ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.

ಈ ಪೈಕಿ ಜೀವಸತ್ವ ‘ಎ’ ಹಾಲು, ಬೆಣ್ಣೆ, ಕೆನೆ, ಮೊಟ್ಟೆಯ ಹಳದಿ, ಹಸಿರು ಮತ್ತು ಹಳದಿ/ಕೇಸರಿ ಬಣ್ಣದ ಹಣ್ಣು, ತರಕಾರಿಗಳಾದ ಕ್ಯಾರೆಟ್, ಮಾವು, ಪಪ್ಪಾಯಿ, ಕುಂಬಳಕಾಯಿಯಲ್ಲಿ ಹೇರಳವಾಗಿದ್ದು ನಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ. ಕಣ್ಣಿನ ದೃಷ್ಟಿ ಬಲಗೊಳ್ಳಲು, ಕತ್ತಲು ಮತ್ತು ಬೆಳಕಿನಲ್ಲಿ ದೃಷ್ಟಿಯ ಸಮತೋಲನ ಕಾಪಾಡಲು ಚರ್ಮದ ಮೇಲ್ಮೈ ಆರೋಗ್ಯಕರವಾಗಿ ಕಾಂತಿಯುಕ್ತವಾಗಿರಲು, ಗಂಡಸರಲ್ಲಿ ಆರೋಗ್ಯಪೂರ್ಣ ವೀರ್ಯ ಉತ್ಪಾದನೆಯಾಗಲು ಮತ್ತು ಅನ್ನನಾಳ, ವಾಯುನಾಳ, ಮೂತ್ರನಾಳಗಳ ಆರೋಗ್ಯ ಕಾಪಾಡಲು ‘ಎ’ ಜೀವಸತ್ವ ಮಹತ್ವದ ಪಾತ್ರ ವಹಿಸುತ್ತದೆ.

ಜೀವಸತ್ವ ‘ಇ’ ಸೊಪ್ಪು, ಕಾಯಿ/ಬೀಜ, ತರಕಾರಿ, ಅಡುಗೆ ಎಣ್ಣೆ, ಮೊಟ್ಟೆಯಲ್ಲಿ ಹೇರಳವಾಗಿದೆ. ನಮ್ಮ ದೇಹದಲ್ಲಿ ನಡೆಯುವ ಹಲವಾರು ಪರಿವರ್ತನಾ ಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಜೀವಕಣಗಳಿಗೆ ಹಾನಿಮಾಡಿ ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ‘ಇ’ ಜೀವಸತ್ವ ಎಲ್ಲ ಜೀವಕಣ ಮತ್ತು ಅಂಗಗಳನ್ನು ಈ ವಿಷಕಾರಿ ಅಂಶಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ದೃಢಪಟ್ಟಿದೆ.

ಇನ್ನು ನೀರಿನಲ್ಲಿ ಕರಗುವ ಜೀವಸತ್ವಗಳ ಗುಂಪಿನಲ್ಲಿ ‘ಬಿ’ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ವಿವಿಧ ಜೀವಸತ್ವಗಳಿವೆ. ಈ ಪೈಕಿ ಜೀವಸತ್ವ ‘ಬಿ1’ ಪಾಲಿಷ್ ಮಾಡದ ಅಕ್ಕಿ, ಕಾಳುಗಳಲ್ಲಿ ಯಥೇಚ್ಚವಾಗಿದ್ದು, ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅತಿ ಮುಖ್ಯ ಪಾತ್ರ ವಹಿಸುತ್ತದೆ.

