ಸುದ್ದಿ

ಸಿಎಂ ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನವನ್ನು ಮುಂದೂಡಿಕೆ….!ಯಾಕೆ?

25

ನಿನ್ನೆ ಜೂನ್ 21 ರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಕಲಬುರ್ಗಿ ತಾಲೂಕಿನ ಹೇರೂರು ( ಬಿ) ಗ್ರಾಮದಲ್ಲಿ ಇಂದು ಜೂನ್ 22 ರಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿ ವೆಂಕಟೇಶ ಅವರೊಂದಿಗೆ ನಿನ್ನೆ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಅಂತಿಮವಾಗಿ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು, ಇದು ಒಂದೆಡೆ ತೀವ್ರ ನಿರಾಶೆ ಉಂಟು ಮಾಡಿದೆ.

ಆದರೆ ಇದೇ ಸಂದರ್ಭದಲ್ಲಿ ಮಳೆಯಾಗಿರುವದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂಬ ಸಮಾಧಾನವಿದೆ ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಗುರುಮಠಕಲ್ ತಾಲೂಕಿನ ಚಂಡ್ರಿಕಿಯಲ್ಲಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬರುವ ಜುಲೈ ತಿಂಗಳಲ್ಲಿ ವಿಧಾನಮಂಡಲದ ಅಧಿವೇಶನದ ದಿನಾಂಕಗಳನ್ನು ನೋಡಿಕೊಂಡು ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನ ಕಾರ್ಯಕ್ರಮದ ದಿನಾಂಕ ಪ್ರಕಟಿಸಲಾಗುವುದು.

ಯಾದಗಿರಿ ಜಿಲ್ಲೆಯ ಚಂಡ್ರಕಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ ಎಂದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿನ್ನೆ ಯಾದಗರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಚಂಡ್ರಕಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.ಮುಖ್ಯಮಂತ್ರಿಗಳು ರಾತ್ರಿ ಮಲುಗುವುದಕ್ಕೂ ಮುನ್ನ ಸಚಿವರು ಹಾಗೂ ಶಾಸಕರೊಂದಿಗೆ ಕುಶಲೊಪರಿ ಮಾತುಕತೆಯಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ರಾಜಶೇಖರ ಪಾಟೀಲ,ಬಂಡೆಪ್ಪ ಖಾಶಂಪೂರ, ವೆಂಕಟರಾವ ನಾಡಗೌಡ, ಸಾ.ರಾ. ಮಹೇಶ, ಶಾಸಕ ನಾಗನಗೌಡ ಕಂದಕೂರ ಜೊತೆಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಟ ಕಮಲ್ ಹಾಸನ್ ಅವರ ಮೇಲೆ ಚಪ್ಪಲಿ ತೂರಾಟ….ಧೂರು ದಾಕಲು….!

    ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ. ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19…

  • ರೆಸಿಪಿ

    ಈ ಸುಡುವ ಬೇಸಿಗೆಯಲ್ಲಿ ಉಷ್ಣತೆ ಕಡಿಮೆಮಾಡಲು, ಈ ಪಾನೀಯಗಳನ್ನು ಸೇವಿಸಿ.

    ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ…

  • ಸುದ್ದಿ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…

  • ದೇಶ-ವಿದೇಶ

    ಮೋದಿ ಸರಕಾರದ ಮೂರು ವರುಷದ ಸಂಭ್ರಮಾಚರಣೆಗೆ, ರಾಷ್ಟ್ರಕ್ಕೆ ಸಮರ್ಪಿತವಾದ ದೇಶದ ಅತಿ ದೊಡ್ಡದಾದ ಸೇತುವೆ

    ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.

  • ಸುದ್ದಿ

    ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯನ್ನು ನೀಡಲಿರುವ ಸಿಎಂ ಯಡಿಯೂರಪ್ಪ,..!

    ಬೆಂಗಳೂರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಗಳಿಗೆಯೇ ರೈತರು, ಮೀನುಗಾರರು ಮತ್ತು ನೇಕಾರರಿಗೆ ಸಿಹಿಸುದ್ದಿ ನೀಡಿದ್ದ ಸಿಎಂ ಯಡಿಯೂರಪ್ಪ ವಿದ್ಯಾರ್ಥಿಗಳಿಗೂ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ವಾರ್ಷಿಕ ವೆಚ್ಚವನ್ನು ಹೆಚ್ಚಳ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಪ್ರಸ್ತುತ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 2438 ಹಾಸ್ಟೆಲ್‍ಗಳಿದ್ದು, 1,88,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ 1600 ರೂ. ನೀಡಲಾಗುತ್ತಿದೆ. ಇದೀಗ…

  • inspirational

    ಮಂಗಳ ಗ್ರಹ

    ಮಂಗಳ ಮಂಗಳ ಗ್ರಹವು ಸೊರ್ಯನಿಂದ ನಾಲ್ಕನೇ ಗ್ರಹವಾಗಿದ್ದು , ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ ಮರಕ್ಯೊರಿಯ ನಂತರ. ಇಂಗ್ಲೀಷ್ ನಲ್ಲಿ ಇದನ್ನು ಮಾರ್ಸ್ ಎಂದು ಕರೆಯಲಾಗುತ್ತದೆ. ಮಾರ್ಸ ಇದು ರೋಮನ್ನರ್ ದೇವರ ಯುಧದ್ದ ದೇವತೆ ಮಾಡಿದೆ.ಇದನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ.[ಭೂಮಿ]]ಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ.ಆಂಗ್ಲ ಭಾಷೆಯಲ್ಲಿ ‘ಮಾರ್ಸ್'(Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು…