ಸುದ್ದಿ

ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ…ಕಾರಣ?

75

ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ.

ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ.

ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತ್ತಿದೆ. ಈ ಹಿಂದೆ ಕೂಡಾ ರಸ್ತೆಯ ಮೇಲೆಯೇ ಕಸಾಯಿ ಖಾನೆಯ ನೀರು ಹರಿಯುತ್ತಿತ್ತು. ಆದರೆ ಈಗ ಅದೇ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲಿಜು ನೀರು ಜನರ ಮನೆಗೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಒಂದೆಡೆ ಬರಗಾಲದಿಂದ ಕುಡಿಯಲು ನೀರಿಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಲ್ಲಿಯ ಜನರಿಗೆ ಕುಡಿಯುವ ನೀರು ಹೋಗಲಿ ಬಳಸಲು ಕೂಡ ನೀರಿಲ್ಲದಂತೆ ಆಗಿದೆ. ಇದಕ್ಕೆಲ್ಲ ಪಾಲಿಕೆ ಹಾಗೂ ಜಲ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ವಿಷದ ಹಾವು ಕಚ್ಚಿದ ಕೂಡಲೇ ಅವರ ಪ್ರಾಣವನ್ನು ಉಳಿಸಲು ತಕ್ಷಣ ಹೀಗೆ ಮಾಡಿ…!

    ಪ್ರಪಂಚ ಎಲ್ಲೆಡೆ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಜನ ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಭಾರತ ಈ ಸಂಖ್ಯೆ 2 ಲಕ್ಷ ಸಮೀಪ ಇದೆ… ನಮ್ಮ ದೇಶದಲ್ಲಿ ಸದ್ಯಕ್ಕೆ 250 ಜಾತಿಯ ಹಾವುಗಳು ಇದ್ದು ಅವುಗಳಲ್ಲಿ 52 ಜಾತಿಯ ವಿಷ ಸರ್ಪಗಳು ಇವೆ.. ನಮ್ಮ ರಾಜ್ಯದಲ್ಲಿ ಮಾತ್ರ 5 ಜಾತಿಯ ಹಾವುಗಳು ಅತ್ಯಂತ ವಿಷವನ್ನು ಹೊಂದಿವೆ. ಅವು ಕಚ್ಚಿದರೆ ಹೆಚ್ಚು ಅಂದ್ರೆ 3 ಗಂಟೆ ಒಳಗೆ ಮನುಷ್ಯ ಮರಣ ಹೊಂದುತ್ತಾನೆ… ಏನಾದರು ಪ್ರಥಮ ಚಿಕಿತ್ಸೆ ಮಾಡಿದರೆ ಆ…

  • ಸುದ್ದಿ

    ಇನ್ಮುಂದೆ ಪ್ಲಾಸ್ಟಿಕ್‌ ಬಳಕೆ ಮಾಡುವವರು ಈ ದಂಡದಿಂದ ಪಾರಾಗಲು ಸಾಧ್ಯವಿಲ್ಲ,.!!

    ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸಿನಂತೆ  ಅವರ 150ನೇ ಜಯಂತಿ ಅಂಗವಾಗಿ ಅವರ ತತ್ವ ಸಿದ್ದಾಂತಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು  ಅವರ ಕನಸಿನಂತೆ ನೈರ್ಮಲ್ಯ, ಹಸಿರು, ಆರೋಗ್ಯ, ಕಸಮುಕ್ತ ಭಾರತ ಸೃಷ್ಠಿಸುವ ಉದ್ದೇಶದಿಂದ ಜನ ಜಾಗೃತಿಮೂಡಿಸುವ ಅಂಗೀಕಾರ ಆಂದೋಲನಕ್ಕೆ ಮಾಜಿ ಸಚಿವ, ಶಾಸಕ ವೆಂಕಟರಾವ ನಾಡಗೌಡ ಪ್ರಮಾಣ ವಚನ ಬೋಧಿಸುವ ಮೂಲಕ ಚಾಲನೆ ನೀಡಿದರು. ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇದಿಸಲಾಗಿದೆ ಯಾವುದೇ ಅಂಗಡಿ, ಬಾರ್‌ ರೆಸ್ಟೋರೆಂಟ್‌, ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ಮಾಡುವಂತಿಲ್ಲ  ಮಾರಾಟ…

  • ಸುದ್ದಿ

    ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

    ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ…

  • ಹಣ ಕಾಸು

    ನಿಮ್ಗೆ ಗೊತ್ತಾ, ಎಟಿಎಂ ಮೂಲಕ ಈ 15 ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು!

    ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ

  • ವಿಚಿತ್ರ ಆದರೂ ಸತ್ಯ

    ತಾಜ್ ಮಹಲ್ ನಿರ್ಮಾಣದ ಒಳಗಿರುವ ಸಮಾಧಿಗಳ ರಹಸ್ಯ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್‌ ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ.

  • ಆರೋಗ್ಯ

    ಕಡಿಮೆ ವೆಚ್ಚದಲ್ಲಿ ಮೂತ್ರ ಪಿಂಡ ಶುದ್ದೀಕರಿಸುವ ಮನೆಮದ್ದು. ಈ ಮಾಹಿತಿ ನೋಡಿ.

    ಮನುಷ್ಯನ ದೇಹದಲ್ಲಿ ಪ್ರತಿ ಅಂಗಾಂಗಗಳು ಕೂಡ ಹೆಚ್ಚಿನ ಮಹತ್ವವನ್ನು ವಹಿಸುತ್ತವೆ. ಹಾಗಾಗಿ ಕೆಲವರಿಗೆ ಈ ಮೂತ್ರ ಪಿಂಡದ ಸಮಸ್ಯೆ ಇರುತ್ತದೆ ಇದಕ್ಕೆ ಮನೆಯಲ್ಲಿಯೇ ಮನೆಮದ್ದನ್ನು ತಯಾರಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನಮ್ಮ ದೇಹಕ್ಕೆ ಮೂತ್ರಪಿಂಡಗಳು ತುಂಬಾನೇ ಮುಖ್ಯವಾದ ಭಾಗವಾಗಿದೆ ನಮ್ಮ ದೇಹದಲ್ಲಿ ಸಂಗ್ರಹಿತವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ನಮ್ಮ ಆರೋಗ್ಯರಕ್ಷಣೆ ಮಾಡುತ್ತಿರುತ್ತದೆ. ಅಂತಹ ಅತಿ ಮುಖ್ಯ ಅಂಗ ಮೂತ್ರಪಿಂಡವನ್ನು ಅತೀ ಕಡಿಮೆ ವೆಚ್ಚದಲ್ಲಿ ನಿಮ್ಮ ಮನೆಗಳಲ್ಲೇ ಶುದ್ಧೀಕರಿಸುವ ಸರಳ ವಿಧಾನ ಹೀಗಿದೆ. ಒಂದು…