ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ. ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735 ರ ಸಮಯದಲ್ಲಿ ಈ ರಚನೆಗಳು ನಿರ್ಮಾಣಗೊಂಡಿವೆ. ಪ್ರಸ್ತುತ, ಲೇಖನವು ಜೈಪುರದಲ್ಲಿರುವ ಜಂತ ಮಂತರ್ ರಚನೆಗಳ ಕುರಿತು ತಿಳಿಸುತ್ತದೆ.
ಜಂತರ್ ಮಂತರ್: ಜೈಸಿಂಗನು ಖಗೋಳ ಶಾಸ್ತ್ರದಲ್ಲಿ ಅತೀವ ಆಸಕ್ತಿವುಳ್ಳವನಾಗಿದ್ದನು ಹಾಗೂ ಈ ರಚನೆಗಳ ಹಿಂದಿರುವ ಮುಖ್ಯ ಉದ್ದೇಶವೆಂದರೆ ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು ಹಾಗೂ ತಾರಾ ಮಂಡಲದಲ್ಲುಂಟಾಗುವ ಹಲವು ಬದಲಾವಣೆಗಳು, ಗ್ರಹಣಗಳ ಕುರಿತು ತಿಳಿಯುವುದು.
ಈ ಒಂದು ಸಂಗ್ರಹಾಲಯದ ಗುಚ್ಛಕ್ಕೆ ಹಿಂದಿನ ಕಾಲದ ತಾರಾಲಯ ಎಂದೂ ಸಹ ಕರೆಯಭುದು. ಒಟ್ಟು 14 ಬಗೆಯ ಪ್ರಮುಖ ಜಾಮಿತಿಯ (ರೇಖಾಗಣಿತ) ರಚನೆಗಳನ್ನು ಈ ವೀಕ್ಷಣಾಲಯದಲ್ಲಿ ಕಾಣಬಹುದಾಗಿದೆ.
ವಿವಿಧ ಭಂಗಿ ಹಾಗೂ ಕೋನಗಳಲ್ಲಿ ರಚಿಸಲಾದ ಈ ರಚನೆಗಳನ್ನು ವಿಶ್ಲೇಷಿಸುವ ಮೂಲಕ ಅಂದಿನ ಕಾಲದಲ್ಲಿ ತಾರೆಗಳ ಭ್ರಮಣೆ, ಗ್ರಹಣ, ಭೂಮಿಯ ಪ್ರದಕ್ಷಿಣೆಗಳ ಕುರಿತು ತಿಳಿಯಲಾಗುತ್ತಿತ್ತು.
ಇಲ್ಲಿನ ಪ್ರತಿಯೊಂದು ರಚನೆಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿದ್ದು, ಯಾವುದೇ ರೀತಿಯ ಚಲನ ವಲನ ಸ್ಥಿತಿಯಲ್ಲಿರದೆ ಸ್ಥಿರವಾಗಿ ಭೂಮಿಯ ಮೇಲೆ ಸ್ಥಾಪಿಸಲ್ಪಟ್ಟಿವೆ.
ಇವುಗಳಲ್ಲಿ ಸಾಮ್ರಾಟ್ ಯಂತ್ರ ಎಂಬ ರಚನೆಯು ಎಲ್ಲಕ್ಕಿಂತ ದೊಡ್ಡದಾಗಿದ್ದು, 90 ಅಡಿಗಳಷ್ಟು ಎತ್ತರವಿದೆ. ಇದರ ಮುಖವು ಜೈಪುರ ನಗರದ ಅಕ್ಷಾಂಶಕ್ಕೆ 27 ಡಿಗ್ರಿಯಷ್ಟು ಕೋನದಲ್ಲಿ ನಿರ್ಮಿಸಲ್ಪಟ್ಟಿದೆ.
ಈ ರಚನೆಯು ದಿನದ ಸಮಯವನ್ನು ತನ್ನ ನೆರಳಿನ ಮೂಲಕ ಕರಾರುವಕ್ಕಾಗಿ ತಿಳಿಸುತ್ತದೆ. ಇದರ ಮೇಲಿರುವ ಚಿಕ್ಕದಾದ ಒಂದು ನಿಲ್ಲುವ ಜಾಗವು ಅಂದಿನ ಸಮಯದಲ್ಲಿ ಗ್ರಹಣ ಹಾಗೂ ಮಳೆಯ ಸೂಚನೆಯನ್ನು ಘೋಷಿಸಲು ಬಳಸಲಾಗುತ್ತಿತ್ತು
ಇಲ್ಲಿನ ಪ್ರತಿಯೊಂದು ರಚನೆಗಳು ಅಳತೆ ಮಾಪಕವನ್ನು ಒಳಗೊಂಡಿವೆ. ಸ್ಥಳೀಯವಾಗಿ ದೊರೆತ ಕಲ್ಲಿನಿಂದಲೆ ನಿರ್ಮಿಸಲಾದ ಈ ರಚನೆಗಳಲ್ಲಿ ಅಳತೆಗಳನ್ನು ಕರಾರುವಕ್ಕಾಗಿ ಮುದ್ರಿಸಲಾಗಿದೆ. 1948 ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು.
ಸಾಮ್ರಾಟ್ ಯಂತ್ರವು (ರಚನೆ) ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ) ಜೈಪುರದ ಸಮಯಕ್ಕೆ ಎರಡು ಕ್ಷಣಗಳ ವ್ಯತ್ಯಾಸ ಹೊಂದಿದ್ದು, ಇದರ ನೆರಳು ಪ್ರತಿ ಸೆಕೇಂಡಿಗೆ ಒಂದು ಮಿ.ಮೀ ಗಳಷ್ಟು ದೂರ ಚಲಿಸುತ್ತದೆ.
ಅಲ್ಲದೆ ಜ್ಯೋತಿಷ್ಯ ಹಾಗೂ ವೇದ ಜ್ಯೋತಿಷ್ಯ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ. ವೇದಗಳಲ್ಲಿ ನಮಗಿರುವ ನಂಬಿಕೆಯನ್ನು ಪ್ರಚುರಪಡಿಸುವಂತಹ ರಚನೆ ಇದಾಗಿದ್ದು ಭವ್ಯ ಭಾರತದ ಪುರಾತನ ಜ್ಞಾನದ ಪರಿಚಯ ಇಲ್ಲಿ ಭೇಟಿ ನೀಡಿದಾಗ ನಮಗುಂಟಾಗುತ್ತದೆ.
ಹೀಗೆ ಉತ್ತರ ಭಾರತದಲ್ಲಿ ಐದು ಜಂತರ್ ಮಂತರ್ ಗಳನ್ನು ನೋಡಬಹುದಾಗಿದ್ದು ಅವುಗಳಲ್ಲಿ ಜೈಪುರ ಹಾಗೂ ದೆಹಲಿಯ ಜಂತರ್ ಮಂತರ್ ಗಳು ಪ್ರಮುಖವಾಗಿವೆ ಮತ್ತು ಪ್ರಸಿದ್ಧಿ ಪಡೆದ ಪ್ರವಾಸಿ ಆಕರ್ಷಣೆಗಳಾಗಿವೆ.
ಜೈಪುರವು ರಾಜಸ್ಥಾನದ ರಾಜಧಾನಿ ಪಟ್ಟಣವಾಗಿದ್ದು, ಭಾರತದ ಬಹುತೇಕ ಎಲ್ಲ ಮಹಾನಗರಗಳಿಂದ ಇಲ್ಲಿಗೆ ಸುಲಭವಾಗಿ ತೆರಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.
ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….
ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.
ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜುಲೈ 1 ರೊಳಗೆ ಜಿಎಸ್ಟಿ ಹೊರತರಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಧರಿಸಿವೆ. ಹಾಗಾದರೆ GST ಎಂದರೇನು? …
ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…
ಫೇಸ್ಬುಕ್ನಲ್ಲಿ ಪ್ರೊಫೈಲ್ ಚಿತ್ರವನ್ನು ನಾವು ಹಾಕುವುದಕ್ಕೆ ಮುಂಚೆ ಹಿಂಜರಿಯುವುದು ಸಹಜ.ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವರು ಪ್ರೊಫೈಲ್ ಫೋಟೋಗಳನ್ನು ದುರುಪಯೋಗ ಮಾಡಿಕೊಳ್ಳುವ ತುಂಬಾ ಘಟನೆಗಳು ನಡೆಯುತ್ತಿರುತ್ತವೆ.