ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ. ಬದಲಾದ ಜೀವನ ಶೈಲಿ ಕಾರಣ ಯುಕ್ತ ವಯಸ್ಸಿನಲ್ಲೇ ಬಹಳಷ್ಟು ಮಂದಿ ಹೃದಯಾಘಾತದಿಂದ ಮರಣಿಸುತ್ತಿದ್ದಾರೆ.
ಹೃದಯಾಘಾತ ಬಂದವರಿಗೆ ಎಷ್ಟು ಬೇಗ ಚಿಕಿತ್ಸೆ ನೀಡಿದರೆ ಅಷ್ಟು ಬೇಗ ಬದುಕುವ ಸಾಧ್ಯತೆಗಳು ಇರುತ್ತವೆ.. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿದರೂ ಆ ಮನುಷ್ಯನ ಪ್ರಾಣಕ್ಕೆ ಅಪಾಯ. ಆದರೆ ಆ ಹೃದಯಾಘಾತ ಯಾವ ಸಮಯದಲ್ಲಿ.. ಎಂತಹ ಪರಿಸ್ಥಿತಿಯಲ್ಲಿ ಬರುತ್ತದೋ ಯಾರೂ ಊಹಿಸಲು ಸಾಧ್ಯವಿಲ್ಲ.. ಆದರೆ ಈ ಮಹಾಮಾರಿಯನ್ನು ತಾನು ಕಂಡುಹಿಡಿದ ಸಲಕರಣೆ ಮೂಲಕ ಆರು ಗಂಟೆ ಮೊದಲೇ ಗ್ರಹಿಸಬಹದು ಎನ್ನುತ್ತಿದ್ದಾರೆ 16 ವರ್ಷದ ಬಾಲಕ ಆಕಾಶ್ ಮನೋಜ್.
ತಮಿಳುನಾಡಿನ ಆಕಾಶ್ ಹತ್ತನೇ ತರಗತಿ ಓದುತ್ತಿದ್ದಾನೆ. ಹೃದಯಾಘಾತ ಬರುವ ಸೂಚನೆಯನ್ನು ತಾನು ಕಂಡುಹಿಡಿದ ಹೊಸ ಟೆಕ್ನಿಕ್ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಿದ್ದಾನೆ. ಈ ಸಲಕರಣೆಯನ್ನು ಕಂಡುಹಿಡಿದ ಆಕಾಶ್ ’ಇನ್ನೋವೇಷನ್ ಸ್ಕಾಲರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂ’ ನಡಿ ರಾಷ್ಟ್ರಪತಿ ಕೈಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.
ಈ ಸಂದರ್ಭದಲ್ಲಿ ಆಕಾಶ್ ಮಾತನಾಡುತ್ತಾ.. “ನಿಶ್ವಬ್ದವಾಗಿ ಬರುವ ಹೃದಯಾಘಾತ ಈ ನಡುವೆ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿ ಮೇಲ್ಮೋಟಕ್ಕೆ ಆರೋಗ್ಯವಾಗಿ ಕಾಣಿಸುತ್ತಾರೆ. ಹೃದಯಾಘಾತಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಲಕ್ಷಣಗಳೂ ಅವರಲ್ಲಿ ಕಾಣಿಸಲ್ಲ. ನಮ್ಮ ತಾತ ಆರೋಗ್ಯವಾಗಿ ಕಾಣಿಸುತ್ತಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು. ತಾತನ ಸಾವು ನನ್ನಲ್ಲಿ ತುಂಬಾ ನೋವುಂಟು ಮಾಡಿತು. ಹೃದಯಾಘಾತವನ್ನು ಮೊದಲೇ ಕಂಡುಹಿಡಿಯುವ ಸಲಕರಣೆ ಯಾವುದಾದರೂ ತಯಾರಿಸಬೇಕು ಎಂದುಕೊಂಡೆ. ಹಾಗಾಗಿ ಈ ಸಲಕರಣೆ ಕಂಡುಹಿಡಿದೆ. ಆದರೆ ಇದನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಾಗಿದೆ. ದೇಹದ ಮೇಲೆ ಯಾವುದೇ ಗಾಯ ಮಾಡದಂತೆ ಇದನ್ನು ಉಪಯೋಗಿಸಬಹುದು” ಎಂದು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ಸಂದರ್ಭದಲ್ಲಿ ತಿಳಿಸಿದ್ದಾರೆ.
