ಉಪಯುಕ್ತ ಮಾಹಿತಿ

ಬಿಳಿ ಕೂದಲನ್ನು ಕಪ್ಪಾಗಿಸುವ ಅತೀ ಸುಲಭ ವಿಧಾನ..ಹೀಗೆ ಮಾಡಿ

1258

ಬಿಳಿ ಕೂದಲನ್ನು ಮರೆಮಾಚಲು ಹೇರ್ ಕಲರ್ ಗಳನ್ನು ಬಳಸುತ್ತಾರೆ. ಇಂತಹ ಕಲರ್ ಗಳು ಅನೇಕರಿಗೆ ಚರ್ಮದ ಖಾಯಿಲೆ ಅಥವಾ ಇನ್ಯಾವುದೋ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಅವುಗಳ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಿಳಿ ಕೂದಲನ್ನು ಕಪ್ಪಾಗಿಸುವ ವಿಧಾನಗಳು ಇಲ್ಲಿವೆ.

ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.

ತೆಂಗಿನೆಣ್ಣೆಯೊಡನೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಿ. ಹೀಗೆ ಮಾಡಿದ ಒಂದು ಗಂಟೆಯ ನಂತರ ತಲೆಸ್ನಾನ ಮಾಡಿ. ತೆಂಗಿನೆಣ್ಣೆ ಬಿಳಿ ಕೂದಲು ಬೆಳೆಯುವುದನ್ನು ತಡೆಗಟ್ಟುತ್ತದೆ.

ಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು.

ಬಾದಾಮಿ ಎಣ್ಣೆ, ನಿಂಬೆರಸ ಮತ್ತು ನೆಲ್ಲಿಕಾಯಿಯ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಒಂದು ಮುಷ್ಟಿ ಮದರಂಗಿ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ 3 ಚಮಚ ನೆಲ್ಲಿ ಪುಡಿ, 1 ಚಮಚ ಕಾಫಿ ಪೌಡರ್, 1 ಚಮಚ ಮೊಸರನ್ನು ಹಾಕಿ. ನಂತರ ಅದನ್ನು ಕೂದಲಿಗೆ ಹಚ್ಚಿ ಅದು ಒಣಗಿದ ಮೇಲೆ ತಲೆಸ್ನಾನ ಮಾಡಿ.

ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಹಾಕಿ ಕುದಿಸಿ, ಅದು ಆರಿದ ಮೇಲೆ ಅದನ್ನು ತಲೆಗೆ ಹಚ್ಚಿ.

3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.

ಆಲಿವ್ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