಲ್ಲೆಲ್ಲಿಂದಲೂ ನೀರು ತುಂಬಿಸಿಕೊಂಡು ಬರುತ್ತಿದ್ದಾರೆ. ಒಣ ಹವೆ ರಭಸವಾಗಿ ಬೀಸುತ್ತಿದ್ದರಿಂದ ತೇವಾಂಶದ ಕೊರತೆಯಿಂದ ಹೊಲದಲ್ಲಿದ್ದ ಬಿ.ಟಿ. ಹತ್ತಿ, ಹೆಸರು, ಒಣಗಿ ಹೋಗುವ ಆತಂಕ ಇರುವುದರಿಂದ ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದು, ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರ ವಿರುದ್ಧ ಮಾಡಿರುವ ಆರೋಪ, ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸುಮಲತಾ ಅಂಬರೀಶ್, ಹತಾಶೆಗೊಳಗಾಗಿರುವ ಜೆಡಿಎಸ್ ನಾಯಕರು ಈಗ ತಮ್ಮ ವಿರುದ್ಧ ವೈಯಕ್ತಿಕ ಜೀವನದ ಕುರಿತು ದಾಳಿ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡುವ ಕುರಿತು ಅವರುಗಳು ಸಮಾಲೋಚನೆ…
ಮೈಸೂರು: ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಮೇಲ್ವರ್ಗದ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರು- ಊಟಿ ರಸ್ತೆಯ ವೀರಾನಪುರ ಗೇಟ್ ಬಳಿಯ ಗ್ರಾಮದವೊಂದರಲ್ಲಿ ನಡೆದಿದೆ. ಜೂನ್ 3 ರಂದು ಘಟನೆ ನಡೆದಿದ್ದು, ದಲಿತ ವ್ಯಕ್ತಿಗೆ ಥಳಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳ್ಳಗಾದ 35 ವರ್ಷದ ವ್ಯಕ್ತಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಸೆಂಟ್ ಮೇರಿಸ್ ಸೈಕಿಯಾಟ್ರಿಕ್ ಡಿ- ಅಡಿಕ್ಸನ್ ಮತ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಾಲಯ ಪ್ರವೇಶಿಸಿದ್ದರಿಂದ ಮೇಲ್ವರ್ಗದವರು ಹಲ್ಲೆ ನಡೆಸಿದ್ದು,…
ನಮ್ಮ ದೇಹದ ವಿಸರ್ಜನಾಂಗಗಳಲ್ಲಿ ಕಿಡ್ನಿಯ ಪಾತ್ರ ಅತೀ ಮಹತ್ವವನ್ನು ಪಡೆದಿದೆ. ದೇಹದಲ್ಲಿರುವ ಕಶ್ಮಲ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರದೂಡಿ ದೇಹವನ್ನು ಸದಾ ಕಾಪಾಡುವ ಅಂಗ ಇದಾಗಿದೆ. ದೇಹದ ನೀರಿನಾಂಶದ ಮಟ್ಟವನ್ನು ಸದಾ ನಿಯಂತ್ರಣದಲ್ಲಿ ಇಟ್ಟು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ದೇಹದ ಈ ಅಂಗವನ್ನು ಉತ್ತಮವಾಗಿಸಿ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಲು ನಾವು ತೆಗೆದುಕೊಳ್ಳುವ ಆಹಾರಗಳಿಂದ ಸಾಧ್ಯ. ಕಿಡ್ನಿಯ ರೋಗಗಳನ್ನು ತಡೆಗಟ್ಟಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ತೆಗೆದುಕೊಳ್ಳಬಹುದಾದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಲಿಂಬೆಕಾಯಿ ಲಿಂಬೆಕಾಯಿಯಲ್ಲಿ ಸಿಟ್ರಿಕ್…
ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ…
ಐ ಲವ್ ಯು’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ಅವರ ಹಾಟ್ ದೃಶ್ಯದ ಸಾಂಗ್ ಬಗ್ಗೆ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ನಿರ್ದೇಶಕ ಆರ್. ಚಂದ್ರು ವಿರುದ್ಧ ಕಿಡಿಕಾರಿರುವ ಹುಚ್ಚ ವೆಂಕಟ್, ಹೆಣ್ಣನ್ನು ಅಶ್ಲೀಲವಾಗಿ ತೋರಿಸಿ ಅದರಿಂದ ಬರುವ ದುಡ್ಡಿನಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ? ನಿಮ್ಮ ಮನೆಯಲ್ಲಿನ ಹೆಣ್ಣುಮಕ್ಕಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೀರಿ. ಬೇರೆಯವರ ಮನೆಯ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ತೋರಿಸುತ್ತೀರಿ ಎಂದು ಹರಿಹಾಯ್ದಿದ್ದಾರೆ. ಆರ್. ಚಂದ್ರು ನಿರ್ದೇಶಿಸಿರುವ ‘ಐ ಲವ್ ಯು’ ಚಿತ್ರದಲ್ಲಿ ಉಪೇಂದ್ರ, ರಚಿತಾ…
ಬಿಗ್ ಬಾಸ್ ಶಾಕಿಂಗ್ ಸುದ್ದಿ ಮನೆಯಿಂದ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕುರಿತಂತೆ ಬಿಗ್ ಬಾಸ್ ಸುದ್ದಿಯನ್ನು ನೀಡಿದೆ. ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ. ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ ಅವರ ವೋಟಿಂಗ್ ಸಹ ಬಂದ್ ಆಗಲಿದೆ. ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ…