ಆರೋಗ್ಯ, ಉಪಯುಕ್ತ ಮಾಹಿತಿ

ಈ ಕಾರಣಗಳಿಗಾಗಿ ಪ್ರತೀದಿನ ತಪ್ಪದೇ ಬಾಳೆಹಣ್ಣು ತಿನ್ನಲೇಬೇಕು…

730

ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ.

ಬೊಜ್ಜು ನಿಯಂತ್ರಿಸುತ್ತದೆ :-

ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , 5000 ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರುಢಪಟ್ಟಿದೆ. ಹೆಚ್ಚುಒತ್ತಡದಲ್ಲಿ ಕೆಲಸಮಾಡುವವರಿಗೆ, ಊಟಸೇರುವುದಿಲ್ಲ. ಅದಕ್ಕಾಗಿ ಅವರು ಜಂಕ್ ಫುಡ್ (ಕುರುಕಲು ತಿಂಡಿಗಳನ್ನು) ಎಂದು ಕರೆಯಲಾಗುವ, ಚಿಪ್ಸ್, ಚಾಕೊಲೆಟ್, ಮುಂತಾದ ಅಡ್ಡತಿಂಡಿಗಳನ್ನು ತಿನ್ನುತ್ತಾರೆ. ಇದರಿಂದ ಬೊಜ್ಜುಬೆಳೆಯಲು ಸಹಾಯವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಹಣ್ಣುಗಳ ಸೇವನೆಯಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಂಡು ಅಂತಹ ಅಡ್ಡತಿಂಡಿಗಳ ವಾಂಛೆಯಿಂದ ಮುಕ್ತರಾಗಬಹುದು.

ಅಲ್ಸರ್ :-
ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.

ಉಷ್ಣ ನಿಯಂತ್ರಕ :-
ದೇಹಕ್ಕೆ ತಂಪು, ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹ ಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ

ಧೂಮಪಾನ ಹಾಗೂ ತಂಬಾಕುಸೇವನೆ :-
ಬಿ-6, ಬಿ-12  ವಿಟಮಿನ್ ಗಳು ಹಾಗೂ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು, ನಿಕೊಟಿನ್ನ ಸೆಳೆತದಿಂದ ಹೊರಬರುವಾಗ, ದೇಹದ ಮೇಲಾಗುವ ಪರಿಣಾಮಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯಮಾಡುತ್ತವೆ.

ಒತ್ತಡವನ್ನು ನಿಯಂತ್ರಿಸುತ್ತದೆ:-
ಪೊಟಾಸಿಯಂ ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, 4 ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. “ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನ ಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಖಂಡಿತವೆಂದು ವೈದ್ಯರು ಹೇಳುತ್ತಾರೆ.

ರಕ್ತಹೀನತೆ :-
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.

ರಕ್ತದೊತ್ತಡ:-
ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. “ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ” ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.

ಬುದ್ಧಿಮತ್ತೆ :-
ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ.

ಮಲಬದ್ಧತೆ :-
ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.

ಈ‌ ಸಮಸ್ಯೆಗಳು ಇದ್ದವರು ತಪ್ಪಿಯೂ ಬಾಳೆಹಣ್ಣು ತಿನ್ನಬಾರದು

  • ಅಸಿಡಿಟಿ ಸಮಸ್ಯೆ ಇರುವವರು ಇದನ್ನು ತಿನ್ನಬಾರದು.
  • ಹೃದಯ ಸಂಬಂಧಿತ ಖಾಯಿಲೆ ಇದ್ದವರು ಇದನ್ನು ಸೇವಿಸಬಾರದು
  • ಮಧುಮೇಹ ರೋಗಿಗಳಿಗೂ ಇದರ ಸೇವನೆ ಒಳ್ಳೆಯದಲ್ಲ.
  • ಹೆಚ್ಚು ತಲೆನೋವು ಸಮಸ್ಯೆ ಎದುರಿಸುವವರು. ಅಜೀರ್ಣತೆ ಸಮಸ್ಯೆಯಿಂದ ಬಳಲುತ್ತಿರುವವರು..
  • ಕಿಡ್ನಿ ಅಲರ್ಜಿ ಸಮಸ್ಯೆ ಇದ್ದವರು ಬಾಳೆಹಣ್ಣು ತಿನ್ನಬಾರದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹುಚ್ಚ ವೆಂಕಟ್‍ಗೆ ಕಿಚ್ಚ ಸುದೀಪ್ ನೆರವು, ವೆಂಕಟ್ ಕಂಡರೆ ಈ ನಂಬರ್‌ಗೆ ಕಾಲ್ ಮಾಡಿ.

    ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಕೆಲವರು ವಿಡಿಯೋ ಮಾಡಿ ಲೇವಡಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೆಂಕಟ್ ಸ್ಥಿತಿಗೆ ಮರುಗುತ್ತಿದ್ದಾರೆ. ಸದ್ಯ ಊಟ ಇಲ್ಲದೆ ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್‍ಗೆ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಮನವಿ ಮಾಡಿದ್ದಾರೆ. ಆತ್ಮೀಯರೆ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ…

  • ದೇವರು-ಧರ್ಮ

    ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ!ಈ ಆಚರಣೆ ಮಾಡಿದ್ರೆ ಏನಾಗುತ್ತೆ ಗೊತ್ತಾ..?

    ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

  • ತಂತ್ರಜ್ಞಾನ

    ಹೃದಯಾಘಾತ ಆಗಲಿದೆ ಎಂದು 6 ಗಂಟೆ ಮೊದಲೇ ತಿಳಿದುಕೊಳ್ಳಬಹುದು..!ತಿಳಿಯಲು ಈ ಲೇಖನ ಓದಿ..

    ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ.

  • ಸುದ್ದಿ

    ಟ್ಯಾಟೂ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್…! ತಪ್ಪದೆ ಇದನ್ನು ಓದಿ..,

    ಟ್ಯಾಟೂ ಇತ್ತೀಚಿನ ದಿನಗಳಲ್ಲಿ ಹಾಕಿಸಿಕೊಳ್ಳುವುದು ಸಾಮಾನ್ಯಾವಾಗಿದೆ. ಅದರಲ್ಲೂ ಕೆಲ ವರ್ಷಗಳ ಹಿಂದೆ ಫ್ಯಾಷನ್ ಲೋಕದಲ್ಲಿ ಟ್ಯಾಟೂ ಹೊಸ ಟ್ರೆಂಡ್ ನ್ನೆ ಹುಟ್ಟುಹಾಕಿತ್ತು. ಟ್ಯಾಟೂವಿನ ಚಿತ್ರಗಳಿಗೆ ಜನ ಮಾರುಹೋಗಿದ್ದರು. ಇನ್ನೂ ಯುವ ಪೀಳೀಗೆಯಂತೂ ಟ್ಯಾಟೂಗಳ ವಿನ್ಯಾಸಕ್ಕೆ ಫುಲ್ ಫಿದಾ ಆಗಿದ್ದರು. ಅಲ್ಲದೆ ಯಾರ ಕೈ ನೋಡಿದರೂ ಕೂಡ ಟ್ಯಾಟೂ ಇರುತ್ತಿತ್ತು. ಇಂತಹ ಟ್ಯಾಟೂ ಪ್ರಿಯರಿಗೆ ಇದೀಗ ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂತೀರಾ ? ಮೊದಲು ಸೆಲೆಬ್ರೆಟಿಗಳಿಂದ ಶುರುವಾದ ಟ್ಯಾಟೂ ಕ್ರೇಜ್ ಬಳಿಕ ಜನ ಸಾಮಾನ್ಯರಿಗೂ…

  • ಸುದ್ದಿ

    ವಾಹನ ಚಾಲಕರಿಗೆ ಹೊಸ ರೂಲ್ಸ್…..ಏನೆಂದು ತಿಳಿಯಿರಿ?

    ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತೀರಾ..? ಹಾಗಿದ್ರೆ ಹುಷಾರ್ 10 ಸಾವಿರ ಫೈನ್ ಕಟ್ಟಲೇಬೇಕು. ಇದು ಕೇಂದ್ರ ಸರ್ಕಾರದ ಹೊಸ ನಿಯಮ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ಮೋಟಾರು ವಾಹನ ಕಾಯ್ದೆ ಮಸೂದೆ ಮಂಡಿಸಿದೆ. ಹೊಸ ಮಸೂದೆ ಪ್ರಕಾರ ಮದ್ಯಪಾನ ಮಾಡಿದ್ರೆ 10 ಸಾವಿರ ದಂಡ, ಅದೇ ರೀತಿ ರ್ಯಾಶ್ ಡ್ರೈವ್ ಮಾಡಿದ್ರೆ 5…

  • ಸುದ್ದಿ

    ಚುನಾವಣೆ ಹೊಸ್ತಿಲಲ್ಲೇ ಯಡಿಯೂರಪ್ಪಗೆ ಪೆನ್‍ ಡ್ರೈವ್‍ ಶಾಕ್!ಅಸಲಿಗೆ ಪೆನ್‍ ಡ್ರೈವ್‍ ನಲ್ಲಿ ಏನಿದೆ ಗೊತ್ತಾ?

    ಲೋಕಸಭೆ ಚುನಾವಣೆ ಹತ್ತಿರುವಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸಂಕಷ್ಟ ಎದುರಾಗಿದೆ. ಬಿ.ಎಸ್‍.ವೈ.ಗೆ ಸಂಬಂಧಿಸಿದ ಡೈರಿ ಮತ್ತು ಪೆನ್‍ ಡ್ರೈವ್‍ ನ್ನು ತನಿಖಾಧಿಕಾರಿಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡಲು ಈಶ್ವರಪ್ಪ ಆಪ್ತ ವಿನಯ್ ಒಪ್ಪಿಕೊಂಡಿದ್ದಾರಂತೆ. ಆದ್ರೆ ವಿನಯ್ ಗೆ ಭದ್ರತೆ ಕೊಟ್ರೆ ಮಾತ್ರ ಪೆನ್‍ ಡ್ರೈವ್ ಕೊಡುವುದಾಗಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸರಿಗೆ ಪತ್ರ ಬರೆದಿರುವ ವಿನಯ್‍, ಯಡಿಯೂರಪ್ಪಗೆ ಸಂಬಂಧಿಸಿದಂತೆ ತಮ್ಮ ಬಳಿ ಪ್ರಮುಖ ಸಾಕ್ಷ್ಯಾಧಾರಗಳಿವೆ. ಅದನ್ನು ನಾನು ನ್ಯಾಯಾಲಯದ ಮುಂದೆ ಇಡಲು ಸಿದ್ದನಿದ್ದೇನೆ. ಆದ್ರೆ ಸತ್ಯ…