ಇನ್ನು ಮೊಟ್ಟೆ, ಮಾಂಸ, ಕಾಳು ಮತ್ತು ಹಾಲಿನಲ್ಲಿ ಹೇರಳವಾಗಿರುವ ‘ಬಿ2’ ಜೀವಸತ್ವ, ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶ ಶಕ್ತಿಯಾಗಿ ಪರಿರ್ತನೆಗೊಳ್ಳಲು ಅತ್ಯವಶ್ಯ. ಈ ಜೀವಸತ್ವದ ಕೊರತೆಯುಂಟಾದಾಗ ಬಾಯಿ, ತುಟಿ, ನಾಲಗೆಯಲ್ಲಿ ಹುಣ್ಣುಗಳಾಗುತ್ತವೆ ಮತ್ತು ರೋಗಿಗಳು ಚರ್ಮಕ್ಕೆ ಸಬಂಧಪಟ್ಟ ಕಾಯಿಲೆಗಳಿಂದಲೂ ನರಳುತ್ತಾರೆ. ಜೀವಸತ್ವ ‘ಬಿ3’ ಬೇಳೆಕಾಳು, ಧಾನ್ಯಗಳು, ಹಾಲು, ಮಾಂಸದಲ್ಲಿ ಹೇರಳವಾಗಿದ್ದು; ಆಹಾರದಲ್ಲಿನ ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಪ್ರೋಟೀನ್‌ಗಳ ಪರಿವರ್ತನೆಗೆ ಸಹಕಾರಿ. ‘ಬಿ3’ ಜೀವಸತ್ವದ ಕೊರತೆಯಾದಾಗ ಪರಿವರ್ತನಾ ಕಾರ್ಯಗಳಿಗೆ ಧಕ್ಕೆಯುಂಟಾಗಿ, ದೇಹದಲ್ಲಿ ಶಕ್ತಿಯ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಪರಿಣಾಮ ರೋಗಿಗಳು ಚರ್ಮ, ನರಮಂಡಲ ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಕಾಯಿಲೆಗಳಿಂದ ನರಳುತ್ತಾರೆ.

ಬಯೊಟಿನ್ ಜೀವಸತ್ವವು ಕಾಳು, ಬೀಜ ಮತ್ತು ಮೊಟ್ಟೆಯಲ್ಲಿ ಹೇರಳವಾಗಿದ್ದು; ಇದು ಆಹಾರದಲ್ಲಿನ ಕೊಬ್ಬು ಮತ್ತು ಅಂಗಾರಕ ವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅವಶ್ಯ. ಬಯೊಟಿನ್‌ನ ಕೊರತೆಯುಂಟಾದಾಗ ತುಟಿ, ನಾಲಗೆ, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ತಲೆ ದೋರುತ್ತವೆ ಮತ್ತು ರೋಗಿಗಳು ಮಾಂಸಖಂಡಗಳ ನೋವು, ಅಜೀರ್ಣ, ಖಿನ್ನತೆಯಿಂದ ನರಳುತ್ತಾರೆ. ಹಸಿರು ತರಕಾರಿ, ಸೊಪ್ಪು, ಕಾಳುಗಳಲ್ಲಿ ಹೇರಳವಾಗಿರುವ ಫೋಲಿಕ್ ಆಮ್ಲವು ರಕ್ತಕಣಗಳು ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಜೀವಸತ್ವ ಬಿ12 ಮೊಟ್ಟೆ, ಮಾಂಸ ಮತ್ತು ಹಾಲಿನಲ್ಲಿ ಹೇರಳವಾಗಿದ್ದು, ರಕ್ತಕಣ ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೊರತೆಯುಂಟಾದರೆ ರಕ್ತಹೀನತೆ, ಕೈ-ಕಾಲು ಅದರಲ್ಲೂ ಅಂಗೈ-ಪಾದಗಳಲ್ಲಿ ಜೋಮು ಹಿಡಿಯುವುದು, ಸ್ಪರ್ಶಹೀನತೆ, ನರಗಳ ದೌರ್ಬಲ್ಯ, ವಿಪರೀತ ಕಿರಿಕಿರಿಯಿಂದ ರೋಗಿಗಳು ನರಳುತ್ತಾರೆ. ಜೀವಸತ್ವ ‘ಸಿ’ ಟೊಮೆಟೊ, ಬೆಟ್ಟದ ನೆಲ್ಲಿ, ಕಿವಿಹಣ್ಣು, ಇನ್ನಿತರ ಹುಳಿ ಹಣ್ಣು ಮತ್ತು ತರಕಾರಿಗಳಲ್ಲಿ ಹೇರಳವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
Whales: Giants of the Ocean Whales are among the largest and most remarkable animals on Earth. These marine mammals live in oceans around the world, from warm tropical waters to the cold seas surrounding the poles. Life Beneath the Surface Although whales spend their lives in water, they breathe air through blowholes located on top…
ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ. ಅಡುಗೆ ಮನೆಯಲ್ಲೇ ಇದೆ ಆರೋಗ್ಯ. ದೊರೆಯುವ ಔಷಧಿಗಳು ಇಲ್ಲಿವೆ ಓದಿ.
ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
ಲಾಲ್ಬಾಗ್ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…
ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…