ಆಗಲಿದೆ ಎಂದು
’ರಕ್ತದಲ್ಲಿರುವ ಎಫ್‍ಎಬಿಪಿ3 ಎಂಬ ಸಣ್ಣ ಪ್ರೋಟೀನ್ ಬಳಸಿಕೊಂಡು ಹೃದಯಾಘಾತದ ಅಪಾಯವನ್ನು ತಿಳಿದುಕೊಳ್ಳಬಹುದು’ ಎಂದು ಆಕಾಶ್ ತಿಳಿಸಿದ್ದಾನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಈ ಸಲಕರಣೆ ಅದೆಷ್ಟೋ ಉಪಯುಕ್ತವಾಗಿರುತ್ತದೆ. ಹೃದಯಾಘಾತದ ಅಪಾಯವನ್ನು ಮೊದಲೇ ಗ್ರಹಿಸಿ ವೈದ್ಯರನ್ನು ಸಂಪರ್ಕಿಸುವ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬಹುದೆಂದು ತಿಳಿಸಿದ್ದಾನೆ ಆ ಬಾಲಕ. ಈ ಸಲಕರಣೆಯನ್ನು ತಜ್ಞರ ಸಹಾಯದಿಂದ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತೆ ಮಾಡಿದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದು..!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ.
ಗಗನಮುಖಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಬಹುತೇಕ ವಾಹನ ಖರೀದಿದಾರರು ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿದ್ದು, ಹೀಗಿರುವಾಗ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ನಿಂದ ಪೆಟ್ರೋಲ್ ಸಿದ್ದಪಡಿಸಿರುವ ಎಂಜಿನಿಯರ್ ಒಬ್ಬರು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೌದು, ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ದಿನಗಳಲ್ಲಿ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಉತ್ಪಾದನೆ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ಸಿದ್ದಪಡಿಸಿದ್ದು, ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಅನ್ನೇ ಬಳಕೆ ಮಾಡಿಕೊಂಡು ಈ ಹೊಸ ಆವಿಷ್ಕಾರವನ್ನು ಮಾಡಲಾಗಿದೆ….
ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ
ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ
ನಿಮ್ಮ ಮಗಳು ಅಥವಾ ಮಗ ಚಿಕ್ಕಪ್ಪ ಸೇರಿದಂತೆ ಯಾವುದೇ ಪರಿಸ್ಥಿತಿಯಲ್ಲಿ ಯಾರ ಮಡಿಲಲ್ಲೂ ಕುಳಿತುಕೊಳ್ಳಬೇಡಿ ಎಂದು ಎಚ್ಚರಿಸಿ
ಬೆಂಗಳೂರು: 7ನೇ ವೇತನಆಯೋಗ ವರದಿ ಜಾರಿಗೆ ಮಾಡುವಂತೆ ಪಟ್ಟು ಹಿಡಿದು ಮುಷ್ಕರ ನಡೆಸುತ್ತಿರುವ ರಾಜ್ಯ ನೌಕರರ ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದು, 2023ರ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಇತ್ತ ಮುಷ್ಕರ ಕೈಬಿಟ್ಟಿದ್ದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಘೋಷಿಸಿದೆ. ಇದರೊಂದಿಗೆ ಸರ್ಕಾರ ಹಾಗೂ ನೌಕರರ ನಡುವಿನ ಹಗ್ಗಜಗ್ಗಾಟ ಸದ್ಯಕ್ಕೆ ಅಂತ್ಯವಾದಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಚರ್ಚಿಸಿದ…
ಕಡಲೆ ಬೀಜ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಕಡಲೆಬೀಜವನ್ನು ಬಡವರ ಬಾದಾಮಿ ಎನ್ನುತ್ತಾರೆ. ಈ ಕಡಲೆಬೀಜ ಬಾದಾಮಿಯಲ್ಲಿರುವಷ್ಟೇ ಪೌಷ್ಠಿಕತೆಯನ್ನ ಒಳಗೊಂಡಿದೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತದೆ. ಇದು ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ ಉತ್ತಮ ಸೌಂದರ್ಯಕ್ಕೂ ಸಹಾಯಕ. ಕಡಲೆಬೀಜದಲ್ಲಿನ ಇನ್ನಷ್ಟು ಆರೋಗ್ಯಕರ ಅಂಶಗಳು ಇಲ್ಲಿವೆ ನೋಡಿ.. ಕಡಲೆಬೀಜ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಕಡಲೆ ಬೀಜ ಸೇವಿಸುವುದರಿಂದ ಗ್ಯಾಸ್ ಹಾಗೂ ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ….