ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ.

ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್‌ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್‌ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಲಾವಿದ ಮಲ್ಲಪ್ಪ ಅವರು ಲೋಕಾಪುರದ ಮೊರಾರ್ಜಿ ಶಾಲೆಯಲ್ಲಿ ಪತ್ನಿ ಲಕ್ಷ್ಮಿ ಮತ್ತು ಮಕ್ಕಳೊಂದಿಗೆ ಕ್ವಾರಂಟೈನ್ ಆಗಿದ್ದರು. ಪತ್ನಿಯನ್ನು ಕರೆದುಕೊಂಡು ಬರಲು ಮಹಾರಾಷ್ಟ್ರದ ರತ್ನಗಿರಿಗೆ ತೆರಳಿ ಮರಳಿ ಬರುವಾಗ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು. ಆಗ ಮಲ್ಲಪ್ಪ ಅವರ ಕೋರಿಕೆಯಂತೆ ಶಿಲ್ಪಕಲೆಯ ಕೇಂದ್ರದಲ್ಲಿ ಕಲ್ಲು ಹಾಗೂ ಉಳಿಯನ್ನು ತಂದುಕೊಟ್ಟಿದ್ದರು.
ಆಗ ಎರಡೆನೆಯ ದಿನದಂದು ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಕ್ವಾರಂಟೈನ್ ಜೂ. 1 ರಂದು ಪೂರ್ಣವಾಗುತ್ತಿದ್ದಂತೆ ಗಣೇಶನ ವಿಗ್ರಹ ರೆಡಿಯಾಗಿತ್ತು. ಅಧಿಕಾರಿಗಳು ಭರವಸೆ ನೀಡಿದಂತೆ ಈ ವಿಗ್ರಹವನ್ನು 10 ಸಾವಿರಕ್ಕೆ ಖರೀದಿಸಿದ್ದಾರೆ. ಈ ವಿಗ್ರಹವನ್ನು ನೋಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ, ಗೌತಮ ಬುದ್ಧನ ಮೂರ್ತಿಗೆ ಆರ್ಡರ್ ನೀಡಿದ್ದಾರೆ.

ಮಲ್ಲಪ್ಪನವರು ಉತ್ತಮ ಕಲಾವಿದ ಎಂದು ನಮಗೆ ಗೊತ್ತಿತ್ತು ಆದ್ದರಿಂದ ಅವರ ಬೇಡಿಕೆಯಂತೆ ಕಲ್ಲು ಮತ್ತು ಉಳಿಯನ್ನು ತಂದುಕೊಟ್ಟಿದ್ದವು ಎಂದಿದ್ದಾರೆ. ಮಲ್ಲಪ್ಪನವರು 14 ದಿನಗಳಲ್ಲಿ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು ಪಂಚಾಯಿತಿಯವರು ಖರೀದಿ ಮಾಡಿದ್ದಾರೆ. ನನ್ನ ಕಲೆಗೆ ಅವಕಾಶ ಹಾಗೂ ಬೆಲೆ ದೊರೆತಿದ್ದಕ್ಕೆ ಖುಷಿಯಾಗಿದೆ. ನನಗೆ ಈಗ ಮತ್ತಷ್ಟು ಬೇಡಿಕೆ ಬಂದಿದೆ ಎನ್ನುತ್ತಾರೆ ಮಲ್ಲಪ್ಪ ಬಡಿಗೇರ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ…
ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ ….
34 ವರ್ಷದ ವ್ಯಕ್ತಿಯೊಬ್ಬ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‍ಗಡದ ರಾಜ್‍ನಂದ್‍ಗಾಂವ್‍ನಲ್ಲಿ ನಡೆದಿದೆ. 22 ವರ್ಷದ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರವಿ ಕನ್ನೌಜೆ ಎಂದು ಗುರುತಿಸಲಾಗಿದ್ದು, ಈತ ಚ್ಚುಯಿಖಾದನ್ ಪಟ್ಟಣದ ಪುರೈನಾ ಗ್ರಾಮದ ಮೂಲದವಾಗಿದ್ದಾನೆ. ಅಷ್ಟೇ ಅಲ್ಲದೇ ಆರೋಪಿ ಯುವತಿಯ ದೂರದ ಸಂಬಂಧಿಯಾಗಿದ್ದು, ಯುವತಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ಪೊಲೀಸ್ ಅಧಿಕಾರಿ ನರೇಂದ್ರ…
ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ. ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್, ತೆಂಗಿನ ತುರಿ – 1ಕಪ್, ಬೆಲ್ಲ – 1 ಕಪ್, ತುಪ್ಪ – 1 ಕಪ್‌ಏಲಕ್ಕಿ ಪುಡಿ –…
ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…