ಸಿನಿಮಾ

ತನ್ನ ರಾಜಕೀಯ ಗುರು ಅಂಬರೀಶ್ ರವರನ್ನೇ ಮರೆತ್ರಾ ರಮ್ಯಾ!ಇನ್ನೂ ದರ್ಶನಕ್ಕೆ ರಮ್ಯಾ ಬಾರದಿರುವುದು ಏಕೆ?

345

ಚಂದನವನದ ರೆಬೆಲ್, ಕಲಿಯುಗದ ಕರ್ಣ ಅಂಬರೀಶ್ ರವರಿಗೆ ಭಾರತೀಯ ಚಿತ್ರರಂಗ ಸೇರಿದಂತೆ, ರಾಜಕ್ಕಿಯ ನಾಯಕರು ಹಲವಾರು ದಿಗ್ಗಜರು ಕಂಬನಿ ಮಿಡಿದಿದ್ದಾರೆ.ಅಷ್ಟಲ್ಲದೇ ಕನ್ನಡ ಚಿತ್ರರಂಗದ ಪುನಿತ್, ಯಶ್, ಶಿವಣ್ಣ, ಸುದೀಪ್, ಉಪೇಂದ್ರ ದರ್ಶನ್ ಸೇರಿದಂತೆ ಎಲ್ಲಾ ಟಾಪ್ ಸ್ಟಾರ್ ಗಳು ಅಂತಿಮ ದರ್ಶನ ಮಾಡಿದ್ದಾರೆ. ಇದರ ಜೊತೆಗೆ ರಜನಿಕಾಂತ್ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶರತ್ ಕುಮಾರ್ ಇನ್ನೂ ಹಲವಾರು ಗಣ್ಯ ಮಿತ್ರರು ಅವರ ಅಗಲಿಕೆಗೆ ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದ್ದಾರೆ.

ಇದರ ನಡುವೆ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಬಾರದಿರುವುದು ಅಂಬಿ ಅಭಿಮಾನಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.ತಮ್ಮ ಆಕ್ರೋಶವನ್ನು ಸೋಶಿಯಲ್ ಮಿಡಿಯಾಗಳಲ್ಲಿ ತೋಡಿಕೊಂಡಿದ್ದಾರೆ.ಅಂಬರೀಶ್ ರವರು ರಮ್ಯಾರವರಿಗೆ ರಾಜಕೀಯ ಗುರು ಎಂದೇ ಹೇಳಬಹುದು.ಅವರು ರಮ್ಯಾಗೆ ರಾಜಕೀಯವಾಗಿ ದಾರಿ ತೋರಿಸಿದ್ದಾರೆ. ಹೀಗಾಗಿ ಅಂಬಿ ಅಂತಿಮ ದರ್ಶನಕ್ಕಾದರೂ ರಮ್ಯಾ ಮಂಡ್ಯಕ್ಕೆ ಬರಬೇಕಿತ್ತು.

ಅಲ್ಲದೇ ಓರ್ವ ಮಂಡ್ಯದ ಮಗಳಾಗಿ ರಮ್ಯಾ ಮಂಡ್ಯಕ್ಕೆ ಆಗಮಿಸಬೇಕಿತ್ತು. ಆದರೆ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ವಿರುದ್ಧವೇ ಇನ್ನೂ ದ್ವೇಷ ಸಾಧಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.ಅಂಬಿ ನಿಧನರಾಗಿ ಒಂದು ದಿನಕಳೆದರೂ ಅಂತಿಮ ದರ್ಶನಕ್ಕೆ ರಮ್ಯಾ ಬಂದಿಲ್ಲ. ಘಟಾನುಘಟಿ ನಾಯಕರು, ಸಿನಿಮಾ ತಾರೆಯರು ಬಂದು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ರಮ್ಯಾ ಅವರೆಲ್ಲರಿಗಿಂತ ಬ್ಯುಸಿ ಇದ್ದಾರಾ ಎಂದು ಪ್ರಶ್ನಿಸುವ ಮೂಲಕ ಅಂಬಿ ಅಭಿಮಾನಿಗಳು ರಮ್ಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಅಂಬರೀಶ್ ಮತ್ತು ರಮ್ಯಾರವರು ಮಂಡ್ಯದವರಾಗಿದ್ದಾರೆ.ರಮ್ಯಾ ಚಿತ್ರ ರಂಗ ಮತ್ತು ರಾಜಕೀಯದಲ್ಲಿ ಅತೀ ಎತ್ತರಕ್ಕೆ ಬೆಳೆದಿದ್ದಾರೆ. ಅಸಲಿಗೆ ರಮ್ಯಾ ರಾಜಕೀಯದಲ್ಲಿ ಬೆಳೆಯಲು ಅಂಬರೀಶ್ ರವರೇ ಕಾರಣ. ಹೀಗಾಗಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತಂದಾಗ ರಮ್ಯಾ ಕೂಡ ತವರು ಜಿಲ್ಲೆಗೆ ಬಂದು ಅಂತಿಮ ದರ್ಶನ ಪಡೆಯುತ್ತಾರೆ ಅಂತ ಅಭಿಮಾನಿಗಳು ನಂಬಿದ್ದರು. ಆದರೆ ಅಲ್ಲಿಗೂ ರಮ್ಯಾ ಬರಲಿಲ್ಲ. ಈ ದಿನ ಕಂಠಿರವ ಸ್ಟುಡಿಯೋದಲ್ಲಿ ನಡೆಯಲಿರುವ ಅಂತ್ಯಕ್ರಿಯಗೆ ಬರುತ್ತಾರಯೇ ನೋಡಬೇಕಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ವರ್ಷದ 365 ದಿನ ನಿರಂತರವಾಗಿ ಮಳೆ ಬೀಳುವ ಗ್ರಾಮ..!ತಿಳಿಯಲು ಈ ಲೇಖನ ಓದಿ..

    ಪ್ರತಿ ವರ್ಷವೂ ಮಾನ್ಸೂನ್‌ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.

  • inspirational, ಸುದ್ದಿ

    ಕ್ವಾರಂಟೈನ್‌ ಸಮಯವನ್ನು ವ್ಯರ್ಥ ಮಾಡದೇ, ಗಣೇಶ ವಿಗ್ರಹ ರಚಿಸಿದ ಕಲೆಗಾರ. ಸಿಕ್ಕ ಬೆಲೆಯೆಷ್ಟು ಗೊತ್ತಾ?

    ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ. ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್‌ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್‌ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ…

  • ರಾಜಕೀಯ

    ಚಾಮುಂಡೇಶ್ವರಿ ಕ್ಷೇತ್ರದ ವಿಧಾಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಲು ಇದೇ ಕಾರಣ ಎಂದ ದೇವೇಗೌಡರು..?

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಾಭವಗೊಂಡಿದ್ದರು. ಇದಕ್ಕೆ ಜೆಡಿಎಸ್ ನಾಯಕರೇ ಕಾರಣವೆಂಬುದನ್ನು ಹಲವು ಸಂದರ್ಭಗಳಲ್ಲಿ ಸಿದ್ದರಾಮಯ್ಯ ಪರೋಕ್ಷವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಚಾಮುಂಡೇಶ್ವರಿಯಲ್ಲಿನ ಸಿದ್ದರಾಮಯ್ಯನವರ ಸೋಲಿನ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮಾತನಾಡಿದ್ದಾರೆ. ಹಾಸನದಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯನವರ ಸೋಲಿಗೆ ಜಿ.ಟಿ. ದೇವೇಗೌಡ ಕಾರಣರಲ್ಲ. ಅಲ್ಲದೇ ತಾವೂ ಅಲ್ಲಿಗೆ ಪ್ರಚಾರಕ್ಕೆ ತೆರಳಿರಲಿಲ್ಲ ಎಂದಿದ್ದಾರೆ. ಜನತೆಯ ವಿರೋಧದ ಕಾರಣಕ್ಕೆ ಸಿದ್ದರಾಮಯ್ಯ ಸೋಲಬೇಕಾಯಿತು ಎಂದು ದೇವೇಗೌಡ ವಿಶ್ಲೇಷಿಸಿದ್ದಾರೆ….

  • ಸುದ್ದಿ

    ಭಾರತದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಜಗತ್ತಿನ ಹಲವು ನಗರಗಳು ಇನ್ನು 30 ವರ್ಷಗಳಲ್ಲಿ ಮಾಯವಾಗಲಿದೆ, ಹೇಗೆ ಗೊತ್ತಾ,?

    ಜಾಗತಿಕ ತಾಪಮಾನ ಏರಿಕೆ ಈ ಮೊದಲು ಊಹಿಸಿದ್ದಕ್ಕಿಂತಲೂ ಮೂರು ಪಟ್ಟು ಭೀಕರವಾಗಿರಲಿದೆ. ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ 2050ರ ವೇಳೆಗೆ ವಿಶ್ವದ ಪ್ರಮುಖ ಕರಾವಳಿ ನಗರಗಳು ಭೂಪಟದಿಂದಲೇ ಅಳಿಸಿ ಹೋಗಲಿವೆಯಂತೆ. ದೇಶದ ವಾಣಿಜ್ಯ ನಗರಿ ಮುಂಬಯಿ ಸೇರಿದಂತೆ ಸಮುದ್ರ ಮಟ್ಟದಲ್ಲಿರುವ ವಿಶ್ವದ ಹಲವಾರು ನಗರಗಳು ಜಲಸಮಾಧಿಯಾಗಲಿವೆ. ಅಮೆರಿಕದ ನ್ಯೂ ಜೆರ್ಸಿ ನಗರದ “ಕ್ಲೈಮೇಟ್ ಸೆಂಟ್ರಲ್” ಎಂಬ ವಿಜ್ಞಾನ ಸಂಸ್ಥೆಯು ಈ ಹೊಸ ಸಂಶೋಧನೆ ನಡೆಸಿ ತನ್ನ ವರದಿಯನ್ನು “ನೇಚರ್ ಕಮ್ಯೂನಿಕೇಶನ್ಸ್”ಪತ್ರಿಕೆಯಲ್ಲಿ ಬಿಡುಗಡೆ ಮಾಡಿದೆ. ಸಂಶೋಧಕರು ಈ ಹಿಂದಿನ…

  • ಸುದ್ದಿ

    ದೀಪಾವಳಿ ಹಬ್ಬದಂದು ಕೆಲವು ನಿಷೇಧಿತ ಪ್ರದೇಶದಲ್ಲಿ ಪಟಾಕಿ ಬಳಸುವಂತಿಲ್ಲ…!ಯಾವ ಯಾವ ಸ್ಥಳ ಗೊತ್ತ?

    ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ನಿಟ್ಟಿನಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999 ರ ಅನ್ವಯ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ 125 ಆb (ಂI) ಅಥವಾ 145 ಆb(ಅ) ಠಿಞ ಕ್ಕಿಂತ , ಪಟಾಕಿ ಸಿಡಿಸುವ ಸ್ಥಳದಿಂದ 4 ಮೀಟರ್ ಅಂತರದಲ್ಲಿ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಮಾರಾಟ ಮಾಡುವುದಾಗಲಿ ಮತ್ತು ಉಪಯೋಗಿಸುವುದಾಗಲಿ ನಿಷೇಧಿಸಲ್ಪಟ್ಟಿದೆ. ಆದುದರಿಂದ ಸಾರ್ವಜನಿಕರು…