ಸಿನಿಮಾ

ಬಿಗ್ ಬಾಸ್ ಹೊಸ ಸಂಚಿಕೆಗೆ ಬಾಹುಬಲಿ ನಾಯಕಿ ಅನುಷ್ಕಾ ಶೆಟ್ಟಿ ನಿರೂಪಣೆ..!

63

ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ತೆಲುಗಿನ ಬಿಗ್ ಬಾಸ್ ಸೀಸನ್ -3 ರಿಯಾಲಿಟಿ ಶೋಗೆ ನಿರೂಪಣೆ ಮಾಡುತ್ತಾರೆ ಎಂಬ ಮಾತು ಟಿ-ಟೌನ್‍ನಲ್ಲಿ ಕೇಳಿಬರುತ್ತಿದೆ.

ಬಿಗ್ ಬಾಸ್ ಮೊದಲ ಸೀಸನ್ ನಟ ಜೂ. ಎನ್‍ಟಿಆರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ನಂತರ ಎರಡನೇ ಸೀಸನ್ ನಟ ನಾನಿ ನಿರೂಪಣೆ ಮಾಡಿದ್ದರು. ಈಗ ಮೂರನೇ ಸೀಸನ್‍ಗೆ ಜೂ. ಎನ್‍ಟಿಆರ್ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಆದರೆ ಅವರು ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಈ ಶೋ ನಿರೂಪಣೆ ಮಾಡಲು ನಿರಾಕರಿಸಿದ್ದಾರೆ. 

ಜೂ. ಎನ್‍ಟಿಆರ್ ಅಲ್ಲದೆ ನಾಗಾರ್ಜುನ, ವೆಂಕಟೇಶ್, ರಾಣಾ ದಗ್ಗುಬಾಟಿ ಹಾಗೂ ವಿಜಯ್ ದೇವರಕೊಂಡ ಅವರನ್ನು ಬಿಗ್ ಬಾಸ್ ಸೀಸನ್ -3 ನಿರೂಪಣೆ ಮಾಡಲು ಅಪ್ರೋಚ್ ಮಾಡಲಾಗಿದೆ. ಆದರೆ ಕಾರಣಾಂತರದಿಂದ ನಟರು ಈ ಅವಕಾಶವನ್ನು ತಿರಸ್ಕರಿಸಿದ್ದಾರೆ.

ನಟರು ನಿರೂಪಣೆ ಮಾಡಲು ಒಪ್ಪದ ಕಾರಣ ಖಾಸಗಿ ವಾಹಿನಿ ನಿರೂಪಕಿಯಿಂದ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ಲಾನ್ ಮಾಡಿದೆ. ಹಾಗಾಗಿ ರಿಯಾಲಿಟಿ ಶೋ ತಂಡ ನಟಿ ಅನುಷ್ಕಾ ಶೆಟ್ಟಿ ಅವರಿಗೆ ನಿರೂಪಣೆ ಮಾಡಲು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಅನುಷ್ಕಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಮೊದಲ ಸೀಸನ್ ನಿರೂಪಣೆ ಮಾಡಿದ ಜೂ. ಎನ್‍ಟಿಆರ್ ಅವರು ಒಂದು ಸಂಚಿಕೆಗೆ 50 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಎರಡನೇ ಸೀಸನ್ ನಟ ನಾನಿ ಅವರಿಗೆ ಒಂದು ಸಂಚಿಕೆಗೆ 10 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿತ್ತು ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಾಣಂತಿಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದ ಬಿಬಿಎಂಪಿ,.!

    ಬಿಬಿಎಂಪಿ  ಆಸ್ಪತ್ರೆಗಳಲ್ಲಿ ಬಾಣಂತಿಯರಿಗಾಗಿ  ಹೊಸ ಯೋಜನೆಯನ್ನು  ಜಾರಿಗೆ ತರಬೇಕು ಎಂದು ನಿರ್ಧರಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳಲು  ಮುಖ್ಯ ಕಾರಣವೇನೆಂದರೆ  ಬಾಣಂತಿಯರಿಗಾಗಿ ಉಪಯುಕ್ತ  ಪೌಷ್ಟಿಕಾಂಶ  ಮತ್ತು ಅವರಿಗಾಗಿ ಹಾಲು ಸಹ  ನೀಡಬೇಕು  ಎಂದು ನಿರ್ಧರಿಸಲಾಗಿದೆ.  ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಬಾಣಂತಿಯರಿಗೆ ಎರಡು ಹೊತ್ತು ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿನ ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು, ಪ್ರತಿದಿನ 500 ಎಂ.ಎಲ್. ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಯೋಜನೆಗಾಗಿ ಸುಮಾರು 15 ಲಕ್ಷ ರೂ ಮೀಸಲಿಡಲಾಗಿದೆ.ವರ್ಷಕ್ಕೆ…

  • ಸುದ್ದಿ

    ನೀವು ನಿಂತು ಆಹಾರವನ್ನು ಸೇವನೆ ಮಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೆ ತಿದುಕೊಳ್ಳಬೇಕು.!

    ನಿಂತುಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದುಕೊಳ್ಳಬೇಕು. ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ನಮಗೆ ಕುಳಿತುಕೊಂಡು ಆರಾಮವಾಗಿ ತಿನ್ನಲು ಪುರುಸೊತ್ತೇ ಇಲ್ಲ. ಅದು ಹೋಟೆಲ್ ಗಳಿಗೆ ಹೋದರೂ ಅಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸೆಲ್ಫ್ ಸರ್ವೀಸ್ ಮಾಡಿ, ನಿಂತುಕೊಂಡೇ ತಿನ್ನುವ ವ್ಯವಸ್ಥೆ ಮಾಡಿರುವರು. ಆದರೆ ನಿಂತುಕೊಂಡು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಪ್ರಶ್ನೆ ಮೂಡುವುದು. ಆದರೆ ನೆಲದ ಮೇಲೆ ಕುಳಿತುಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(3 ಜನವರಿ, 2019) ನಿಮ್ಮ ಒರಟು ವರ್ತನೆ ನಿಮ್ಮ ಪತ್ನಿಯೊಂದಿಗಿನ ಸಂಬಂಧವನ್ನು ಹಾಳು ಮಾಡಬಹುದು. ಏನಾದರೂ ಬಾಲಿಶವಾದದ್ದನ್ನುಮಾಡುವ ಮೊದಲು ನಿಮ್ಮ ವರ್ತನೆಯ…

  • ದೇಶ-ವಿದೇಶ

    ಮೋದಿ ಸರಕಾರದ ಮೂರು ವರುಷದ ಸಂಭ್ರಮಾಚರಣೆಗೆ, ರಾಷ್ಟ್ರಕ್ಕೆ ಸಮರ್ಪಿತವಾದ ದೇಶದ ಅತಿ ದೊಡ್ಡದಾದ ಸೇತುವೆ

    ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.

  • ಉಪಯುಕ್ತ ಮಾಹಿತಿ

    ಮೊಡವೆ ಕಲೆಗಳು ಒಂದೇ ದಿನದಲ್ಲಿ ಮಾಯವಾಗಲು ಆಲ್ಮಂಡ್ ನಿಂದ ಈಗೆ ಮಾಡಿದರೆ ಸಾಕು,.!

    ಪ್ರಾಯದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಗುಳ್ಳೆಗಳು ಮೂಡುವುದು ಸಹಜ. ಕೇವಲ ಒಂದು ಅಥವಾ ಎರಡು ಗುಳ್ಳೆಗಳು ಬಂದರೆ ಪರವಾಗಿಲ್ಲ ಎನ್ನಬಹುದು. ಆದರೆ ಇಡೀ ಮುಖದ ತುಂಬಾ ತುಂಬಿಕೊಂಡು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತವೆ. ಮತ್ತು ವಾಸಿಯಾದ ನಂತರವೂ ಸಹ ಅವುಗಳ ಕಲೆಗಳು ಮುಖದ ಚರ್ಮದ ಮೇಲೆ ದೀರ್ಘಕಾಲ ಹಾಗೆಯೇ ಉಳಿದು ಮುಖದ ಮೇಲೆ ಕಪ್ಪು ಬಣ್ಣ ಚುಕ್ಕೆಗಳ ರೀತಿಯಲ್ಲಿ ಮೆತ್ತಿಕೊಂಡಂತೆ ಕಾಣುತ್ತದೆ. ಇಷ್ಟೇ ಅಲ್ಲದೆ ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವವರು ಸಹ ಮುಖದ ಮೇಲೆ…

  • ದೇಶ-ವಿದೇಶ

    ಇತಿಹಾಸ ನಿರ್ಮಿಸಿದ ಇಸ್ರೋ…..

    ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