ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ.

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹಗಲು ಮಾಡುವ ನಿದ್ದೆ ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.

ಸ್ವಿಡ್ಜರ್ಲೆಂಡ್ ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು. ಹಾರ್ಟ್ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿದೆ. 2003ರಿಂದ್ಲೇ ಈ ಬಗ್ಗೆ ಸಂಶೋಧನೆ ಆರಂಭವಾಗಿತ್ತು.

ನಿದ್ದೆಯ ಅವಧಿ ಮತ್ತು ಸಮಯ ಎಲ್ಲವನ್ನೂ ಮಾನಿಟರ್ ಮಾಡಲಾಗಿದೆ. ಒಂದಿಡೀ ವಾರದಲ್ಲಿ 3-7 ಬಾರಿ ಹಗಲು ಹೊತ್ತು ನಿದ್ದೆ ಮಾಡಿರುವವರ ಪೈಕಿ ಬಹುತೇಕರು ವೃದ್ಧರು, ಪುರುಷರು, ಧೂಮಪಾನಿಗಳು ಹಾಗೂ ಅತಿಯಾದ ತೂಕ ಹೊಂದಿರುವವರೇ ಆಗಿದ್ದರು.

ಶೇ.58 ಮಂದಿ ಹಗಲು ನಿದ್ದೆ ಮಾಡುತ್ತಿರಲಿಲ್ಲ. 667 ಜನರು ವಾರದಲ್ಲಿ ಒಂದೆರಡು ಬಾರಿ ಹಗಲು ಮಲಗುವ ಅಭ್ಯಾಸ ಇಟ್ಟುಕೊಂಡಿದ್ದರು. 411 ಮಂದಿ 3 ರಿಂದ 5 ಬಾರಿ ಹಗಲಲ್ಲಿ ನಿದ್ದೆ ಹೋಗುತ್ತಿದ್ದರು. ಇವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಹಗಲು ನಿದ್ದೆ ಹೃದಯದ ಆರೋಗ್ಯಕ್ಕೆ ಪೂರಕ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ನೀವೇನಾದ್ರೂ ಆಯಸ್ಸು ಹೆಚ್ಚಿಸಿಕೊಳ್ಳಬೇಕೆಂದುಕೊಂಡಿದ್ದರೆ ವಾರದಲ್ಲಿ ಒಂದೆರಡು ಬಾರಿ ಹಗಲಲ್ಲಿ ನಿದ್ದೆ ಮಾಡಿ. ಇದರಿಂದ ನಿಮ್ಮ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲೆಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯವಾಗಿದೆ. ಮುಚ್ಚಿದ ಸಂರಕ್ಷಣೆಗಳಾದ (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಛೇರಿಗಳು…
ನಟಿ ಶ್ರುತಿ ಹರಿಹರನ್ ಮತ್ತೆ ಮೀಟೂ ಬಗ್ಗೆ ಮಾತನಾಡಿದ್ದು, ನಗರದ ಖಾಸಗಿ ಹೋಟೆಲ್‌ನಲ್ಲಿ ಫೇಸ್‌ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ‘ವಿ ದಿ ವುಮೆನ್’ ಎಂಬ ಸಂವಾದವನ್ನು ಇಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ ಹರಿಹರನ್ ಮೀಟೂ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಮೀಟೂ ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ನಾನು ಯಾವುತ್ತೂ ಮುಜುಗರ ಪಟ್ಟುಕೊಂಡಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಶ್ರುತಿ ಹರಿಹರನ್ ತಿಳಿಸಿದ್ದಾರೆ. ಮೀಟೂ ವಿಚಾರದಿಂದಾಗಿ…
ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ. ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್‌ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್‌ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ…
ಈ ತಿಂಗಳ 31ರಂದು ಸಂಪೂರ್ಣ ಚಂದ್ರಗ್ರಹಣದ ಇದೆ. 150 ವರ್ಷಗಳಿಗೆ ಒಮ್ಮೆ ಮಾತ್ರ ಬರುವ ಈ ಗ್ರಹಣ ತುಂಬಾ ವರ್ಚ್ಯುವಲ್ ಎಂದು ಹೇಳುತ್ತಾರೆ. ಹುಣ್ಣಿಮೆ ದಿನ ಉಂಟಾಗುವ ಚಂದ್ರಗ್ರಹಣ ಸಂದರ್ಭದಲ್ಲಿ ಚಂದ್ರನು ’ಸೂಪರ್ ಬ್ಲೂ ಬ್ಲಡ್ ಮೂನ್’ ಆಗಿ ಕಾಣಿಸುತ್ತಾನೆಂದು, ಇದು ಅತ್ಯಂತ ಅಪರೂಪ ಎನ್ನುತ್ತಿದ್ದಾರೆ ತಜ್ಞರು.
ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ. ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ. ಈ ಅಧ್ಯಯನವನ್ನು ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ 2018 ರಲ್ಲಿ ಮಂಡಿಸಲಾಗಿದೆ. ಆರೋಗ್ಯಕರವಾಗಿದ್ದ ಸುಮಾರು 149…
ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಘೋಷಿಸಿದ್ದಾರೆ. ಕಲಬುರಗಿ ಪಾಲಿಕೆಯ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಭೀಮಾ ನದಿ, ಬೆಣ್ಣೆತೊರಾವಲ್ಲದೆ, ನಗರದ ಕಲ್ಯಾಣಿಗಳು, ಬಾವಿಗಳು ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ…