ಸುದ್ದಿ

ಮೋದಿ ಹೆಲಿಕಾಪ್ಟರ್ ಚೆಕ್ ಮಾಡಿ ಅಮಾನತು ಆಗಿದ್ದ ಚುನಾವಣಾ ಅಧಿಕಾರಿ..!ಅಮಾನತು ಆದೇಶ ಏನಾಯ್ತು..?

276

ಒರಿಸ್ಸಾದ ಸಂಬಲ್ ಪುರದಲ್ಲಿ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅಮಾನತು ಆದೇಶವನ್ನು ತಡೆ ಹಿಡಿಯಲಾಗಿದೆ.ಏಪ್ರಿಲ್ 18ರಂದು ಮೊಹಮ್ಮದ್ ಮೊಹ್ಸಿನ್ ಒರಿಸ್ಸಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದರು.

ಎಸ್ಪಿಜಿಯಿಂದ ವಿಶೇಷ ರಕ್ಷಣೆ ಪಡೆದಿರುವವರ ವಾಹನಗಳನ್ನು ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು. 

ಅಮಾನತಿನ ಬಳಿಕ ಮೊಹ್ಸಿನ್ ಚುನಾವಣೆ ಸಂದರ್ಭದಲ್ಲಿ ಎಲ್ಲರ ವಾಹನವನ್ನೂ ತಪಾಸಣೆ ಮಾಡಬೇಕಾಗುತ್ತದೆ ಎಂದು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು. ಕೆಲ ದಿನಗಳ ನಂತರ ಅವರನ್ನು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಯ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. 

ಮೊಹ್ಸಿನ್ ಅವರನ್ನು ಅಮಾನತುಗೊಳಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊಹ್ಸಿನ್ ಅವರು ಕೆಲಸದಲ್ಲಿ ಮುಂದುವರಿಯಬಹುದು. ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಎಸ್ಪಿಜಿ ಭದ್ರತೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರು ಏನು ಬೇಕಾದರೂ ಮಾಡಬಹುದು ಎಂದು ಅರ್ಥವಲ್ಲ ಎಂದು ಹೇಳಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕನ್ನಡಿಗರಿಗೆ ಹೆಚ್ಚು ಉದ್ಯೋಗ ಆದ್ಯತೆ ಸಿಎಂ ಯಡಿಯೂರಪ್ಪ ಭರವಸೆ…!

    ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…

  • ವಿಚಿತ್ರ ಆದರೂ ಸತ್ಯ

    ಮಕ್ಕಳು ಹುಟ್ಟುವಾಗಲೆ ತಲೇಯಲ್ಲಿ ಕೂದಲು ಇರುತ್ತೆ ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮಕ್ಕಳು ಹುಟ್ಟುವಾಗ ಅವರ ತಲೆಯಲ್ಲಿ ತುಂಬಾನೆ ಕೂದಲು ಇರುತ್ತದೆ, ಇಲ್ಲವಾದರೆ ಸ್ವಲ್ಪವೇ ಸ್ವಲ್ಪ ಕೂದಲು ಇರುತ್ತದೆ. ಆದರೆ ಯಾವುದೆ ಮಕ್ಕಳು ಹುಟ್ಟುವಾಗ ಬಕ್ಕ ತಲೆಯೊಂದಿಗೆ ಹುಟ್ಟಿರುವುದನ್ನು ನೋಡಿರೋದು ಕಡಿಮೆ.

  • ಸುದ್ದಿ

    ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂತಹ ಘಟನೆ…!

    ಉತ್ತರ ಪ್ರದೇಶದ ಅಲಿಗಢದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಕೇವಲ 5 ಸಾವಿರಕ್ಕಾಗಿ ಎರಡುವರೆ ವರ್ಷದ ಬಾಲಕಿ ಹತ್ಯೆ ನಡೆದಿದೆ. ಸಾಮಾನ್ಯ ಜನರಿಂದ ಸಿನಿಮಾ ತಾರೆಯರವರೆಗೆ ಎಲ್ಲರೂ ಈ ಘಟನೆ ಕೇಳಿ ದಂಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗ್ತಿದೆ. ಮೇ.31ರಂದು ಅಲಿಗಢದಲ್ಲಿ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಬಾಲಕಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐದು ದಿನಗಳ ನಂತ್ರ ಕಸದ ರಾಶಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ದೇಹ ಕೊಳೆತು ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ.ನಿಮ್ಮ ಸಮಸ್ಯೆ.ಏನೇ…

  • ಸುದ್ದಿ

    ಕಮಲದ ಕಾಳುಗಳನ್ನು ತಿನ್ನುವುದರಿಂದ ಬೇಗ ವಯಸ್ಸಾಗುವುದಿಲ್ಲವಂತೆ, ಇದನ್ನು ಎಗೆ ಉಪಯೋಗಿಸುವುದೆಂದು ತಿಳಿಯಿರಿ,.!

    ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ. ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು. ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ತಮ್ಮ ಸಂಪ್ರದಾಯ ಔಷಧಗಳನ್ನು ತಯಾರಿಸುತ್ತಾರೆ.ಈ ಬೀಜಗಳಿಂದ ಸಾಕಷ್ಟು ಪೋಷಕಗಳು ಲಭ್ಯವಾಗುತ್ತವೆ. ಇವುಗಳಲ್ಲಿ ಪ್ರೋಟೀನ್ ನೊಂದಿಗೆ ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಪರಸ್ ನಂತಹ ಖನಿಜಗಳು, ಐರನ್, ಜಿಂಕ್…

  • ಸುದ್ದಿ

    ಫಿಕ್ಸ್ ಆಯ್ತು ಲೋಕಸಭಾ ಎಲೆಕ್ಷನ್ ದಿನಾಂಕ?ಕರ್ನಾಟಕದಲ್ಲಿ ಯಾವಾಗ ಗೊತ್ತಾ ಎಲೆಕ್ಷನ್?ಈ ಸುದ್ದಿ ನೋಡಿ

    2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ದೆಹಲಿ ವಿಜ್ಞನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ದೇಶಾದ್ಯಂತ ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಏ. ರಂದು 11 ಮೊದಲ ಹಂತದ ಮತದಾನ…