ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.
ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.
ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ ಅಮಾವಾಸ್ಯೆ ಕಳೆದ ಒಂದು ತಿಂಗಳ ನಂತರ ಬರುತ್ತದೆ. ಈ ಬಗ್ಗೆ ಹಲವರಲ್ಲಿ ಗೊಂದಲವಿದೆ.

ನಾವು ಹಬ್ಬ ಆಚರಣೆ ಮಾಡುವುದು ಹಾಗೂ ರಾಶಿ ನಕ್ಷತ್ರಗಳನ್ನು ನೋಡುವುದು ಕೇವಲ ಪರಂಪರೆ ಎಂದು ತಿಳಿದು ಆಚರಣೆ ಮಾಡುವುದಕ್ಕಿಂತ ವೈಜ್ಞಾನಿಕವಾಗಿಯು ತಿಳಿದುಕೊಳ್ಳಬೇಕಾಗುತ್ತದೆ. ನಕ್ಷತ್ರ ರಾಶಿ ಹಾಗೂ ಪಂಚಾಂಗಗಳು ಏನು ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡು ನಮ್ಮ ಗೊಂದಲವನ್ನು ನಾವೇ ನಿವಾರಣೆ ಮಾಡಿಕೊಳ್ಳಬಹುದು. ಸಂವತ್ಸರಗಳನ್ನು ಸೂರ್ಯ, ಚಂದ್ರರ ಚಲನ ವಲನದಿಂದ ಲೆಕ್ಕ ಹಾಕಿ ಸೌರಮಾನ ಹಾಗೂ ಚಂದ್ರಮಾನ ಎನ್ನುವ ಮಾನದಂಡದಿಂದ ನಿರ್ಣಯಿಸಲಾಗುತ್ತದೆ.

ಸೂರ್ಯನಿಗೆ ಮೇಷ, ವೃಷಭ ಎಂಬ ರಾಶಿ ಚಕ್ರವನ್ನು ಒಂದು ಸುತ್ತು ಸುತ್ತಲು 30 ತಿಂಗಳು 14 ದಿವಸ ಬೇಕು. ಅದೇ ಸೂರ್ಯನಿಗೆ ಒಂದು ವರ್ಷ ಅಂದರೆ ಚೈತ್ರ, ವೈಶಾಖ ದಿಂದ ಮೀನ ಮಾಸ ಎಂಬ ಋತು ಚಕ್ರವನ್ನು ಸುತ್ತಲು 365.25 ಘಳಿಗೆ ಬೇಕಾಗುತ್ತದೆ. ಇದಕ್ಕೆ ಸೌರಮಾನ ಎಂದು ಕರೆಯುತ್ತಾರೆ. ಅದೇ ಚಂದ್ರನಿಗೆ 354 ದಿನಗಳು ಬೇಕಾಗುತ್ತದೆ. ಇದಕ್ಕೆ ಚಂದ್ರಮಾನ ಎಂದು ಕರೆಯುತ್ತಾರೆ.
ಸೂರ್ಯನಿಗೂ, ಚಂದ್ರನಿಗೂ ಒಂದು ವರ್ಷ ಮುಗಿಸಬೇಕಾದರೆ ಪ್ರತಿ ವರ್ಷವು 11 ದಿನ ವ್ಯತ್ಯಾಸಗಳು ಬಂದು ಆ ದಿನಗಳು ಪ್ರತಿ ವರ್ಷವು ಬಾಕಿಯಾಗಿ 3 ವರ್ಷಕ್ಕೊಮ್ಮೆ ಆ 11 ದಿನಗಳನ್ನು ಸೇರಿಸಿ ಒಂದು ಆಧಿಕ ಮಾಸ ಎಂದು ಮಾಡುತ್ತಾರೆ. ಹೀಗೆ ಬೇರೆ ಬೇರೆ ಧರ್ಮದವರು ಹಾಗೂ ಬೇರೆ ಬೇರೆ ದಿನ ಮಾಸಗಳನ್ನು ನಿರ್ಣಯಿಸುವವರು ಇಂಗ್ಲಿಷ್ ಕ್ಯಾಲೆಂಡರ್‍ಗಳನ್ನು 30-31 ಹಾಗೂ ಫೆಬ್ರವರಿ 28-29 ದಿನಾಂಕಗಳನ್ನು ಹೆಚ್ಚುವರಿ ಹಾಕಿ ಸಮದೂಗಿಸುತ್ತಾರೆ. ಹಾಗೆಯೇ ಬೇರೆ ಬೇರೆ ಧರ್ಮದ ಕ್ಯಾಲೆಂಡರ್‍ಗಳಲ್ಲಿ ಕೂಡ ಹೀಗೆ ಸರಿದೂಗಿಸಲಾಗುತ್ತದೆ.
ಅದೇ ಪ್ರಕಾರ ಪ್ರತಿ ಮೂರು ವರ್ಷಕೊಮ್ಮೆ ಬೇರೆ ಬೇರೆ ತಿಂಗಳುಗಳು ಅಧಿಕ ಮಾಸ ಎಂದು ಬರುತ್ತದೆ. ಆದ್ದರಿಂದ ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
ಪ್ರತಿವರ್ಷ ಮಹಾಲಯ ಅಮಾವಾಸ್ಯೆ ಆಚರಣೆ ಮಾಡುವವರು ಸೆ.17 ರಂದು ಆಚರಿಸಬಹುದು. ನವರಾತ್ರಿ ಹಾಗೂ ದಸರಾ ಆಚರಣೆ ಮಾಡುವವರು ಮುಂದಿನ ಅಮವಾಸ್ಯೆ ಕಳೆದ ಮೇಲೆ ಆಚರಣೆ ಮಾಡಬೇಕು. ಈ ಮಧ್ಯದ ಅಧಿಕ ಮಾಸದಲ್ಲಿ ಶುಭಕಾರ್ಯಗಳನ್ನು ಅಂದರೆ ಮದುವೆ, ಗೃಹ ಪ್ರವೇಶ, ಮಂಗಳ ಕಾರ್ಯಗಳನ್ನು ಆಚರಿಸುವಂತಿಲ್ಲ.

ದೇವತಾ ಆರಾಧನೆ, ವ್ರತÀ, ದಾನ, ಧರ್ಮ ಮತ್ತು ಪೂರ್ವ ನಿಯೋಜಿತ ಅಂದರೆ ಸೀಮಂತಾದಿಗಳನ್ನು ನಡೆಸಬಹುದು. ಹೀಗೆ ಎಲ್ಲವು ಕೂಡ ಹಿಂದಿನ ಋಷಿ ಮುನಿಗಳು ತಮ್ಮ ಸ್ವಯಂ ಆಚರಣೆಯಿಂದ ಸಂತುಷ್ಟಿ ಜೀವನವನ್ನು ಕಂಡಿರುವುದರಿಂದ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿ ಇಂತಹ ಧರ್ಮ ವಿಚಾರವನ್ನು ಗ್ರಂಥವಾಗಿ ಬರೆದಿಟ್ಟಿದ್ದಾರೆ.
ಆದ್ದರಿಂದ ಜೋತಿಷ್ಯ ಶಾಸ್ತ್ರವು ಅಂದರೆ ಈಗಿನ (ಆಷ್ಟ್ರಾಲಜಿ) ಸುಳ್ಳಲ್ಲ. ಅದೇ ಜ್ಯೋತಿಷ್ಯ ಹೇಳುವವನು (ಅಸ್ಟ್ರಾಲಜಿಕ್) ಗೊತ್ತಿಲ್ಲದೆ ಸುಳ್ಳು ಹೇಳಬಹುದು. ಆದರೆ ಜ್ಯೋತಿಷ್ಯವೇ ಸುಳ್ಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಬರುವ ಮಹಾಲಯ ಅಮಾವಾಸ್ಯೆ ಕಳೆದ ಒಂದು ತಿಂಗಳ ನಂತರ ಎಂದು ಅವರವರ ವರ್ಗದ ಹಾಗೂ ಕುಟುಂಬದ ನಿಯಮಾನುಸಾರ ಹಿರಿಯರಿಗೆ (ಮರಣ ಹೊಂದಿದ ಪಿತೃಗಳಿಗೆ) ತೃಪ್ತಿಯಾಗಲೆಂದು ಪಿಂಡ ಪ್ರಧಾನ ತಿಲತರ್ಪಣ ಗೋಗ್ರಾಸ ಅಂದರೆ ಗೋವಿನ ಅನ್ನನೀಡುವುದು, ಗೋವು ಪೂಜೆಯನ್ನು ಮಾಡುವುದು, ಕಾಗೆಗಳಿಗೆ ಭಕ್ಷ ಸಿದ್ಧ ಪಡಿಸಿ ಬಡಿಸುವುದು ಹಾಗೂ ಪಿತೃಗಳ ಸಂತುಷ್ಟಿಗೆಂದು ದಾನ ಧರ್ಮಾಧಿಗಳನ್ನು ಮಾಡಿ ಪುಣ್ಯ ಸಂಪಾದನೆಗೆ ಮಾರ್ಗವಿದೆ.
ಅದರಿಂದ ಸಂತೃಪ್ತಿ ಮತ್ತು ಮನ:ಶಾಂತಿಯನ್ನು ಕಂಡುಕೊಳ್ಳಬಹುದು ಮತ್ತು ದಸರಾ ಹಬ್ಬ ಆಚರಣೆಯಲ್ಲಿ ಯಾವುದೇ ಗೊಂದಲಗಳು ಬೇಡ. ಸರ್ವೇ ಜನೋ ಸುಖಿನೋ ಭವಂತು.
ಡಾ.ಮಹಾಭಲೇಶ್ವರ ಭಟ್,
source whatsapp
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅನ್ನಪೂರ್ಣೇಶ್ವರಿ ದೇವಿ ನಿತ್ಯಹರಿದ್ವರ್ಣ ಬೆಟ್ಟಗಳ ಮಧ್ಯೆ ನೆಲೆಸಿದ್ದಾಳೆ. ಕೈಲಾಸದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ತಾಯಿ ವರ್ಷವಿಡೀ ಭಕ್ತರನ್ನು ಆಕರ್ಷಿಸುತ್ತಾಳೆ. ದೂರದಿಂದ ಬಂದವರಿಗೆ ರಾತ್ರಿ ನಿವಾಸದ ವಸತಿ ಮತ್ತು ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಸನ್ನಿಧಿ ಹಿಂದೂಗಳಿಗೆ ಬಹಳ ಪವಿತ್ರವಾದ ಸ್ಥಳವಾಗಿದೆ. ದೇವಿಯ ಮುಖ್ಯ ದೇವತೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟಿದೆ. ತಾಯಿ ಅನ್ನಪೂರ್ಣೇಶ್ವರಿ ನೆಲೆಸಿರುವ ಈ ಹೊರನಾಡು 831 ಮೀ (2,726 ಅಡಿ) ಎತ್ತರದಲ್ಲಿದೆ.. ದೇವಾಲಯದಲ್ಲಿ ಯಾರ ಬಲ…
ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.
ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್ಪುರ್ ಜಿಲ್ಲೆಯ ಮಜ್ಗಾಂವ್ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ…
ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆನೀಡದೇ ಮಾಗಲು ಸಾಧ್ಯವಾಗುತ್ತದೆ… ಬನ್ನಿ ಹಾಗಲಕಾಯಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಯೋಣ. ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ : ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣವ್ಯಾಧಿ (dyspepsia) ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ…